ಇಂಡಿ

ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿಯಾದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ: ಶಾಸಕ ಪಾಟೀಲ

ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿಯಾದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ: ಶಾಸಕ ಪಾಟೀಲ

ಇಂಡಿ: ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿಯಾದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಆ ನಿಟ್ಟಿನಲ್ಲಿ ಮತಕ್ಷೇತ್ರದಲ್ಲಿ  ಶಿಕ್ಷಣಕ್ಕೆ ಮೂಲಭೂತ ಸೌಕರ್ಯ ನೀಡಲು ಪ್ರಥಮ ಆಧ್ಯತೆ ನೀಡಿದ್ದೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.  

ತಾಲೂಕಿನ ಚಿಕ್ಕಮಸಳಿ ಗ್ರಾಮದಲ್ಲಿ ಮಂಗಳವಾರರಂದು 13.90 ಲಕ್ಷ ರೂ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಸರಕಾರಿ ಪ್ರಾಥಮಿಕ ಶಾಲಾ ಕಟ್ಟಡದ ಭೂಮಿ ಪೂಜಾ ಸಮಾರಂಭದಲ್ಲಿ ಮಾತನಾಡಿದರು. 

ಶೈಕ್ಷಣಿಕ ಅಭ್ಯಾಸಕ್ಕೆ ಬಡತನ ಅಡಿಬರುವುದಿಲ್ಲ, ಸಮಾಜ ಯಾವುದೂ ತೊಡಕಾಗುವದಿಲ್ಲ ಎಂದ ಅವರು ವ್ಯಕ್ತಿಯ ವಿಕಸನ ಮತ್ತು ಸಮಾಜದ ಸುಧಾರಣೆಗೆ ಶಿಕ್ಷಣ ಬಹಳ ಮುಖ್ಯ. ಶಿಕ್ಷಕರು ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸಲು ಮುಂದಾಗಬೇಕು ಎಂದರು. 

ತಾಲೂಕಿನಲ್ಲಿ ಬಂಥನಾಳ ಸಂಗನಬಸವ ಶ್ರೀಗಳು ಶೈಕ್ಷಣಿಕ ಕ್ರಾಂತಿ ಮಾಡಿದ್ದು ಅದನ್ನು ಮುಂದುವರೆಸಲು ಪ್ರತಿ ಗ್ರಾಮದಲ್ಲಿಯ ಶಾಲೆಗಳಿಗೆ ಮೂಲಭೂತ ಸೌಕರ್ಯಕ್ಕೆ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಅನುದಾನ ನೀಡಿದ ತೃಪ್ತಿ ನನಗಿದೆ ಎಂದರು.  

ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ, ಸಿಆರ್‌.ಸಿ ಎಸ್‌.ಎಸ್‌.ಕ್ಯಾತಾ, ಗುತ್ತಿಗೆದಾರ ಮಹಮ್ಮದ ಬಗಲಿ ಎಂ.ಡಿ. ಭೈರಾಮಡಗಿ ಮಾತನಾಡಿದರು. 

ಎಸ್‌ಡಿಎಂಸಿ ಯ ರೇವಯ್ಯ ಪೂಜಾರಿ, ಮುಖ್ಯ ಗುರು ಎಸ್‌.ಜಿ. ಹಂಚಿನಾಳ, ಗ್ರಾ.ಪಂ ಸದಸ್ಯ ಮಹಿಬೂಬ ಬಗಲಿ, ಶಶಿಕಾಂತ ದೊಡಮನಿ, ಗ್ರಾ.ಪಂ ಮಾಜಿ ಅಧ್ಯಕ್ಷ ಸಿದ್ದಾರೂಢ ಕಲ್ಲೂರ ಮತ್ತಿತರರು ಇದ್ದರು.  

ಇಂಡಿ: ತಾಲೂಕಿನ ಚಿಕ್ಕಮಸಳಿ ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಶಾಲಾ ಕಟ್ಟಡದ ಕಾರ‌್ಯಕ್ರಮದಲ್ಲಿ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿದರು 


ಸುದ್ದಿ ಓದಿ