ವಿಮೆ ಹಣ ನಿರಾಕರಿಸಿದ ವಿಮಾ ಕಂಪನಿಗೆ ರೂ.4,10,000/-ಗಳ ದಂಡ
ಪರಿಹಾರ ನೀಡುವಂತೆ ಆದೇಶಿಸಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ
ಧಾರವಾಡ 23: ಧಾರವಾಡದ ಕೋಟುರ ವಾಸಿ ಪರಶುರಾಮ ಮಾದರ ಅವರು ಸರಕು ವಾಹನದ ಮಾಲೀಕರಾಗಿದ್ದರು. ಅವರು ಆ ವಾಹನಕ್ಕೆ ರೂ.28,482/- ಕೊಟ್ಟು ಎದುರುದಾರ ಕಂಪನಿಯಿಂದ ವಿಮಾ ಪಾಲಸಿ ಮಾಡಿಸಿದ್ದರು. ಅವರು ಕೋಟುರನಿಂದ ಬಿಜಾಪುರಕ್ಕೆ ಹೊರಟಾಗ ದಿ:09/08/2023 ರಂದು ಸೋಮಾಪುರ ಹತ್ತಿರ ಸುಮಾರು 2:30ರ ಬೆಳಗಿನ ಜಾವ ಸದರಿ ವಾಹನ ಅಪಘಾತಕ್ಕಿಡಾಗಿ ಬಹಳ ಹಾನಿಗೊಳಪಟ್ಟಿರುತ್ತದೆ. ಸದರಿ ಪಾಲಸಿ ಅಪಘಾತ ಕಾಲಕ್ಕೆ ಚಾಲ್ತಿಯಲ್ಲಿತ್ತು. ಅದೇ ದಿವಸ ಪರಶುರಾಮ ಎದುರುದಾರ 1 ಮತ್ತು 2ನೇ ವಿಮಾ ಕಂಪನಿಯವರಿಗೆ ಅಪಘಾತದ ವಿಷಯ ತಿಳಿಸಿ ಮತ್ತು ತನ್ನ ಸರಕು ವಾಹನಕ್ಕೆ ಆದ ಹಾನಿಯನ್ನು ಭರಿಸಿಕೊಡುವಂತೆ ಕ್ಲೇಮ್ ಮಾಡಿದ್ದು ಇರುತ್ತದೆ. ಅಪಘಾತದ ನಂತರತನ್ನ ವಾಹನವನ್ನು ರಿಪೇರಿಗಾಗಿ ಹುಬ್ಬಳ್ಳಿಯ ಭಾರತ ಗ್ಯಾರೇಜಿನಲ್ಲಿ ಬಿಟ್ಟಿದ್ದು ಅವರು ರಿಪೇರಿಗೆ ತಗಲುವ ಖಚು ಅಂದಾಜು ರೂ.3,14,250/- ಆಗುತ್ತದೆ ಅಂತಾ ತಿಳಿಸಿದ್ದರು. ಆದರೆ ಎದುರುದಾರ ನಂ.1 ಮತ್ತು 2 ಹಾನಿಗೊಳಗಾದ ವಾಹನದ ಸರ್ವೆ ಮಾಡಿ ದೂರುದಾರನ ಕ್ಲೇಮ್ ಇತ್ಯರ್ಥ ಪಡಿಸುವುದಾಗಿ ಬರವಸೆ ನೀಡಿದ್ದರು. ಆದರೆ ದಿ:07/10/2023 ರಂದು ಏಕಾಎಕಿ ಎದುರುದಾರ ನಂ.1 ಮತ್ತು 2 ರವರು ಯಾವುದೇ ಸೂಕ್ತ ಕಾರಣ ನೀಡದೇ ದೂರುದಾರನ ಕ್ಲೇಮ್ ಅರ್ಜಿ ನಂ.3123206712 ತಿರಸ್ಕರಿಸಿರುತ್ತಾರೆ. ಈ ರೀತಿ ತನ್ನ ಕಾನೂನು ಬದ್ಧ ಕ್ಲೇಮನ್ನು ಎದುರುದಾರ ನಂ.1 ಮತ್ತು 2 ರವರು ತಿರಸ್ಕರಿಸಿ ಗ್ರಾಹಕರ ಸಂರಕ್ಷಣಾ ಕಾಯಿದೆಯಡಿ ಸೇವಾ ನ್ಯೂನ್ಯತೆ ಎಸಗಿರುತ್ತಾರೆ. ಅಂತಾ ಹೇಳಿ ಅವರ ವಿರುದ್ದ ಸೂಕ್ತ ಕ್ರಮಕೈಗೊಂಡು ಪರಿಹಾರದ ಹಣ ಕೊಡಿಸುವಂತೆ ದೂರುದಾರ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:07/12/2023 ರಂದು ದೂರು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ, ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು.ಸಿ ಹಿರೇಮಠ ಸದಸ್ಯರು ದೂರುದಾರರ ಸರಕು ವಾಹನ ವಿಮೆ ಸೌಲಭ್ಯಕ್ಕೆ ಒಳಪಟ್ಟಿದ್ದರೂ ಮತ್ತು ವಿಮಾ ಪಾಲಸಿ ಚಾಲ್ತಿಯಲ್ಲಿದ್ದಾಗ ಆ ವಾಹನದ ರಿಪೇರಿಗೆ ತಗುಲಿದ ಎಲ್ಲ ಖರ್ಚು ವೆಚ್ಚ ಭರಿಸುವುದು ವಿಮಾ ಕಂಪನಿಯ ಕರ್ತವ್ಯವಾಗಿದೆ. ಆದರೆ ಅಂತಹ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಎದುರುದಾರ ನಂ.1 ಮತ್ತು 2 ವಿಮಾ ಕಂಪನಿ ವಿಫಲವಾಗಿದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ು ನೀಡಿದೆ. ಈ ಬಗ್ಗೆ ರಿಲೈನ್ಸ ಜನರಲ್ ಇನ್ಸುರೆನ್ಸ ಕಂಪನಿಯವರು ದೂರುದಾರರಿಗೆ 3,00,000/- ವಿಮಾ ಹಣವನ್ನು ದೂರುದಾರನ ಕ್ಲೇಮ್ ಅರ್ಜಿ ತಿರಸ್ಕರಿಸಿದ ದಿ:07/10/2023 ರಿಂದ ಶೇ.8ಅ ರಂತೆ ಪೂರ್ತಿ ಹಣ ಸಂದಾಯವಾಗುವವರೆಗೆ ಬಡ್ಡಿ ಲೆಕ್ಕ ಹಾಕಿ ಪಿರ್ಯಾದಿ ಪರಶುರಾಮನಿಗೆ ಪಾವತಿಸುವಂತೆ ಆದೇಶಿಸಿದೆ. ಜೊತೆಗೆ ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗೆ ರೂ.1,00,000/- ಪರಿಹಾರ ಮತ್ತು ರೂ.10,000/- ಗಳನ್ನು ರೂಪಾಯಿ ಪ್ರಕರಣದ ಖರ್ಚು ವೆಚ್ಚ ಒಂದು ತಿಂಗಳ ಒಳಗಾಗಿ ಕೊಡುವಂತೆ ವಿಮಾ ಕಂಪನಿಗೆ ಆಯೋಗ ತನ್ನ ತೀರ್ಿನಲ್ಲಿ ಸೂಚಿಸಿದೆ.