ಧಾರವಾಡ - ಹುಬ್ಬಳ್ಳಿ

ಉತ್ತಂಗಿ ಚನ್ನಪ್ಪನವರ ಜೀವನ ಹಾಗೂ ಸಾಧನೆ ಕುರಿತು ಉಪನ್ಯಾಸ

ಉತ್ತಂಗಿ ಚನ್ನಪ್ಪನವರ ಜೀವನ ಹಾಗೂ ಸಾಧನೆ ಕುರಿತು ಉಪನ್ಯಾಸ

 ಉತ್ತಂಗಿ ಚನ್ನಪ್ಪನವರ ಜೀವನ ಹಾಗೂ ಸಾಧನೆ ಕುರಿತು ಉಪನ್ಯಾಸ  

ಧಾರವಾಡ 29: ರೆ. ಉತ್ತಂಗಿ ಚನ್ನಪ್ಪನವರ ನೆನಹು ಸಮಸ್ತ ಕನ್ನಡಿಗರಿಗೆಲ್ಲಾ ಉದಯಕಾಲ. ಅವರು ಕನ್ನಡ ನಾಡು ಕಂಡ ಒಬ್ಬ ಸರ್ವಶ್ರೇಷ್ಠ ಅನುಭಾವಿಗಳು ಎಂದು ನಿವೃತ್ತ ಪ್ರಾಚಾರ್ಯರಾದ ಡಾ. ಆರ್‌. ಬಿ. ಚಿಲುಮಿ ಅಭಿಪ್ರಾಯಪಟ್ಟರು.  

ನಗರದ ಕ.ವಿ.ವ ಸಂಘದಲ್ಲಿ ಆಯೋಜಿಸಲ್ಪಟ್ಟ ರೆ. ಉತ್ತಂಗಿ ಚನ್ನಪ್ಪನವರ ದತ್ತಿ ಕಾರ‌್ಯಕ್ರಮದಲ್ಲಿ ‘ರೆ. ಉತ್ತಂಗಿ ಚನ್ನಪ್ಪನವರ ಜೀವನ ಹಾಗೂ ಸಾಧನೆ’ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.  

ರೆ. ಉತ್ತಂಗಿ ಚನ್ನಪ್ಪನವರು ಕನ್ನಡ ನಾಡಿನಲ್ಲಿ ಹುಟ್ಟಿ ಕ್ರೈಸ್ತ ಸಮಾಜದಲ್ಲಿ ಬೆಳೆದು, ಕಷ್ಟಪಟ್ಟು ಕನ್ನಡತನವನ್ನು ಉಳಿಸಿದ್ದಾರೆ. ಅವರು ಲಿಂಗಾಯತ ಧರ್ಮ ಕುರಿತು ಸುಮಾರು ಎಂಟು ಕೃತಿಗಳನ್ನು ಕ್ರೈಸ್ತ ಸಮಾಜ ಕುರಿತು ಐದು ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. 2 ಧರ್ಮಗಳ ನಡುವಿನ ಪ್ರೀತಿಯ ಸೇತುವೆಯಾದರು. ಸರಳತೆಯ ಚನ್ನಪ್ಪನವರಲ್ಲಿ ಯೇಸು ಸ್ವಾಮಿಯಲ್ಲಿದ್ದ ಅಪಾರ ಕ್ಷಮಾಗುಣ ಹಾಗೂ ಇತರರನ್ನು ಪ್ರೀತಿಸುವ ಗುಣಗಳಿದ್ದವು. ರೆ. ಉತ್ತಂಗಿ ಚನ್ನಪ್ಪ ಅವರು 43 ವರ್ಷಗಳ ಕಾಲ ಕ್ರೈಸ್ತ ಸೇವೆ ಮಾಡಿದ್ದರಿಂದ ಡಾ. ಎಸ್‌. ಆರ್‌. ಗುಂಜಾಳ ಅವರ ಒಡನಾಟದಿಂದ ಶ್ರೇಷ್ಠ ಜ್ಞಾನಿಗಳಾಗಲು ಸಾಧ್ಯವಾಯಿತು. 

ಕವಿ ಸರ್ವಜ್ಞನನ್ನು ರೆ. ಉತ್ತಂಗಿ ಚನ್ನಪ್ಪನವರು ಬೆಳಕಿಗೆ ತಂದರೆ, ರೆ. ಉತ್ತಂಗಿ ಚನ್ನಪ್ಪ ಅವರನ್ನು ಡಾ. ಎಸ್‌. ಆರ್‌. ಗುಂಜಾಳರು ಇಡೀ ಪ್ರಪಂಚಕ್ಕೆ ಪರಿಚಯಿಸಿದರು. ಸರ್ವಜ್ಞನ ವಚನಗಳನ್ನು ಸಂಗ್ರಹಿಸಿ ದಾಖಲೀಕರಿಸುವಲ್ಲಿ ಅವರು ಪಟ್ಟ ಶ್ರಮ ಹಾಗೂ ಬದ್ಧತೆ ಅಪಾರವಾಗಿದೆ. ಕೆಲಕಾಲ ರೆ. ಉತ್ತಂಗಿಯವರು ಹರಿಜನೋದ್ದಾರಕ್ಕೆ, ರೋಗಿಗಳ ಸೇವೆಯಲ್ಲಿ ದುಡಿದರು. ಅವರೊಬ್ಬ ಮರೆಯಲಾರದ ಮಹಾನುಭಾವರು. ಅವರ ಮರೆವು ಒಂದು ಆಸ್ತಮಾನ ಎಂದು ಹೇಳಿದರು. 

ಹಿರಿಯ ವಿಮರ್ಶಕ ಡಾ. ಶ್ಯಾಮಸುಂದರ ಬಿದರಕುಂದಿ, ಶ್ರೀನಿವಾಸ ದೇಸಾಯಿ ಅವರೆ ಬರೆದ ಸರ್ವಜ್ಞನ ನೂರೊಂದು ವಚನಗಳು ಹಾಗೂ ಡಾ. ಎಸ್‌. ಆರ್‌. ಗುಂಜಾಳರ ನನ್ನ ಆತ್ಮ ಚರಿತೆ ಎರಡು ಕೃತಿ ಲೋಕಾರೆ​‍್ಣ ಮಾಡಿ ಮಾತನಾಡಿ, ಶ್ರೀನಿವಾಸ ದೇಸಾಯಿ ವೃತ್ತಿಯಿಂದ ಇಂಜೀನೀಯರ ಆಗಿದ್ದರೂ ಸುಮಾರು 38 ವಿಭಿನ್ನ ವಿಷಯಗಳ ಕೃತಿ ರಚಿಸಿದ್ದಾರೆ. ಸರ್ವಜ್ಞನ ನೂರೊಂದು ವಚನಗಳ ಕೃತಿಯಲ್ಲಿ ಕನ್ನಡದ ಜೊತೆಗೆ, ಸಂಸೃತ, ಹಿಂದಿ ಹಾಗೂ ಇಂಗ್ಲೀಷ ಭಾಷೆಯಲ್ಲೂ ವ್ಯಾಖ್ಯಾನ ಮಾಡಿದ್ದು ಶ್ಲಾಘನೀಯ. ಈ ಅನುವಾದ ಎಲ್ಲಾ ಭಾಷೀಕರಿಗೂ ಅನುಕೂಲವಾಗುವ ಕೃತಿಯಾಗಿದೆ. ಸರ್ವಜ್ಞನ ತ್ರಿಪದಿಗಳು ಮನೋಜ್ಞವಾಗಿದ್ದು ಎಲ್ಲರಿಗೂ ಅರ್ಥವಾಗುವಂತೆ ಇವೆ. ಸಮಾಜದ ವೈದ್ಯನಾಗಿ ಸಮಾಜ ತಿದ್ದುವ ಕಾರ್ಯ ಸರ್ವಜ್ಞ ಮಾಡಿದ್ದಾನೆ. ಈ ವಚನಗಳು ಲೋಕಾನುಭವದ ಕಣಜವಾಗಿವೆ ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಧಾರವಾಡದ ಹೆಬಿಕ್ ಮೆಮೊರಿಯಲ್ಲ ಚರ್ಚಿನ ನಿವೃತ್ತ ಪಾಸ್ಟರ ರೆ. ಎಸ್‌. ಎಸ್‌. ಸಕ್ರಿ ಮಾತನಾಡಿ ಕ.ವಿ.ವ ಸಂಘವು ದತ್ತಿ ಮೂಲಕ ರೆ. ಉತ್ತಂಗಿ ಚನ್ನಪ್ಪನವರನ್ನು ಜೀವಂತವಿರಿಸಿದ್ದಾರೆ. ಅವರ ಹೆಸರು ಚಿರಸ್ಥಾಯಿಗೊಳಿಸಿದ್ದಾರೆ. ವಿನಮ್ರತೆಗೆ ಪಾಂಡಿತ್ಯಕ್ಕೆ ಎಲ್ಲರನ್ನು ಪ್ರೀತಿಸುವ ಗುಣಕ್ಕೆ ಅವರ ಸರಿಸಮ ವ್ಯಕ್ತಿಗಳು ಅಪರೂಪ ಎಂದು ಹೇಳಿದರು. 

ವೇದಿಕೆಯಲ್ಲಿ ಉಪಸ್ಥಿತರಿದ್ದ ಡಾ. ಎಸ್‌. ಆರ್‌. ಗುಂಜಾಳ ಅವರು ರೆ. ಉತ್ತಂಗಿ ಚನ್ನಪ್ಪನವರೊಂದಿಗಿನ ತಮ್ಮ 12 ವರ್ಷದ ಒಳ್ಳೆ ಒಡನಾಟದ ಪ್ರಸಂಗಗಳನ್ನು ಸ್ಮರಿಸಿದರು, 

ಪ್ರಮೀಳಾ ಜಕ್ಕಣ್ಣವರ ಪ್ರಾರ್ಥಿಸಿದರು, ವೀರಣ್ಣ ಒಡ್ಡೀನ ಸ್ವಾಗತಿಸಿದರು. ಗುರು ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರ್ವಹಿಸಿದರು, ಡಾ. ಧನವಂತ ಹಾಜವಗೋಳ ವಂದಿಸಿದರು..  

ಕಾರ್ಯಕ್ರಮದಲ್ಲಿ ಶಂಕರ ಹಲಗತ್ತಿ, ಶಿವಾನಂದ ಭಾವಿಕಟ್ಟಿ, ನಿಂಗಣ್ಣ ಕುಂಟಿ, ನರಸಿಂಹ ಪರಾಂಜಪೆ, ರಾಮಚಂದ್ರ ಧೋಂಗಡೆ, ಎಸ್‌.ಎಸ್‌. ಹಿರೇಮಠ, ಸದಾಶಿವ ಜನಗೌಡರ, ಮಹಾಂತೇಶ ನರೇಗಲ್, ಸಿದ್ಧಣ್ಣ ಕಂಬಾರ, ಡಾ. ಮಂಜುಳಾ ಛಲವಾದಿ ಸೇರಿದಂತೆ ಮುಂತಾದವರಿದ್ದರು. 


ಸುದ್ದಿ ಓದಿ