ಕ್ಷೇತ್ರದ ಕಾರ್ಯಕರ್ತರಿಗೆ, ಮುಖಂಡರಿಗೆ ಸರ್ಕಾರದ ನಾಮನಿರ್ದೇಶನ ನೀಡುವಂತೆ ಮನವಿ
ಶಿಗ್ಗಾವಿ 26: ಪ್ರಥಮ ಬಾರಿಗೆ ಹಾವೇರಿ ಜಿಲ್ಲೆಯ ಪ್ರಗತಿ ಪರೀಶೀಲನಾ ಸಭೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯನವರನ್ನು ಡೊಳ್ಳು ವಾದ್ಯಗಳಿಂದ ಅತ್ಯಂತ ವಿಜೃಂಭಣೆಯಿಂದ ಸ್ವಾಗತಿಸಿದ ಶಿಗ್ಗಾವಿ ಸವಣೂರ ವಿಧಾನಸಭಾ ಮತಕ್ಷೇತ್ರದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದರಾಷ್ಟ್ರೀಯ ಹೆದ್ದಾರಿ ನಾಲ್ಕರ ಪ್ರವಾಸಿ ಮಂದಿರದ ಹತ್ತಿರ ಪಕ್ಷದ ವಿಧಾನಸಭಾಕ್ಷೇತ್ರದ ಸಂಯೋಜಕ ಯಾಶೀರ್ಖಾನ ಪಠಾಣ, ಕೆಪಿಸಿಸಿ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಸಂಸದರಾದ ಮಂಜುನಾಥ್ ಕುನ್ನೂರ್, ಶಿಗ್ಗಾವ್ ಮತ್ತು ಸವಣೂರು ಬ್ಲಾಕ್ ಸಮಿತಿಯ ಅಧ್ಯಕ್ಷರುಗಳು, ಪದಾಧಿಕಾರಿಗಳು, ವಿವಿಧ ಮುಂಚೂಣಿ ಘಟಕಗಳ ಪದಾಧಿಕಾರಿಗಳು ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಜಯವಾಗಲಿ ಸಿದ್ದರಾಮಯ್ಯನವರಿಗೆ ಜಯವಾಗಲಿ ಎಂದು ಹರ್ಷೋದ್ಗಾರ ವ್ಯಕ್ತಪಡಿಸಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಕಳೆದ 20 ವರ್ಷಗಳಿಂದ ಪಕ್ಷದ ಅಭ್ಯರ್ಥಿ ಇಲ್ಲಿ ಸೋಲು ಅನುಭವಿಸಿದರು ಕಾರ್ಯಕರ್ತರು ಗಟ್ಟಿಯಾಗಿ ಸಂಘಟನೆ ಮಾಡುತ್ತಿದ್ದಾರೆ ಇವರಿಗೆ ಹಲವು ಮುಖಂಡರು ಬೆಂಬಲ ಕೊಡುತ್ತಿದ್ದು ಪಕ್ಷಅಧಿಕಾರದಲ್ಲಿದ್ದು ಪಕ್ಷದ ಶಕ್ತಿಯಾಗಿರುವ ಕಾರ್ಯಕರ್ತರಿಗೆ ಪ್ರಮುಖವಾಗಿ ಶಿಗ್ಗಾವಿ ವಿಧಾನಸಭಾ ಮತಕ್ಷೇತ್ರದ ಕಾರ್ಯಕರ್ತರಿಗೆ ನಿಗಮ ಮಂಡಳಿ ಸ್ಥಳೀಯ ಸಂಸ್ಥೆಗಳಲ್ಲಿ ಸರ್ಕಾರದ ನಾಮನಿರ್ದೇಶನಗಳಲ್ಲಿ ಹೆಚ್ಚಿನ ಅವಕಾಶ ಮಾಡಿಕೊಟ್ಟು ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ನೀಡುವಂತೆ ಪಕ್ಷದ ಮುಖಂಡರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಾಲೂಕ ಪಕ್ಷದ ವಕ್ತಾರ ಮಂಜುನಾಥ ಮಣ್ಣಣ್ಣವರ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಹಿಳಾ ಜಿಲ್ಲಾ ಅಧ್ಯಕ್ಷೆ ಪ್ರೇಮ ಪಾಟೀಲ್, ಮುಖಂಡ ನೂರಾಹಮದ್ ಮಳಗಿ, ಪುರಸಭೆಯ ಸದಸ್ಯ ತಹಮಿದಖಾಜಿ, ಗದಿಗೆಪ್ಪ ಬಳ್ಳಾರಿ, ಚಂದ್ರು ಕೊಡ್ಲಿವಾಡ, ಸೇರಿದಂತೆ ನೂರಾರು ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.