ರಾಣೆಬೆನ್ನೂರ

ಬಸವರಾಜ ಭಜಂತ್ರಿ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ

ಬಸವರಾಜ ಭಜಂತ್ರಿ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ

ರಾಣೇಬೆನ್ನೂರು  26: ಕಲೆ ಮತ್ತು ಕಲಾವಿದರು ಭಾರತೀಯ ಸಂಸ್ಕೃತಿ ಹರಿಕಾರರು, ಕಲಾವಿದರಿದ್ದರೆ ಕಲೆ ಉಳಿದು ಬೆಳೆಯಲು ಸಾಧ್ಯ ಎಂದು ಶ್ರೀ ನಾರಾಯಣಸ್ವಾಮಿ ಸೇವಾ ಸಮಿತಿಯ ಕಾರ್ಯದರ್ಶಿ ರಮೇಶ್ ಈಳಗೇರ ಹೇಳಿದರು. ಅವರು ತಾಲೂಕಿನ ಹಳೆ ಹೊನ್ನತ್ತಿ ಗ್ರಾಮದ ಶ್ರೀ ನಾರಾಯಣ ಸ್ವಾಮಿ ಸೇವಾ ಸಮಿತಿ ಸಹಯೋಗದಲ್ಲಿ, ಶ್ರೀ ಗಣೇಶೋತ್ಸವದ ಅಂಗವಾಗಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಯೋಜಿತ ಸುಗಮ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  

ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ ನಮ್ಮ ಭಾರತೀಯರ ಮೇಲೆ ಅಗಾಧ ಪರಿಣಾಮ ಬೀರುತ್ತಲ್ಲಿದೇ ಇಂತಹ ಸಂದರ್ಭದಲ್ಲಿ ನಮ್ಮತನವನ್ನು ನಾವು ಉಳಿಸಿ ಬೆಳೆಸಿಕೊಳ್ಳಬೇಕಾದರೇ, ನೈಜ ಸಂಸ್ಕೃತಿ ಪರಂಪರೆಯ ಕಲೆ ಮತ್ತು ಕಲಾವಿದರನ್ನು ಬೆಳೆಸಬೇಕಾಗಿದೆ  ಎಂದರು. ಗ್ರಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ಹುಬ್ಬಳ್ಳಿ, ಹಾಗೂ ಸೇವಾ ಸಮಿತಿ ಅಧ್ಯಕ್ಷ ಅರುಣ ಕುಮಾರ್ ಮುದ್ರಿ  ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ, ಸೇವಾ ಸಮಿತಿಯ ಅಧ್ಯಕ್ಷ ನಾಗರಾಜ ಗುಡಗೊರ, ಖಜಾಂಚಿ ಕರಬಸಪ್ಪ ಹರವಿ,  ಚಿತ್ರ​‍್ಪ ಹುಬ್ಬಳ್ಳಿ, ಗ್ರಾಪಂ ಮಾಜಿ ಅಧ್ಯಕ್ಷ ಕರಬಸಪ್ಪ ಬೆನ್ನೂರು, ಸದಸ್ಯ ಪುಟ್ಟಪ್ಪ ಭಜಂತ್ರಿ, ರುದ್ರ​‍್ಪ ಬಣಕಾರ್, ಪ್ರವೀಣ ಹುಬ್ಬಳ್ಳಿ, ಸುರೇಶ್ ಭಜಂತ್ರಿ, ಚಿತ್ರ​‍್ಪ ತಿಮ್ಮೇನಹಳ್ಳಿ ಸೇರಿದಂತೆ ಗ್ರಾಮದ ಅನೇಕ ಗಣ್ಯರು ಸೇವಾ ಸಮಿತಿಯ ಸದಸ್ಯರು, ಸುಗಮ ಸಂಗೀತ ಕಲಾತಂಡದ ವಾದ್ಯಗಾರರು ಮತ್ತಿತರರು ಉಪಸ್ಥಿತರಿದ್ದರು. ಕಲಾವಿದ ಬಸವರಾಜ ಭಜಂತ್ರಿ ಮತ್ತು ತಂಡದವರು ಸಾದರಪಡಿಸಿದ ಸುಗಮ ಸಂಗೀತ ಕಾರ್ಯಕ್ರಮವು ಗ್ರಾಮದ ಜನರ ಗಮನ ಸೆಳೆಯಿತು. 


ಸುದ್ದಿ ಓದಿ