ಓದುವ ಹವ್ಯಾಸದೊಂದಿಗೆ ಭಾಷಾ ಪ್ರಭುತ್ವ ಗಳಿಸಲು ಕರೆ
ಹೂವಿನಹಡಗಲಿ 04: ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲಿ ಭಾಷೆ. ಕೌಶಲ್ಯಗಳನ್ನು ಸಮರ್ಥವಾಗಿ ಕಲಿತು ನಿರಂತರವಾಗಿ ಪುಸ್ತಕ. ಪತ್ರಿಕೆ ಗಳನ್ನು ಓದುವ ಮೂಲಕ ಭಾಷಾ ಪ್ರಭುತ್ವಗಳಿಸಬೇಕೆಂದು ಶಿಕ್ಷಕ ಹೆಚ್.ಜಿ.ಪಾಟೀಲ್ ಕರೆ ನೀಡಿದರು. ಶಾಲಾ ಶಿಕ್ಷಣ ಇಲಾಖೆ ಹಾಗೂ ಜೆಎಸ್ ಡಬ್ಲ್ಯೂ ರೂಮಟುರೀಡ್ ಸಹಯೋಗದೊಂದಿಗೆ ಹೂವಿನಹಡಗಲಿ ತಾಲ್ಲೂಕಿನ ಹುಗಲೂರು ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ನಮ್ಮ ನಡೆ ಓದಿನ ಕಡೆಗೆ ಅಭಿಯಾನದಲ್ಲಿ ಮಾತನಾಡಿದರು.
ಪಾಲಕರು ತಮ್ಮ ಮಕ್ಕಳಿಗೆ ಮೊಬೈಲ್. ಟಿವಿ ಯಿಂದ ಹೊರ ತಂದು ಓದು ಕಲಿಕೆಗೆ ಪ್ರೋತ್ಸಾಹ ನೀಡಬೇಕೆಂದರು.ಸಂಘಟನೆ ತಾ.ಸಂಯೋಜಕ ಕೆ.ಎಸ್.ರಂಗಸ್ವಾಮಿ ಮಾತನಾಡಿ ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸಲು ಸಂಸ್ಥೆ ಕಥೆ. ಪುಸ್ತಕ ಗಳನ್ನು ನೀಡಿ ಶಾಲಾ ಗ್ರಂಥಾಲಯ ನಿರ್ವಹಣೆ ಗೆ ನರವಾಗಿದೆ ಜತೆಗೆ ಕಲಿಕಾ ಪೂರಕ ಚಟುವಟಿಕೆ ಗೆ ಕ್ಯಾಲೆಂಡರ್ ಗಳನ್ನು ನೀಡಿದ್ದು ಇದರ ಸದುಪಯೋಗ ಪಡಿಸಿ ಕೊಳ್ಳಿ ಎಂದರು.ಮುಖ್ಯ ಗುರು ಕೆ.ಮಲ್ಲಪ್ಪ ಅಧ್ಯಕ್ಷ ತೆ ವಹಿಸಿದರು. ಶಾಲಾಭಿವ್ರದ್ದಿ ಸಮಿತಿ ಅದ್ಯಕ್ಷ ಅದ್ಯಕ್ಷ ಕೆ.ಹನುಮಂತ ಪ್ಪ. ಸದಸ್ಯ ರಾದ ಸುಧಾ ಹಾಲೇಶ. ಶಿಕ್ಷಕರಾದ. ವಿಜಯಕುಮಾರ್. ಎಸ್.ಎಸ್. ಪವಿತ್ರ ಇದ್ದರು.