ರಾಣೆಬೆನ್ನೂರ

“ಕಿವುಡ ಮಾಡಿದ ಕಿತಾಪತಿ” ಹಾಸ್ಯಭರಿತ ಸಾಮಾಜಿಕ ನಾಟಕದ ಪ್ರದರ್ಶನ

“ಕಿವುಡ ಮಾಡಿದ ಕಿತಾಪತಿ” ಹಾಸ್ಯಭರಿತ ಸಾಮಾಜಿಕ ನಾಟಕದ ಪ್ರದರ್ಶನ

ರಾಣೇಬೆನ್ನೂರು 10: ವೃತ್ತಿರಂಗಭೂಮಿ ಕಲಾವಿದರ ಬದುಕು, ಬವಣೆಯ ಬಗ್ಗೆ ನಾಟಕ ಕಂಪನಿಗಳು ಅನುಭಿಸುತ್ತಿದ್ದ ಕಷ್ಟನಷ್ಟಗಳ ಬಗ್ಗೆ ಅದ್ಭುತವಾದ ಕಲೆ ಪ್ರದರ್ಶಿಸಿ ಪ್ರೇಕ್ಷಕರ ಚಪ್ಪಾಳೆ, ಕೇಕೆ, ಶಿಳ್ಳೆ ಗಿಟ್ಟಿಸುತ್ತಿದ್ದ ಅದ್ಭುತ ವೃತ್ತಿ ರಂಗಭೂಮಿ ಕಲಾವಿದರ ಬಗ್ಗೆ ಈಗ್ಗೆ ‘40’ ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಚಲನಚಿತ್ರ ನಟಿ ‘ಆರತಿ’ ಅಭಿನಯದ ‘ರಂಗನಾಯಕಿ’ ಚಲನಚಿತ್ರದಲ್ಲಿಯೇ ಆಗಿನ ಕಾಲದಲ್ಲಿ ನಾಟಕ ಕಂಪನಿಗಳಿಗೆ ವೃತ್ತಿ ರಂಗಭೂಮಿ ಕಲಾವಿದರಿಗೆ ಸಹಾಯ, ಸಹಕಾರ ನೀಡಿ ಪ್ರೋತ್ಸಾಹಿಸುತ್ತಿದ್ದ ರಾಣೇಬೆನ್ನೂರಿನ ಜನತೆಯ ಬಗ್ಗೆ ಹತ್ತು ಹಲವು ಸನ್ನಿವೇಶಗಳಲ್ಲಿ ಸಂಭಾಷಣೆಯಲ್ಲಿ ಅಚ್ಚೊತ್ತಿರುವುದು ಇಂದಿಗೂ ಜನಮಾನಸದಲ್ಲಿ ಉಳಿದಿದೆ ಅಂದಿನ ಕಾಲದಿಂದ ಹಿಡಿದು ಇಂದಿನವರೆಗೂ ನಾಟಕ ಕಂಪನಿಗಳಿಗೆ, ಹಸಿದು ಬಂದ ವೃತ್ತಿ ರಂಗಭೂಮಿ ಕಲಾವಿದರಿಗೆ ಅನ್ನ ನೀಡಿ, ಸಹಾಯ ಸಹಕಾರ ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ರೈತ ಮುಖಂಡ, ರವೀಂದ್ರಗೌಡ ಎಫ್‌. ಪಾಟೀಲ ಹೇಳಿದರು.  

ಅವರು - ರಾತ್ರಿ ರಾಣೇಬೆನ್ನೂರಿನ ನಗರಸಭೆಯ ಬಸಪ್ಪ ಗುಡ್ಡದ ಸ್ಮಾರಕ ಭವನದಲ್ಲಿ ಇಳಕಲ್ ತಾಲೂಕು ರಂಗಸಂಗಮ ಕಲೆ ಮತ್ತು ಸಂಸ್ಕೃತಿಕ ಸಂಘ (ರಿ) ಇಳಕಲ್ ಇವರಿಂದ ವೃತ್ತಿ ರಂಗಭೂಮಿ ಕಲಾವಿದೆ ರೇಷ್ಮಾ ಇಳಕಲ್ ಇವರ ಸಹಾಯಾರ್ಥ ಕೆ.ಎಸ್‌. ಸಾಳುಂಕೆ ವಿರಚಿತ “ಕಿವುಡ ಮಾಡಿದ ಕಿತಾಪತಿ” ಎಂಬ ಹಾಸ್ಯಭರಿತ ಸಾಮಾಜಿಕ ನಾಟಕದ ಪ್ರದರ್ಶನದ ಉದ್ಘಾಟನೆ ನೆರೆವೇರಿಸಿ ಮಾತನಾಡಿದ ಅವರು ಟಿ.ವಿ ಮತ್ತು ಸಿನಿಮಾ ಹಾಗೂ ಯು ಟ್ಯೂಬ್ ಹಾವಳಿಯಲ್ಲಿ ನಲುಗಿ ಹೋಗಿರುವ ನಾಟಕ ಕಂಪನಿಗಳು ಹಸಿವು, ಕಷ್ಟ ಆವರಿಸಿದಾಗ ರಾಣೇಬೆನ್ನೂರುನ್ನು ನೆನೆಸಿಕೊಂಡು ಬರುತ್ತಾರೆ. ಪ್ರತಿಬಾರಿ ಬಂದಾಗ ಅವರ ಕೈಹಿಡಿದು ಆಶ್ರಯ ನೀಡುತ್ತಿರುವವರು ನಿವೆಲ್ಲಾ ಪ್ರೇಕ್ಷಕರು ಮತ್ತು ವೇದಿಕೆ ಮೇಲಿರುವ ಪ್ರೋತ್ಸಾಹಕರು ಎಂದರು.  

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷರು, ಬಯಲಾಟ ಕಲೆಯಲ್ಲಿ ರಾಜ್ಯ ಪ್ರಶಸ್ತಿ ಪಡೆದ ಕೆ.ಪಿ. ಭೂತಯ್ಯನವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಇಳಕಲ್ ತಾಲೂಕ ರಂಗಸಂಗಮ ಕಲೆ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಶ್ರೀಮತಿ ರೇಷ್ಮಾ ಸಿ. ಅಳವಂಡಿ ಮಾತನಾಡಿ ರಾಣೇಬೆನ್ನೂರಿನಲ್ಲಿ ಕಲಾಪೋಷಕರು ಇರುವುದರಿಂದಲೇ ಹಸಿವು ಕಷ್ಟವಾದಾಗ ನಾವು ಇಲ್ಲಿ ಬಂದು ನಾಟಕ ಪ್ರದರ್ಶಿಸುತ್ತೇವೆ. ಇಲ್ಲಿ ಕಲಾವಿದರಿದ್ದಾರೆ, ಕಲಾವಿದರ ತವರೂರಾದ ರಾಣೇಬೆನ್ನೂರಿನಲ್ಲಿ ಒಂದು ಅತ್ಯಾಧುನಿಕ ಕಲಾ ಮಂದಿರವನ್ನು ಸರ್ಕಾರ ನಿರ್ಮಿಸಿಕೊಡಬೇಕಾಗಿದೆ ಎಂದ ಅವರು, ಸಹಕರಿಸಿದ ನಗರಸಭೆಯ ಪೌರಾಯುಕ್ತರು, ಜನಪ್ರತಿನಿಧಿಗಳು, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಹೆಸ್ಕಾಂ ಇಲಾಖೆ ಸೇರಿದಂತೆ ಜನಪ್ರತಿನಿಧಿಗಳಿಗೆ ಧನ್ಯವಾದ ಅರ​‍್ಿಸಿದರು.  

ಖ್ಯಾತ ವೃತ್ತಿರಂಗಭೂಮಿ ಕಲಾವಿದರಾದ ಮೌಲಾಸಾಬ ಗುಡಿಗೇರಿ, ಮಹಾರುದ್ರಾಚಾರಿ ಹರಪನಹಳ್ಳಿ, ಶ್ರೀಮತಿ ಭಾರತಿ ಎಚ್‌. ನಾಕೋಡ, ಮಾಹದೇವ ದಾವಣಗೆರೆ, ಬೀರೇಶ ನಾಯಕ, ರೂಪಾ ಶಿಗ್ಗಾಂವ, ಕುಮಾರ ಶಿಗ್ಗಾಂವ, ಜ್ಯೂ ಶೃತಿ ಮುಂತಾದ ಕಲಾವಿದರು ಅದ್ಭುತವಾಗಿ ನಟಿಸಿ ಪಾತ್ರಗಳಿಗೆ ಜೀವ ತುಂಬಿದರು.  

ವೇದಿಕೆ ಮೇಲೆ ಚಂದ್ರಣ್ಣ ಎಚ್‌. ಬೇಡರ, ಶಿವಾನಂದಪ್ಪ ಸಾಲಗೇರಿ, ಅಶೋಕಪ್ಪ ನಾಯಕ, ಹಿರಿಯ ರಂಗಭೂಮಿ ಕಲಾವಿದರಾದ ಗಣೇಶಪ್ಪ ಕುಲಕರ್ಣಿ, ಅಂಗವಿಕಲರ ಸಂಘದ ಇಳಕಲ್ ಅಧ್ಯಕ್ಷರಾದ ಯಶೋಧಾ ಒನಕಿ, ಉದ್ಯಮಿ ಬಸವರಾಜ ತಳವಾರ ಮುಂತಾದವರು ಉಪಸ್ಥಿತರಿದ 


ಸುದ್ದಿ ಓದಿ