ಖಾಸಗಿ ಫೈನಾನ್ಸ್ಗಳ ಕಿರುಕುಳದಿಂದ ಅಮಾಯಕರಿಗೆ ನ್ಯಾಯ ಒದಗಿಸಲು ಮನವಿ
ಅಡವಿಟ್ಟ ಬಂಗಾರವನ್ನು ಟನ್ ಗಳ ಲೆಕ್ಕದಲ್ಲಿ ಹರಾಜು ನೆಪ ಹೇಳಿ ಮುಟ್ಟುಗೋಲು ಹಾಕಿಕೊಂಡ ಮತ್ತು ಪ್ಲಾಟ ಇಂಟ್ರಸ್ಟ ದರದಲ್ಲಿ ಹೋಮ್ಲೋನ್ ಮಾಡಿ, ಕಿರುಕುಳ ನೀಡಿ, ಆತ್ಮಹತ್ಯೆಗೆ ಕಾರಣವಾಗುತ್ತಿರುವ ಖಾಸಗಿ ಫೈನಾನ್ಸ್ ಗಳ ಭಯಂಕರ- ಬೀಬತ್ಸ- ಬರ್ಬರ ಕೃತ್ಯಗಳ ಬಗ್ಗೆ ಸದನದಲ್ಲಿ ಚರ್ಚಿಸಿ ತನಖೆ ನಡೆಸಿ ಅಮಾಯಕರಿಗೆ ನ್ಯಾಯ ಒದಗಿಸಲು ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರಿಗೆ ಮನವಿ
ರಾಣೇಬೆನ್ನೂರು 13: ರಾಜ್ಯಾದ್ಯಂತ ರೈತರ ಮತ್ತು ಮಧ್ಯಮ ವರ್ಗದವರ, ಕೂಲಿಕಾರರ ಅಡಚಣೆಗಾಗಿ ಬಂಗಾರದ ಒಡವೆಗಳನ್ನು ಅಡವಿಟ್ಟುಕೊಂಡಿದ್ದ ಟನ್ ಗಳ ಲೆಕ್ಕೆದ ಬಂಗಾರದ ಒಡೆವೆಗಳನ್ನು ಹರಾಜು ಹಾಕಿ ಮುಟ್ಟುಗೋಲು ಹಾಕಿಕೊಂಡಿದ್ದೆವೆಂದು ಹೇಳಿ ಮುಗ್ದರಿಗೆ ವಂಚನೆ ಮಾಡಿದ್ದ ಮುತ್ತೊಟ್, ಮಣಿಪುರಂ, ಐ.ಎಫ್. ಎಲ್, ಕೋಶಮಟ್ಟಂ, ಕೆ.ಎಲ್.ಎಂ. ಮುಂತಾದ ಖಾಸಗಿ ಕಂಪನಿಗಳು ಗೋಲ್ಡ್ಲೋನ್ ನೆಪದಲ್ಲಿ ರಾಜ್ಯದ ಸಾಕಷ್ಟು ಜನರನ್ನು ವಂಚನೆ ಮಾಡಿರುವ ಪ್ರಕರಣ ಈ ಹಿಂದೆ ಸದನದಲ್ಲಿ ಚರ್ಚೆಯಾಗಿದ್ದು ಇರುತ್ತದೆ. ಕೂಡಲೇ ಸರಕಾರ ಆಯಾ ಜಿಲ್ಲೆಯ ಡಿ.ಸಿ ಮತ್ತು ಎಸ್.ಪಿ ನೇತೃತ್ವದಲ್ಲಿ ಒಂದು ವಿಶೇಷ ತಂಡ ರಚಿಸಿ ತನಿಖೆ ನಡೆಸಿ ಮೋಸ ಹೋಗಿರುವ ಅಮಾಯಕರಿಗೆ ಅವರವರ ಬಂಗಾರದ ಒಡವೆಗಳನ್ನು ಮರಳಿಸುವಂತೆ ಮತ್ತು ಪ್ಲಾಟ ಬಡ್ಡಿ ದರದ್ಲಿ ಹೋಮ್ಲೋನ್ ನೀಡಿ ಸಾಕಷ್ಟು ವಂಚನೆ ಮಾಡಿರುವ ಖಾಸಗಿ ಪೈನಾನ್ಸ್ಗಳಿಂದ ಮೋಸ ಹೋಗಿರುವ ಅಮಾಯಕರಿಗೆ ನ್ಯಾಯ ಒದಗಿಸುವ ಬಗ್ಗೆ ಸದನದಲ್ಲಿ ಚರ್ಚೆ ನೆಡೆಸಿ ಸೂಕ್ತ ಕಾನೂನು ರಚಿಸಬೇಕೆಂದು ರೈತ ಮುಖಂಡ, ಕ.ರಾ.ರೈ. ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಎಫ್. ಪಾಟೀಲ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಿಗೆ ಈ ಬಗ್ಗೆ ಮೇಲ್ ಸಂದೇಶ ಕಳುಹಿಸಿರುವ ಅವರು ಫಿರಾಮಿಲ್ ಕ್ಯಾಪಿಟಲ್ ಆಂಡ ಹೌಸಿಂಗ್ ಫೈನಾನ್ಸ್, ಡಿ.ಎಚ್.ಎಫ್.ಎಲ್, ವರ್ತನಾ ಫೈನಾನ್ಸ್, ತಿರುಮಣಿ ಮತ್ತು ಪೈವ್ಸ್ಟಾರ್ ಫೈನಾನ್ಸ್ಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಗ್ರಾಮೀಣ ಭಾಗದಲ್ಲಿ ರಾಷ್ಟ್ರೀಕೃತ ಬ್ಯಾಂಕಗಳು ಹೌಸಿಂಗ್ ಲೋನ್ ಕೊಡದಿರುವುದನ್ನೇ ಬಂಡವಾಡ ಮಾಡಿಕೊಂಡ ಈ ಖಾಸಗಿ ಫೈನಾನ್ಸ್ಗಳು ಗ್ರಾಮೀಣ ಭಾಗಗಳಿಗೆ ದಾಂಗುಡಿ ಇಟ್ಟು ಆರ್ಥಿಕ ಸಂಕಷ್ಟದಲ್ಲಿರುವ ಮುಗ್ದ ಜನರ ಪರಿಸ್ಥಿತಿಯನ್ನೇ ದುರ್ಲಾಭ ಪಡೆದು ಕಾನೂನು ಬದ್ಧವಾಗಿ ಸಬ್ರಿಜಿಸ್ಟಾರ್ ಕಛೇರಿಯಲ್ಲಿ ಆಸ್ತಿ ನೋಂದು ಮಾಡಿಕೊಂಡು ಸಾಲ ನೀಡುವ ಈ ಪೈನಾನ್ಸ್ಗಳು ಹೇಳುವ ಬಡ್ಡಿದರವನ್ನು ಮುಲಾಜಿಲ್ಲದೆ ವಸೂಲಿ ಮಾಡುತ್ತಾರೆ, ಮಾನ ಮರ್ಯಾದೆಗೆ ಅಂಜಿ ಎಷ್ಟು ಜನ ಇವರಿಂದ ಸಾಲ ಪಡೆದವರು ವಿಪರೀತ ಬಡ್ಡಿದರದ ಈ ಸಾಲವನ್ನು ತಿರಸ್ಕಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ರೈತ ಆತ್ಮಹತ್ಯಾ ಪ್ರಕರಣಗಳಿಗೆ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿರುವ ಕೇವಲ ಕೃಷಿ ಸಾಲವಷ್ಟೆ ಕಾರಣವಲ್ಲ, ಇಂಥ ಮೀಟರ್ ಬಡ್ಡಿದರದ ಫೈನಾನ್ಸ್ಗಳೂ ಕೂಡಾ ಕಾರಣವಾಗಿವೆ, ಆಗುತ್ತಿರುವ ಅನ್ಯಾಯದ ಬಗ್ಗೆ ಬಲ್ಲವರು ಇವರನ್ನು ಪ್ರಶ್ನೆ ಮಾಡಿದರೆ ಗೋಲ್ಡ್ಲೋನ್ ಕೊಟ್ಟ ಫೈನಾನ್ಸ್ನವರು ನಾವು ಈ ಬಗ್ಗೆ ಬಂಗಾರದ ಒಡವೆಯ ಸಾಲ ಪಡೆದು ಕಂತು ಕಟ್ಟಲಾರದವರ ಗಮನಕ್ಕೆ ತರಲು ಪತ್ರಿಕೆಯಲ್ಲಿ ಪ್ರಕರಣೆ ನೀಡಿದ್ದೇವೆ ಎಂದು ಹೇಳಿದರೆ, ಇನ್ನು ಹೌಸಿಂಗ್ ಲೋನ್ ಕೊಟ್ಟ ಈ ಮೀಟರ್ ಬಡ್ಡಿ ದರದ ಪೈನಾನ್ಸ್ ನವರು ಹೇಳುವುದೇನೆಂದರೆ ಸಾಲ ಪಡೆದಿರುವುವರು ಕಾನೂನು ಬದ್ಧವಾಗಿ ನಮಗೆ ಸಬ್ರಿಜಿಸ್ಟಾರ್ ಕಛೇರಿಯಲ್ಲಿ ಅವರ ಆಸ್ತಿ ನೋಂದ ಮಾಡಿಕೊಟ್ಟಿದ್ದಾರೆ ಅಂತಾ ಕಾನೂನು ಕಾನೂನು ರೀತಿ ಮಾತನಾಡುತ್ತಾರೆ. ಆದರೆ ಗ್ರಾಮೀಣ ಭಾಗದ ಮುಗ್ಧ ಜನರಿಗೆ ಇವರು ಪತ್ರಿಕೆಯ್ಲಿ ಪ್ರಕಟಣೆ ನೀಡಿರುವ ವಿಚಾರ ಇವರು ನೋಂದ ಮಾಡಿಕೊಳ್ಳುವ ವಿಚಾರವನ್ನು ತಿಳಿದುಕೊಳ್ಳುವಷ್ಟು ಬುದ್ದಿವಂತಿಕೆ ಇರುವುದಿಲ್ಲ, ಮೇಲಾಗಿ ಇವುಗಳು ತಮಿಳುನಾಡು, ಕೇರಳ, ಆಂದ್ರ ಪ್ರದೇಶದ ರಾಜ್ಯಗಳ ಪೈನಾನ್ಸ್ಗಳಾಗಿದ್ದು, ನಮ್ಮ ರಾಜ್ಯದಲಿ ಬಿಗಿಯಾದ ಕಾನೂನು ಇಲ್ಲವೆಂದು ಈ ರೀತಿ ನಮ್ಮ ರಾಜ್ಯಕ್ಕೆ ಲಗ್ಗೆ ಇಟ್ಟಿದ್ದಾರೆ. ರೈತ ಆತ್ಮಹತ್ಯಾ ಪ್ರಕರಣಗಳು, ಸಾಮಾನ್ಯ ಆತ್ಮ ಹತ್ಯಾ ಪ್ರಕರಣಗಳು ನಮ್ಮ ರಾಜ್ಯದಲ್ಲಿಯೇ ಹೆಚ್ಚು ಸಂಖ್ಯೆಯಲ್ಲಿ ಜರುಗಲು ಇಂಥ ವಾತಾವರಣದಲ್ಲಿ ಕೂಡಾ ಕಾರಣವಾಗಿದೆ. ಕೆಲವು ನೋಂದವರು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಹತ್ತಿರ ಫಿರ್ಯಾದಿ ನೀಡಿದರೆ, ನೋಂದವರಿಗೆ ರಕ್ಷಣೆ ನೀಡಲು ಜಿಲ್ಲಾಡಳಿತ ನಿರ್ಲಕ್ಯ ಮಾಡುತ್ತಿರುವುದು ಕೂಡ ಇಂಥ ಪೈನಾನ್ಸ್ಗಳು ಮನಬಂದಂತೆ ವರ್ತಿಸುವುದಕ್ಕೆ ಕಾರಣವಾಗಿದೆ.
ಕಾರಣ ಬೆಳಗಾಂ ನಲ್ಲಿ ನಡೆಯುತ್ತಿರುವ ಈ ಚಳಿಗಾಲದ ಅಧಿವೇಶದಲ್ಲೇ ಈ ಬಗ್ಗೆ ಚರ್ಚಿಸಿ ಸೂಕ್ತ ಕಾನೂನು ರಚಿಸಿ, ತನಿಖಾ ತಂಡ ರಚಿಸಿ ಉತ್ತರ ಕರ್ನಾಟಕದ ಭಾಗದಲ್ಲೆ ಅತಿ ಹೆಚ್ಚು ಅನ್ಯಾಯ, ಅಕ್ರಮ ಈ ಫೈನಾನ್ಸ್ಗಳಿಂದ ನಡೆಯುತ್ತಿದ್ದು ನಮ್ಮ ಭಾಗದಲ್ಲಿ ನಡೆಯುತ್ತಿರ ಅಧಿವೇಶದಲ್ಲೆ ನಮ್ಮ ಜನರಿಗೆ ಈ ಬಗ್ಗೆ ಕಾನೂನು ರಚಿಸಿ ನ್ಯಾಯ ಒದಗಿಸಬೇಕೆಂದು ನೊಂದ ಗ್ರಾಹಕರ ಪರವಾಗಿ ರವೀಂದ್ರಗೌಡ ಎಫ್. ಪಾಟೀಲ ಸರಕಾರ ಮತ್ತು ವಿರೋಧ ಪಕ್ಷದ ನಾಯಕರಿಗೆ ಮನವಿ ಸಲ್ಲಿಸಿದ್ದಾರೆ.