ಶಿಗ್ಗಾವ್

ಎನ್‌ಎಸ್‌ಎಸ್ ವತಿಯಿಂದ ಗ್ರಾಮದವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ

ಎನ್‌ಎಸ್‌ಎಸ್ ವತಿಯಿಂದ ಗ್ರಾಮದವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ

ಶಿಗ್ಗಾವಿ 12: ಪಟ್ಟಣದ ರಂಭಾಪುರೀ ಜಗದ್ಗುರು ವೀರಗಂಗಾಧರ ಸ್ವತಂತ್ರ ಪ ಪೂ ಕಾಲೇಜಿನಲ್ಲಿ ಅಭಿನಂದನಾ ಕಾರ್ಯಕ್ರಮ ಜರುಗಿತು. ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದಲ್ಲಿ  ದಿನಾಂಕ 09 ರಿಂದ 15ರವರೆಗೆ  2002-23 ನಾನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಯಶಸ್ಸಿಗೆ ಕಾರಣರಾದ ಗ್ರಾಮದವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ  ಫಕ್ಕೀರಯ್ಯ ಹಿರೇಮಠ ಅವರು ಗ್ರಾಮವು "ಮಾದರಿ ಸ್ವಚ್ಛ ಗ್ರಾಮವಾಗಬೇಕಾದರೇ ಇಂತಹ ಶಿಬಿರದ ಮೂಲಕ ಸಾಧ್ಯ ಎಂದರಲ್ಲದೇ ಗ್ರಾಮದ ಜನರಲ್ಲಿ ಸೌಹಾರ್ದತೆ ಮತ್ತು ಶಾಂತಿ ನೆಲೆಯಾಗುತ್ತದೆ ಎಂದು ಕರೆ ನೀಡಿದರು. 

  ರಮೇಶ್ ಸಾತಣ್ಣವರ ಮಾತನಾಡಿ  ಗ್ರಾಮಗಳ ಉದ್ಧಾರಕ್ಕಾಗಿ ಹೆಚ್ಚು ಹೆಚ್ಚು ಶಿಬಿರಗಳು ಜರುಗುವದರಿಂದ ಸಮೃದ್ಧ ಭಾರತದ ನಿರ್ಮಾಣಕ್ಕೆ ಸಹಕಾರ  ಜೊತೆಗೆ ಶಿಬಿರದಲ್ಲಿ ಕೈಗೊಂಡ ಅನೇಕ ಶ್ರಮದಾನದ ಕಾರ್ಯಗಳು ಸ್ವಚ್ ಪ್ಲಾಸ್ಟಿಕ್ ಮುಕ್ತ ಗ್ರಾಮವಾಗಿ ಬೆಳೆಯುತ್ತವೆ ಎಂದರು. 

 ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ರೇವಣಸಿದ್ದಯ್ಯ ಹಿರೇಮಠ ಆರ್ಶಿವದಿಸಿ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳು ಬೆಳೆಯಬೇಕಾದರೆ ಎನ್ ಎಸ್ ಎಸ್ ಸೇರಿ, ಭವಿಷ್ಯದ ಉತ್ತಮ ನಾಯಕರಾಗಬೇಕೆಂದರು, ಪ್ರಾಚಾರ್ಯ ಎಫ್ ಎಸ್ ಶಿವಣ್ಣನವರ ಅಭಿನಂದನಾ ನುಡಿಗಳನ್ನಾಡಿದರು. 

ಅಧ್ಯಕ್ಷತೆಯನ್ನು ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಪ್ರೋ.ಪಿ.ಸಿ.ಹಿರೇಮಠ ವಹಿಸಿದ್ದರು,ಕುಮಾರಿ ಭಾಗ್ಯ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಪ್ರಿಯಾಂಕ ಹಾಗೂ ಸಂಗಡಿಗರು ಎನ್ ಎಸ್ ಎಸ್ ಗೀತೆ ಹಾಡಿದರು, ಎನ್ ಎಸ್ ಎಸ್ ಘಟಕದ ಸಂಚಾಲಕ  ಶಿವಯ್ಯ ಪೂಜಾರ ನಿರೂಪಿಸಿದರು, ಎಮ್ ಎಸ್ ಸಿದ್ದಪ್ಪನವರ ವಂದಿಸಿದರು, ನಂತರ ಶಿಬಿರಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮಗಳು ನಡೆದವು. 


ಸುದ್ದಿ ಓದಿ