ಮಹಿಳಾ ಜೆಡಿಎಸ್ ಘಟಕದ ಕಾರ್ಯಕರ್ತೆಯರ ಸಭೆ
ಇಂಡಿ: ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಗರ್ಭಿಣಿ ಮಹಿಳೆಯರಿಗೆ ಮಾಸಿಕ 6 ಸಾವಿರ ರೂ.ಗಳನ್ನು ನೀಡುವುದಾಗಿ ಪ್ರಣಾಳಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಂಕಲ್ಪ ಮಾಡಿದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಪದ್ಮಾವತಿ ಬಸವರಾಜ ಪಾಟೀಲ ಹೇಳಿದರು.
ಭಾನುವಾರ ಪಟ್ಟಣದ 13 ನೇ ವಾರ್ಡನಲ್ಲಿ ಮಹಿಳಾ ಜೆಡಿಎಸ್ ಘಟಕದ ಕಾರ್ಯಕರ್ತೆಯರ ಸಭೆ ಉದ್ಘಾಟಿಸಿ ಮಾತನಾಡಿದ ಅವರು.
ಜೆಡಿಎಸ್ ಪಕ್ಷ ಮಹಿಳೆಯರಿಗೂ ಸಮಾನವಾಗಿ ಆಧ್ಯತೆ ನೀಡುತ್ತದೆ. ಮಹಿಳೆಯರಿಗಾಗಿ ಕುಮಾರಸ್ವಾಮಿ ಅವರು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ನಮ್ಮ ತಾಲೂಕಿಗೆ ನೀರಾವರಿಯಾಗಲು ಜೆಡಿಎಸ್ ಪಕ್ಷವೇ ಕಾರಣವಾಗಿದೆ ಎಂದರು.
ಕಾರ‌್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಭಾರತಿ ಅಂಗಡಿ, ಬಿ ಡಿ ಪಾಟೀಲರು 2018ರ ಚುನಾವಣೆಯಲ್ಲಿ ಅಲ್ಪಮತಗಳಿಂದ ಸೋತಿರಬಹುದು, ಆದರೆ ಜನಸೇವೆಯ ಜನಾರ್ದನ ಸೇವೆ ಎಂದು ರೈತರ, ಮಹಿಳೆಯರ, ಕಾರ್ಮಿಕರ, ಸೇವೆಯನ್ನು ಮಾಡುತ್ತಿದ್ದಾರೆ. ಮುಂಬರುವ 2023ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಬಿ.ಡಿ. ಪಾಟೀಲರಿಗೆ ಸಮಸ್ತ ತಾಲೂಕಿನ ಮಹಿಳೆಯರು ಬೆಂಬಲಿಸಿ ಅವರಿಗೆ ಅಧಿಕಾರಕ್ಕೆ ತರುವ ಸಂಕಲ್ಪ ಮಾಡೋಣ ಎಂದರು.
ಕಾರ‌್ಯಕ್ರಮದಲ್ಲಿ ದಾನಮ್ಮ ಪತ್ರಿಮಠ, ಗೀತಾ ಹಂಜಗಿ, ಮನೀಷಾ ರಾಠೋಡ, ಬೇಬಿ ಬಡಿಗೇರ, ಶ್ರೀದೇವಿ ಬಡಿಗೇರ, ಸುಜಾತ ಹಚಡದ, ಸವಿತಾ ಡಂಗಾ, ಲಲಿತಾ ಡಂಗಾ, ದಾನಮ್ಮ ಪತ್ರಿಮಠ, ಚಾಯಾ ಜಾದವ, ಗಂಗಾಬಾಯಿ ಸುಳಗಿ ಸೇರಿದಂತೆ ಅನೇಕ ಜೆಡಿಎಸ್ ಮಹಿಳಾ ಕಾರ್ಯಕರ್ತೆಯರು ಇದ್ದರು.