ಅಥಣಿ

ಪೋಷಕರ ನಂಬಿಕೆಗೆ ತಕ್ಕಂತೆ ಬಾಳಿದರೆ ಮಕ್ಕಳ ಬದುಕು ಸಾರ್ಥಕ :ಸಿಪಿಐ ಶಂಕರಗೌಡ

ಪೋಷಕರ ನಂಬಿಕೆಗೆ ತಕ್ಕಂತೆ ಬಾಳಿದರೆ ಮಕ್ಕಳ ಬದುಕು ಸಾರ್ಥಕ :ಸಿಪಿಐ ಶಂಕರಗೌಡ

ಅಥಣಿ 15: ಉತ್ತಮರ ಸಂಗ ಮಾಡಿ ತಂದೆ ತಾಯಿಗಳ ನಂಬಿಕೆಗೆ ತಕ್ಕಂತೆ ಬಾಳಿ ಬದುಕಿದರೆ ಮಕ್ಕಳ ಬದುಕಿಗೆ ಸಾರ್ಥಕತೆ ದೊರೆಯುತ್ತದೆ ಎಂದು ಮುಖ್ಯಮಂತ್ರಿ ಪದಕ ವಿಜೇತ ಅಥಣಿ ಪೊಲೀಸ್ ವೃತ್ತ ನೀರಿಕ್ಷಕ ಶಂಕರಗೌಡ ಬಸನಗೌಡ ಹೇಳಿದರು.

ಅವರು ಅಥಣಿಯ ಶೆಟ್ಟರ ಮಠದಲ್ಲಿ ಚೆನ್ನಮ್ಮ ಫೌಂಡೇಶನ್ ವತಿಯಿಂದ ವಿವೇಕಾನಂದ ಜಯಂತಿ ನಿಮಿತ್ತವಾಗಿ ಹಮ್ಮಿಕೊಂಡ ಸ್ಪಧರ್ಾತ್ಮಕ ಪರೀಕ್ಷೆಯಲ್ಲಿ ವಿಜೇತ ಅಭ್ಯಥರ್ಿಗಳಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ವಿಶೇಷ ಆಮಂತ್ರಿತರಾಗಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ವಿದ್ಯಾಥರ್ಿ ಬದುಕು ತಪಸ್ಸಿನಂತೆ ಓದು, ಅಧ್ಯಯನದಲ್ಲಿ ಕಳೆಯಬೇಕು. ಉತ್ತಮರ ಸಂಗ ಮಾಡಿ ಬದುಕು ಸಾರ್ಥಕ ಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಚೆನ್ನಮ್ಮ ಫೌಂಡೇಶನ್ ಸಾಮಾಜಿಕ ಕಳಕಳಿ ಸಾರ್ಥಕವಾದುದು ಎಂದು ಹೇಳಿದರು.

ಸಾನಿಧ್ಯವಹಿಸಿದ ಶೆಟ್ಟರ ಮಠದ ಮರುಳಸಿದ್ದ ಮಹಾಸ್ವಾಮಿಗಳು ಮನುಷ್ಯ ತಾನು ಬದುಕಿ ಇತರರೂ ಚನ್ನಾಗಿ ಬದುಕಲೆಂದು ಬಯಸುವವನು ನಿಜವಾದ ಮಾನವ ಉತ್ತಮ ಯುವಕರ ಸಂಘಟನೆಯ ಮೂಲಕ ಸಮಾಜದ ಕಳಕಳಿ ಹೊಂದಿರುವುದು ಶ್ಲಾಘನೀಯ ಸಂಘಟನೆ ಉತ್ತರೊತ್ತರವಾಗಿ ನಾಡಿನಲ್ಲಿ ಬೆಳೆಯಲಿ ಎಂದು ಹರಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಉಪನ್ಯಾಸಕ ಡಾ.ಆರ್ ಎಸ್ ದೊಡ್ಡನಿಂಗಪ್ಪಗೋಳ ಮಾತನಾಡಿ ವಿಧ್ಯಾಥರ್ಿಗಳು ಛಲ, ನಿಖರ ಗುರಿ, ಕಠಿಣ ತಪಸ್ಸಿನ ಮೂಲಕ ಸಾಧನೆ ಮಾಡಬೇಕು. ವಿದ್ಯೆಯ ಜೊತೆಗೆ ವಿನಯ ಮಾನವೀಯ ಗುಣಗಳನ್ನು ಅಳವಡಿಸಿಕೊಂಡು ವಿವೇಕಾನಂದ ರಂತೆ ಸಮಾಜಮುಖಿಯಾಗಿ ಬದುಕಿದಾಗ ಬದುಕು ಸಾರ್ಥಕ ಎಂದರು.

ನಂತರ ಚೆನ್ನಮ್ಮ ಫೌಂಡೇಶನ್ ಅಧ್ಯಕ್ಷ ಶಶಿಧರ ಬಲರ್ಿ, ಕರವೆ ತಾಲೂಕು ಅಧ್ಯಕ್ಷ ಅಣ್ಣಾಸಾಬ ತೇಲಸಂಗ, ರೈತಸಂಘದ ತಾಲೂಕಾ ಅಧ್ಯಕ್ಷ ಮಹಾದೇವ ಮಡಿವಾಳ, ನಾಗರಾಜ ಮಜ್ಜಗಿ, ಮುಖಂಡ ಪುಟ್ಟು ಹೀರೆಮಠ, ಜಿಲ್ಲಾ ಹೊರಾಟ ಸಮಿತಿ ಅಧ್ಯಕ್ಷ ಪ್ರಶಾಂತ ತೋಡಕರ ಮಾತನಾಡಿದರು.

ಈ ಸಂದರ್ಭದಲ್ಲಿ ಸಚಿನ ಅವಟಿ, ನಾಗರಾಜ ಸನದಿ, ನಾಗರಾಜ ಮಜ್ಜಿಗಿ, ಅಕ್ಷಯ ಯಾದವ, ಅನೀಲ ತೋಳಿ, ಪ್ರಹ್ಲಾದ ಬೇವನೂರ, ಸಿದ್ದಾರೂಢ ಬೇಳಗಲಿ, ಸಂತೋಷ ಪವಾರ, ಎಕಾನಂದ ಗುಡ್ಡಾಪುರ, ಅರುಣ ಹೊನವಾಡ ಇತರರು ಇದ್ದರು.


 

ಸುದ್ದಿ ಓದಿ