ರಾಣೇಬೆನ್ನೂರಲ್ಲಿ ಸಂಭ್ರಮಿಸಿದ ಶ್ರದ್ಧಾ ಭಕ್ತಿಯ ಈದ್ ಮಿಲಾದ್
ರಾಣೇಬೆನ್ನೂರು 30: ನಗರದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಶ್ರದ್ಧಾ ಭಕ್ತಿಯ ಈದ್ ಮಿಲಾದ್ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿ ಸಂಭ್ರಮಿಸಿದರು. ಹತ್ತಾರು ಸಾವಿರ ಬಾಂಧವರು ಸೇರಿದ ಭವ್ಯ ಉತ್ಸವದ ಮೆರವಣಿಗೆಯು ನಗರದ ನಾಗರಿಕರ ಗಮನ ಸೆಳೆದವು. ಈ ಬಾರಿ ನಡೆದ ಮಕ್ಕ ಮದೀನಾ ಸ್ಥಳದ ಐತಿಹಾಸಿಕ ಕುರುಹು ಸಾರುವ 20ಕ್ಕೂ ಹೆಚ್ಚು ಸ್ತಬ್ದ ಚಿತ್ರಗಳು, ವಿಶೇಷ ಆಕರ್ಷಣೆಯಾಗಿ ಈದ್ ಮಿಲಾದ್ ಹಬ್ಬಕ್ಕೆ ವಿಶೇಷ ಮೆರಗು ನೀಡಿದ್ದವು. ಭಾವೈಕ್ಯತೆಯ ಸಂಕೇತವಾಗಿ ಸಂಭ್ರಮಗೊಂಡ ಈದ್ ಮಿಲಾದ್ ವಾಣಿಜ್ಯ ನಗರದಲ್ಲಿ ಮೆರಗು ಇಮ್ಮಡಿಗೋಳಿಸಿಕ್ತು. ವಿವಿಧ ಮಸೀದಿಗಳ ಮೌಲಾನಾಗಳು ಮೆರವಣಿಗೆ ಯುದ್ಧಕ್ಕೂ ಧರ್ಮ ಧರ್ಮ ಸಂದೇಶವನ್ನು ಮೋದಿಸುತ್ತಿದ್ದರು. ಸಡಗರ ಸಂಭ್ರಮದ ಹಬ್ಬಕ್ಕೆ ನಗರದ ಸಾವಿರಾರು ಜನರು ಮೆರವಣಿಗೆಯಲ್ಲಿ ಸಾಕ್ಷಿಕರಿಸಿದ್ದರು. ಸಮಾಜದ ನೂರಾರು ಮುಖಂಡರು, ಯುವಕರು ಗಣ್ಯರು, ಮಕ್ಕಳು ಮುಂಚೂಣಿಯಲ್ಲಿದ್ದರು.