ಜಮಖಂಡಿ

ತಾಪಂ ಸಭಾ ಭವನದಲ್ಲಿ ನಡೆದ ಪ್ರಗತಿ ಪರೀಶೀಲನಾ ಸಭೆ

ತಾಪಂ ಸಭಾ ಭವನದಲ್ಲಿ ನಡೆದ ಪ್ರಗತಿ ಪರೀಶೀಲನಾ ಸಭೆ

ಜಮಖಂಡಿ 23: ಕೋಟ್ಯಾಂತರ ಹಣ ಕೊಡುತ್ತೇನೆ ಅಂದರೂ ನೆರಳು ನೀಡುವ ಮರಗಳು ಸಿಗುದಿಲ್ಲ. ತುಂಗಳ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿನ ಗಿಡ ಕಡೆದ ಶಿಕ್ಷಕನ ಮೇಲೆ ಕ್ರಮ ಯಾಕೆ ಜರುಗಿಸಿಲ್ಲ ಎಂದು ಬಿಇಒ ಅವನ್ನು ತರಾಟೆಗೆ ತೆಗೆದಕೊಂಡ ಶಾಸಕ ಜಗದೀಶ ಗುಡಗುಂಟಿ ಖಡಕ್ಕಾಗಿ ಎಚ್ಚರಿಕೆಯನ್ನು ನೀಡಿದರು. 

ನಗರದ ತಾಪಂ ಸಭಾ ಭವನದಲ್ಲಿ ನಡೆದ ಪ್ರಗತಿ ಪರೀಶೀಲನಾ ಸಭೆಯಲ್ಲಿ ಮಾತನಾಡಿದರು.  

ಈ ಕುರಿತು ನಿಮ್ಮ ಗಮನಕ್ಕೆ ಬಂದಿದೆ ಎನ್ರಿ ಎಂದು ಬಿಇಓ ಅವರನ್ನು ಪ್ರಶ್ನಿಸಿದರು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ಮಾಡಿ ಎಂದು ಅರಣ್ಯಾಧಿಕಾರಿಗಳಿಗೆ ಕಡಕ್ಕಾಗಿ ಸೂಚನೆ ನೀಡಿದರು. 

ಕೆಡಿಪಿ ನಾಮನಿರ್ದೇಶನ ಸದಸ್ಯ ಮಲ್ಲಿಕಾರ್ಜುನ ದೇಸಾಯಿ ಪಾಟೀಲ ಮಾತನಾಡಿ, ತುಂಗಳ ಗ್ರಾಮದ ಶಾಲೆಯಲ್ಲಿ ನೆರಳು ನೀಡುತಿದ್ದ ಗಿಡವನ್ನು ಕಡೆದ ಸಿಆರ್‌ಪಿಗೆ ಇಂದು ಮುಖ್ಯಶಿಕ್ಷಕರಾಗಿ ನೇಮಕ ಮಾಡಿದ್ದಾರೆ ಎಂದು ಸಭೆಯಲ್ಲಿ ಗಮನ ಸೆಳೆದರು. 

ಇದಕ್ಕೆ ಬಿಇಓ ಎ.ಕೆ.ಬಸಣ್ಣವರ ಮಾತನಾಡಿ, ಈ ಕುರಿತು ಮುಖ್ಯಶಿಕ್ಷಕರಿಗೆ ನೋಟಿಸ್ ನೀಡಲಾಗಿದೆ. ಆ ಶಾಲೆಗೆ ಮುಖ್ಯಶಿಕ್ಷಕರನ್ನು ಬೇರೆಯವರನ್ನು ನೇಮಿಸಲಾಗುವುದು ಎಂದರು. 

ಸರ್ಕಾರಿ ಆಸ್ಪತ್ರೆಗಳಿಗೆ ಓಷಧಿ ಮಾತ್ರೆಗಳು ಸರಬರಾಜುವಾಗುತ್ತಿವೆ ಎಲ್ಲೂ ಕೊರತೆ ಇಲ್ಲ ಅಂತ ಸರ್ಕಾರ ಹೇಳುತ್ತೆ ಆದರೆ ತಾಲೂಕಿನ ಆಸ್ಪತ್ರೆಗಳಲ್ಲಿ ಓಷಧಿ, ಮಾತ್ರೆಗಳು ಕೊರತೆ ಇದೆ ಎಂದು ನಿವು ಹೇಳುತ್ತಿರಿ ಈ ಕುರಿತು ಸರ್ಕಾರ ಗಮನ ಸೆಳೆಯಲಾಗುವುದು ಎಂದರು. 

ಕಮ್ಯೂನಿಟಿ ಹೆಲ್ತ್‌ ಆಫೀಸರ್ ಗ್ರಾಮೀಣ ಆಸ್ಪತ್ರೆಗಳಲ್ಲಿ ಇರುವುದೇ ಇಲ್ಲ, ಇಲ್ಲಿನ ವೈದ್ಯರು ಬಿಪಿ, ಶುಗರ್, ಜ್ವರ, ಮೈ ಕೈನೋವು ಮಾತ್ರೆಗಳನ್ನು ನೀಡುವದಿಲ್ಲ, ಯಾವಾಗಲೂ ಅವರು ಸಭೆಯಲ್ಲಿ ಇರುತ್ತೆವೆ ಎನ್ನುತ್ತಾರೆ ಇವರಿಂದ ಗ್ರಾಮೀಣ ಜನರಿಗೆ ಸೇವೆಯನ್ನು ಹೇಗೆ ನೀಡುತ್ತಾರೆ ಎಂದು ಕೆಡಿಪಿ ನಾಮನಿರ್ದೇಶನ ಸದಸ್ಯ ಶ್ರೀಶೈಲ ದೇಸಾಯಿ ನೇರವಾಗಿ ಆರೋಪಿಸಿದರು. 

ತಾಲೂಕಿನಲ್ಲಿ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಸಿಗಬೇಕು ಆ ನಿಟ್ಟಿನಲ್ಲಿ ನೀರು ಪರೀಕ್ಷಣಾ ವರದಿಯ ಪ್ರತಿಯನ್ನು ನನಗೆ ನೀಡಿ, ರೋಗಕ್ಕೆ ನೀರು ಮೂಲ ಕಾರಣವಾಗುತ್ತದೆ ಜನತೆಗೆ ಶುದ್ಧ ನೀರು ಸಿಗುವಂತಾಗಬೇಕು, ಇಲ್ಲಿಯವರೆಗೆ ಎಷ್ಟು ಬೊರವೆಲ್, ಬಾವಿಗಳ ನೀರನ್ನು ಪರೀಕ್ಷಿಸಿದ್ದಿರಿ ಅದರಲ್ಲಿ ಬಳಕೆಗೆ ಯೋಗ್ಯವಾಗಿವೆ ಎಂಬುದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿ ಎಂದು ತಾಲೂಕಾ ಆರೋಗ್ಯಾಧಿಕಾರಿಗಳಿಗೆ ಶಾಸಕ ಸೂಚನೆ ನೀಡಿದರು. 

ಶಾಲೆಯಲ್ಲಿನ ಮಕ್ಕಳ ಆರೋಗ್ಯ ಬಹಳ ಮುಖ್ಯವಾಗಿರುತ್ತದೆ. ರಾಷ್ಟ್ರೀಯ ಮಕ್ಕಳ ಆರೋಗ್ಯ ತಪಾಸಣೆ ಬಹಳ ಮಹತ್ವದ್ದಾಗಿದೆ ಎಂದರು. 

2023-24ನೇ ಸಾಲಿನ ಮುಖ್ಯಮಂತ್ರಿ ಗ್ರಾಮಿಣ ರಸ್ತೆಗಳ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸಿ 40ರಿಂದ 45 ದಿನಗಳಲ್ಲಿ ಪೂರ್ಣಗೊಳೀಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿ ಎಂದು ಜಿಪಂ ಅಧಿಕಾರಿಗಳಿಗೆ ಕಡಕ್ಕಾಗಿ ಹೇಳಿದರು. 

ಶಾಲೆಗಳ ಕೊಠಡಿ ದುರಸ್ಥಿ ಸೇರಿದಂತೆ ಶಾಲೆಗಳಲ್ಲಿನ ಕಾಮಗಾರಿಗಳ ಬಗ್ಗೆ ಬಿಇಓ ಅವರ ಗಮನಕ್ಕೆ ತನ್ನಿ ಎಂದು ಸೂಚನೆ ನೀಡಿದರು. 

ಎರಡು ದಿನ ನಡೆದ ಪ್ರಗತಿ ಪರೀಶೀಲನೆ ಸಭೆ: 

ತಾಲೂಕಿನಲ್ಲಿನ 45 ಇಲಾಖೆಗಳ ಪ್ರತಿ ಪರೀಶೀಲನೆಗೆ ಮಹತ್ವದ ವಿಷಯಗಳು ಸರಿಯಾಗಿ ಚರ್ಚೆಯಾಗಬೇಕು ಆ ನಿಟ್ಟಿನಲ್ಲಿ ಸಿಇಓ ಅವರ ಜೊತೆ ಮಾತನಾಡಿದ್ದೆನೆ. ಎರಡು ದಿನಗಳ ಕಾಲ ಪ್ರಗತಿ ಪರೀಶೀಲನೆ ನಡೆಸಲಾಗುವುದು ಎಂದು ತಿಳಿಸಿದರು. 

ವೇದಿಕೆಯಲ್ಲಿ ಆಡಳಿತಾಧಿಕಾರಿ ಹಣಮಂತ ದಾಸರ, ತಾಪಂ ಇಓ ಸಂಜು ಜುನ್ನೂರ, ಪೌರಾಯುಕ್ತೆ ಲಕ್ಷ್ಮೀ ಅಷ್ಟಗಿ ಇದ್ದರು. 


ಸುದ್ದಿ ಓದಿ