ರಾಣೆಬೆನ್ನೂರ

ಶಾಲಾ ಮಕ್ಕಳಿಗೆ ಸಂತಸದಿಂದ ಸ್ವಾಗತಿಸುವ ಕಾರ್ಯಕ್ರಮ

ಶಾಲಾ ಮಕ್ಕಳಿಗೆ ಸಂತಸದಿಂದ ಸ್ವಾಗತಿಸುವ ಕಾರ್ಯಕ್ರಮ

ರಾಣೇಬೆನ್ನೂರು 01:  2024-25 ಶೈಕ್ಷಣಿಕ ಬಲವರ್ಧನೆ ವರ್ಷದ  ಪ್ರಾರಂಭೋತ್ಸವನ್ನು ಶಾಲಾ ಮಕ್ಕಳಿಗೆ ಅತ್ಯಂತ ಸಂತಸದಿಂದ ಗುಲಾಬಿ ಹೂವು ನೀಡಿ ಸಿಹಿ ಹಂಚಿ ವಿನೂತನವಾಗಿ ಸ್ವಾಗತಿಸುವ ಕಾರ್ಯಕ್ರಮ ಮಾಡಲಾಯಿತು. ಮಾರುತಿ ನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ 17ರಲ್ಲಿ ಈ ಕಾರ್ಯಕ್ರಮ ನಡೆಯಿತು.   

ಶಾಲಾ ಮುಖ್ಯೋಪಾಧ್ಯಾಯ, ಬಿ.ಪಿ. ಶಿಡೇನೂರ ಶಾಲಾ ಮಕ್ಕಳಿಗೆ ಸರ್ಕಾರ ಇಲಾಖೆ ಉಚಿತವಾಗಿ ನೀಡಿರುವ ಸಮವಸ್ತ್ರ ಪಠ್ಯಪುಸ್ತಕಗಳನ್ನು ವಿತರಣೆ ಮಾಡಿ ಶಾಲಾ ಮಕ್ಕಳು ಪ್ರೋತ್ಸಾಹದಾಯಕ   ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಕಲಿಕಾ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಕರೆ ನೀಡಿದರು.   

ಕಾರ್ಯಕ್ರಮದಲ್ಲಿ ತಿಮ್ಮಣ್ಣ ಭೈರಾವರ, ಶಿವಣ್ಣ ವಿಭೂತಿ, ಶಂಬಣ್ಣ ಗುಡ್ಡಣ್ಣನವರ, ನಿಂಗಣ್ಣ ವಿಭೂತಿ, ಕೆ ಎಸ್ ಮ್ಯಾಗೇರಿ, ರಮೇಶ ಚಲವಾದಿ, ವನಜಾಕ್ಷಿ ಪಾಟೀಲ್, ಪ್ರತಿಭಾ ಮೈಲಾರ ಕಳ್ಳಿ ಮಠ, ಶ್ವೇತಾ ಎಚ್ ವಿ, ಕಮಲಮ್ಮ ಅಂಕದ, ಶೋಭಾ ದೊಡ್ಡ ತಿಮ್ಮಣ್ಣನವರ, ಮಂಜುಳಾ ಪಾಟೀಲ ಸೇರಿದಂತೆ ಪಾಲಕರು, ಎಸ್‌ಡಿಎಂಸಿ ಪದಾಧಿಕಾರಿಗಳು, ಸ್ಥಳೀಯರು ಭಾಗವಹಿಸಿದ್ದರು. 


ಸುದ್ದಿ ಓದಿ