ರಾಣೆಬೆನ್ನೂರ

ಬೃಹತ್ ಕಣ್ಣಿನ ತಪಾಸಣಾ ಶಿಬಿರ

ಬೃಹತ್ ಕಣ್ಣಿನ ತಪಾಸಣಾ ಶಿಬಿರ

 ರಾಣೆಬೆನ್ನೂರು 11: ಲಯನ್ಸ್ ಶಾಲಾ ಸಭಾಭವನದಲ್ಲಿ ಇತ್ತೀಚೆಗೆ ಲಯನ್ಸ್ ಸಂಸ್ಥೆ, ಶ್ರೀ ಕಂಚಿ ಕಾಮಕೋಟಿ ಮೆಡಿಕಲ್, ಶಿವಮೊಗ್ಗ ಶಂಕರ್ ಕಣ್ಣಿನ ಆಸ್ಪತ್ರೆ ಮತ್ತು ಸ್ವಾ. ಕರವೇ ಮಾಸಿಕ ಬೃಹತ್ ಉಚಿತ ಕಣ್ಣಿನ ತಪಾಸಣಾ ಶಿಬಿರ ಆಯೋಜಿಸಿತ್ತು. ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಅಧ್ಯಕ್ಷ ಮಹೇಶ್ ಅಡಿವೆಪ್ಪ ನವರ್, ಅವರು ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಎಂ ಎಸ್ ಅರಕೇರಿ,ಟಿ.ವೀರಣ್ಣ, ಅಶೋಕ ವಟ್ಟಿಗೌಡ್ರ, ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಎಮ್ಮಿ, ಶಿವಾನಂದ ಸಂಗಾಪುರ, ಜೆ.ಎಂ. ರಾಜಶೇಖರ.ಬಸವರಾಜ ಬಡಿಗೇರ, ಪ್ರಭು ಲಿಂಗಪ್ಪ ಹಲಗೇರಿ, ಕಿರಣಕುಮಾರ ಅಂತರವಳ್ಳಿ, ಶಂಕರ್ ನಾಯಕ್, ಮತ್ತಿತರ ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು. ಶಿಬಿರದಲ್ಲಿ 250ಕ್ಕೂ ಹೆಚ್ಚು ತಪಾಸಣೆಗಳ ಪಟ್ಟು,120 ಅರ್ಹ ಫಲಾನುಭವಿಗಳು, ನೇತ್ರ ಶಸ್ತ್ರ ಚಿಕಿತ್ಸೆಗೆ ಆಯ್ಕೆಗೊಂಡರು. ರಜನಿ ಕುಲಕರ್ಣಿ  ಸಂಗಡಿಗರು ಪ್ರಾಥರ್ಿಸಿದರು. ಶಿವಾನಂದ್ ಸಂಗಾಪುರ ಸ್ವಾಗತಿಸಿದರು. ನೇತ್ರಾಧಿಕಾರಿ ಜೆಎಂ ರಾಜಶೇಖರ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್. ವಿ. ಸುರಗೊಂಡ ನಿರೂಪಿಸಿ, ಜಿಎಂ ಬಿದರಿ  ವಂದಿಸಿದರು. 

 

ಸುದ್ದಿ ಓದಿ