ರಾಣೆಬೆನ್ನೂರ

ಸೌದಿ ಅರೇಬಿಯಾದಿಂದ ಬಂದು ಧ್ವಜಾರೋಹಣದಲ್ಲಿ ಪಾಲ್ಗೊಂಡ ಕುಟುಂಬ

ಸೌದಿ ಅರೇಬಿಯಾದಿಂದ ಬಂದು ಧ್ವಜಾರೋಹಣದಲ್ಲಿ ಪಾಲ್ಗೊಂಡ ಕುಟುಂಬ

ಕೋಮಭಾವನೆ ಕೆರಳಿಸುವ ಮತಾಂಧರಿಗೊಂದು ಸಂದೇಶ  

ರಾಣೇಬೆನ್ನೂರು 18: ಭವ್ಯ ಭಾರತದ ನಿರ್ಮಾಣದ ಕನಸು ಹೊತ್ತೊಂತ ಮಹಾತ್ಮಾ ಗಾಂಧೀಜಿ ನೇತೃತ್ವದ ಲಕ್ಷಾಂತರ ದೇಶ ಭಕ್ತರ ತ್ಯಾಗ ಬಲಿದಾನದಗಳ ಸಂಕೇತವಾಗಿ ದೊರೆತ ಸ್ವಾತಂತ್ರ್ಯ ಇಂದು ಸಾಕಾರಗೊಂಡಿದೆ, ಸರ್ವ ಧರ್ಮಿಯರನ್ನು ಹಲವು ಭಾಷಿಕರನ್ನೊಳಗೊಂಡು ಸರ್ವ ಜನಾಂಗದ ಶಾಂತಿಯ ತೋಟದಂತಿದ್ದ ಈ ಜಾತ್ಯಾತೀತ ರಾಷ್ಟ್ರದಲ್ಲಿ ಕೆಲವು ಮತಾಂಧರು ಕೋಮುಭಾವನೆ ಕೆರಳಿಸಿ ಅಶಾಂತಿ ಕದಡುವು ಕೆಲಸ ನಿತ್ಯವೂ ಮಾಡಿತ್ತಿದ್ದಾರೆ. ಅಂಥ ದುರುಳರಿಗೆ ಸೌದಿ ಅರೇಬಿಯಾದಿಂದ ಬಂದು ಸ್ವಾತಂತ್ರೋತ್ಸವದಲ್ಲಿ ಪಾಲ್ಗೊಂಡು ದೇಶಾಭಿಮಾನ, ರಾಷ್ಟ್ರೀಭಿಮಾನ ಮೆರೆದ ಸೈಯದ್ ಅಬ್ದುಲ್ ಅಲೀಮ್  ಕುಟುಂಬ ಒಂದು ಒಳ್ಳೆಯ ಸಂದೇಶ  ಕೊಡುತ್ತ್ತಿದೆ ಎಂದು ರೈತ ಮುಖಂಡ ರವೀಂದ್ರಗೌಡ ಎಫ್‌. ಪಾಟೀಲ ಹೇಳಿದರು.  

ಅವರು ಮುಷ್ಟೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ 78 ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದ ಧ್ವಜಾ ವಂದನೆ ಸ್ವೀಕರಿಸಿ ಮಾತನಾಡಿದ ಅವರು ನಮ್ಮ ಗ್ರಾಮದವರೆ ಆದ ಸೈಯದ್ ಅಬ್ದುಲ್ ಅಲೀಮ್  ರವರು ತಮ್ಮ ಕುಟುಂಬದವರೊಂದಿಗೆ ಸೌದಿ ಆರೇಬಿಯಾದ ಮಸ್ಕತ್‌ನಲ್ಲಿ ವಾಸಿಸುತ್ತಿದ್ದು ಅಲ್ಲಿಯ ಕಾಲೇಜ್‌ನಲ್ಲಿ ಲಕ್ಚರ್‌ರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ತವರು ದೇಶದ 78 ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೇಬೆಕೆಂಬ ಅಭಿಮಾನದಿಂದ ಸುಮಾರು 10 ತಾಸು ವಿಮಾನದಲ್ಲಿ ಪ್ರಯಾಣ ಬೆಳೆಸಿ ಹೇಗಾದರೂ ಮಾಡಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಯಾಗಲೇಬೆಂದು ಪಣತೊಟ್ಟು ತನ್ನ ಪತ್ನಿ ರೇಶ್ಮಾ, ಮಗ ಸೈಯದ್ ಅಬ್ದುಲ್ ರಶೀದ್, ಮಗಳು ಮಾಹೀರಾಳೊಂದಿಗೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.  

ನಿಜವಾದ ರಾಷ್ಟ್ರಾಭಿಮಾನ ಎಂದರೆ ಇದು, ಹೊಟ್ಟೆಪಾಡಿಗಾಗಿ ಹೊರ ದೇಶದಲ್ಲಿದ್ದು ಸ್ವದೇಶದ ಕಾರ್ಯಕ್ರಮಕ್ಕೆ ಅಭಿಮಾನದಿಂದ ಬಂದ ಸೈಯದ್‌ರವರ ಈ ದೇಶಾಭಿಮಾನ ಇತರರಿಗೆ ಮಾದರಿ ಎಂದರು. ಇದೇ ಸಂದರ್ಭದಲ್ಲಿ ಸೈಯದ್ ಅಬ್ದುಲ್ ಅಲೀಮ್  ಕುಟುಂಬವನ್ನು ಗ್ರಾಮಸ್ಥರ ಪರವಾಗಿ ಸನ್ಮಾಸಿಸಲಾಯಿತು. 

ಎಸ್‌.ಡಿ.ಎಂ.ಸಿ. ಅಧ್ಯಕ್ಷರಾದ ಯಲ್ಲಪ್ಪ ಡಿ. ಓಲೇಕಾರ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯುವ ನಾಯಕರು, ಗಣ್ಯ ವರ್ತಕರೂ ಆದ  ಸಂತೋಷ ಬಾಗೋಡಿಯವರು ಮಾತನಾಡಿ ಭಾರತೀಯರಾದ ನಾವುಗಳು ಮೊದಲು ದೇಶಭಿಮಾನ, ಭಾಷಾಭಿಮಾನ ಬೆಳೆಸಿಕೊಳ್ಳಬೇಕು, ಆ ಮೂಲಕ ದೇಶದ ಅಭಿವೃದ್ಧಿಯಲ್ಲಿ ನಮ್ಮೆಲ್ಲರ ಪಾತ್ರ ಮಹತ್ವದ್ದಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ರಾಣೇಬೆನ್ನೂರು ನಗರವಾಣಿ ಪತ್ರಿಕೆಯ ಸಂಪಾದಕರಾದ ನಿಂಗರಾಜ ಗುದಗೇರ ಭಾಗವಹಿಸಿದ್ದರು. ವೇದಿಕೆಯ ಮೇಲೆ ಮುದೇನೂರು ಗ್ರಾ.ಪಂ. ಉಪಾಧ್ಯಕ್ಷೆ ಚಂದ್ರಮ್ಮ ವಾಯ್‌. ಹಿರೇಮರದ, ಮಾಜಿ ಉಪಾಧ್ಯಕ್ಷರಾದ ಹರಿಹರಗೌಡ ಪಾಟೀಲ, ಎಸ್‌.ಡಿ.ಎಂ.ಸಿ. ಮಾಜಿ ಅಧ್ಯಕ್ಷರಾದ ಬಸವರಾಜ ಯಲ್ಲಕ್ಕನವರ, ವಿರೇಶ, ಕಿರಣ, ರೇವಣಸಿದ್ದಪ್ಪ ಉಪಸ್ಥಿತಿತರಿದ್ದರು.  

ಮುಖ್ಯ ಶಿಕ್ಷಕರಾದ ಎಂ. ರಾಜಶೇಖರ ಮತ್ತು ಬಸವರಾಜ ಬಿ. ಕಾಯಕದ, ಅಚ್ಚುಕಟ್ಟಾಗಿ ಕಾರ್ಯಕ್ರಮ ನೆರವೇರಿಸಿದರು. ಶಿಕ್ಷಕಿ ಕೆ.ಟಿ. ರಾಧಾ ಸ್ವಾಗತಿಸಿದರು. ಎನ್‌.ವಿ. ಬಿಳಸನೂರಮಠ ಶಿಕ್ಷಕರು ವಂದಿಸಿದರು. 


ಸುದ್ದಿ ಓದಿ