ಶಿಗ್ಗಾವ್

ಬ್ಲಾಕ್ ಕಾಂಗ್ರೆಸ್ ವತಿಯಿಂದ ಮುಂಬರುವ ಲೋಕಸಭೆ ಚುನಾವಣೆ ಪೂರ್ವಭಾವಿ ಸಭೆ

ಬ್ಲಾಕ್ ಕಾಂಗ್ರೆಸ್ ವತಿಯಿಂದ ಮುಂಬರುವ ಲೋಕಸಭೆ ಚುನಾವಣೆ ಪೂರ್ವಭಾವಿ ಸಭೆ

ಶಿಗ್ಗಾವಿ 27: ಶಿಗ್ಗಾಂವ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮುಂಬರುವ ಲೋಕಸಭೆ ಚುನಾವಣೆ ಬಗ್ಗೆ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು. ಸಭೆಯ ನೇತೃತ್ವ ವಹಿಸಿದ  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಭುಲಿಂಗಪ್ಪ ಕ ಆಜೂರ ಮಾತನಾಡಿ ಸಂಘಟನೆ ಹಾಗೂ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಕಾಂಗ್ರೆಸ್ ಸರ್ಕಾರ ಇರುವದರಿಂದ ಈ ಭಾರಿ ಲೋಕಸಭೆ ಚುನಾವಣೆಯನ್ನು ನಮ್ಮ ಕ್ಷೇತ್ರದಲ್ಲಿ ಅಭ್ಯರ್ಥಿ ಯಾರೇ ಇದ್ದರೂ ಗೆಲ್ಲುವುದು ಕಚಿತ, ತಾಲೂಕು ಮಟ್ಟದಲ್ಲಿ ಗ್ರಾಮ ಮಟ್ಟದಲ್ಲಿ ಬೂತ್ ಮಟ್ಟದಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡಬೇಕು ಆ ಕಾರಣ ಪಕ್ಷದ ಕಾರ್ಯಕರ್ತರು ಮುಂಚೋಣಿಯಲ್ಲಿ ಕೆಲಸ ಮಾಡಬೇಕೆಂದು ಹೇಳಿದರು. 

ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳು ಮಾತನಾಡಿದರು, ಗುರುನಗೌಡ ಪಾಟೀಲ, ಮಲ್ಲಿಕಾರ್ಜುನಗೌಡ ಪಾಟೀಲ್, ಶಿವಾನಂದ ಬಾಗೂರು, ಹನುಮಂತಪ್ಪ ಬಂಡಿವಡ್ಡರ, ಆಂಜನೇಯ ಬಂಕಾಪುರ, ಜಿ ಮನಕಟ್ಟಿ, ಮಂಜುನಾಥ ಯಲಿಗಾರ, ಮಹೇಶ್ ವಾಲ್ಮೀಕಿ, ಯೂನಸ ಸವನೂರ್, ಮಲ್ಲಿಕ್ ಪಟೇಲ್, ಅನಿಲ್ ಭದ್ರಪೂರ, ಮಾಂತೇಶ ಗಿರೆಪ್ಪಗೌಡರ, ತಿರಕಪ್ಪ ಅಡ್ಡೆರಿ, ಇನ್ನು ಹಲವಾರು ಮುಖಂಡರು ಮುಂಚೋನಿ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ