ಸೇವೆಯಿಂದ ನಿವೃತ್ತಿ ಹೊಂದಿರುವ 3 ಜನ ಸೈನಿಕರಿಗೆ ಅದ್ಧೂರಿ ಸ್ವಾಗತ
ಕಾಗವಾಡ11; ಭಾರತ ಮಾತಾ ಕೀ ಜಯ್, ಒಂದೇ ಮಾತರಂ ಎಂಬ ಘೋಷಣೆಗಳು ಕೂಗುತ್ತಾ 17 ವರ್ಷ ಯಶಸ್ವಿಯಾಗಿ ದೇಶದ ಗಡಿ ರಕ್ಷಣೆ ಮಾಡಿ, ಸೇವೆಯಿಂದ ನಿವೃತ್ತಿ ಹೊಂದಿರುವ 3 ಜನ ಸೈನಿಕರನ್ನು ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣದ ಲಕ್ಷ್ಮೀ ನಗರದಲ್ಲಿ ಎಲ್ಲ ಜನರು ಒಂದುಗೂಡಿ ಅದ್ಧೂರಿವಾಗಿ ಸ್ವಾಗತಿಸಿ ಬರಮಾಡಿಕೊಂಡರು.
ಮಂಗಳವಾರ ಸಂಜೆ ಉಗಾರ ಖುರ್ದ ಲಕ್ಷ್ಮೀ ನಗರದಲ್ಲಿ ಸೇವೆಯಿಂದ ನಿವೃತ್ತಿ ಹೊಂದಿರುವ ಸೈನಿಕರನ್ನು ಸನ್ಮಾನಿಸುವ ಸಮಾರಂಭ ನೆರವೇರಿತು.
ಸೈನಿಕರಾದ ರಾಜೀವ ಜ್ಯೋತಿಬಾ ಪಾಟೀಲ, ಪ್ರಕಾಶ ಸುರೇಶ ಹಳವಾಯಿ ಮತ್ತು ವಿಜಯಕುಮಾರ ವೀರಭದ್ರ ಕಟಿಗೇರಿ ಈ ಮೂರು ಸೈನಿಕರಿಗೆ ಪುಷ್ಪವೃಷ್ಠಿ ಮಾಡಿ ಅದ್ಧೂರಿವಾಗಿ ಸನ್ಮಾನಿಸಿ ಬರಮಾಡಿಕೊಳ್ಳಲಾಯಿತು.
ಒಂದೇ ಗ್ರಾಮದ ಈ ಮೂರು ಜನ ಸೈನಿಕರು ಸೇವೆಯಲ್ಲಿ ಏಕಕಾಲಕ್ಕೆ ಪ್ರವೇಶಿಸಿದರು. ಈಗ ಮೂರು ಜನ ಏಕಕಾಲಕ್ಕೆ ನಿವೃತ್ತಿ ಹೊಂದಿದ್ದಾರೆ. ಇವರ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಒಂದುಗೂಡಿ ಗ್ರಾಮದಲ್ಲಿ ಅದ್ಧೂರಿವಾಗಿ ಸ್ವಾಗತಿಸಿದರು. ತಮ್ಮ ಸೇವೆ ಪೂರ್ಣಗೊಳಿಸಿ ನಿವೃತ್ತಿ ಹೊಂದಿದ್ದರಿಂದ ಎಲ್ಲ ಕುಟುಂಬಸ್ಥರು ಸಿಹಿ ಹಂಚಿ ಸಂತಸ ಹಂಚಿಕೊಂಡರು.
ಸನ್ಮಾನ ಸ್ವೀಕರಿಸಿ ನಿವೃತ್ತ ಸೈನಿಕ ರಾಜೀವ ಜ್ಯೋತಿಬಾ ಪಾಟೀಲ ಮಾತನಾಡುತ್ತಾ ದೇಶ ಸೇವೆ ಮಾಡುವ ಒಳ್ಳೆಯ ಅವಕಾಶ ನಮ್ಮ ಜೀವನದಲ್ಲಿ ಒದಿಗಿ ಬಂದಿತ್ತು. ಅದನ್ನು ನಾವು ಸಾರ್ಥಗೊಳಿಸಿದ್ದೇವೆ. ನಾವು ಮೂರು ಜನರು ರೈತಾಪಿ ಕುಟುಂಬದಲ್ಲಿ ಜನಿಸಿ ಇಲ್ಲೇ ಓದಿ ಸೈನಿಕರಾಗಲು ದೃಢ ನಿರ್ಧಾರ ಕೈಗೊಂಡು ಸೈನಿಕರಾದೇವಿ. ಗ್ರಾಮದ ಹಾಗೂ ಶಾಲೆಯ ಮತ್ತು ನಮ್ಮ ಕುಟುಂಬದ ಹೆಸರು ಉಜ್ವಲಗೊಳಿಸಿದ್ದೇವೆ. ಇಲ್ಲಿಯ ಯುವಕರು ದೇಶ ರಕ್ಷಣೆಗಾಗಿ ಮುಂದೆ ಬಂದರೆ ಎಲ್ಲ ರೀತಿ ಸಹಕಾರ ನೀಡುವದಾಗಿ ಹೇಳಿದರು. ಜೀವನದಲ್ಲಿ ಪ್ರತಿಯೊಬ್ಬರು ಸಾಧನೆ ಮಾಡಬೇಕೆಂದು ಯುವಕರಿಗೆ ಕಿವಿಮಾತು ಹೇಳಿ, ಗ್ರಾಮದಲ್ಲಿ ಅದ್ಧೂರಿವಾಗಿ ಸ್ವಾಗತಿಸಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.
ಗ್ರಾಮದ ಹಿರಿಯರು ಮತ್ತು ನಿವೃತ್ತ ಸೈನಿಕ ವಿಜಯಕುಮಾರ ಕಟಿಗೇರಿ ಇವರ ತಂದೆ ವೀರಭದ್ರ ಕಟಿಗೇರಿ ಮಾತನಾಡುವಾಗ, ಲಕ್ಷ್ಮೀ ನಗರ ಚಿಕ್ಕ ಗ್ರಾಮವಾಗಿದ್ದು, ಇಲ್ಲಿಂದ 15 ಜನರು ಸೈನಿಕರಾಗಿ ಗಡಿ ರಕ್ಷಣೆ ಮಾಡುತ್ತಿದ್ದಾರೆ. ಈ ಮೂರು ಜನ ಯುವಕರು ಒಂದೇ ಶಾಲೆಯಲ್ಲಿ ಓದಿ, ಏಕಕಾಲಕ್ಕೆ ಸೇವೆ ಪ್ರಾರಂಭಿಸಿ ಈಗ 17 ವರ್ಷ ಸೇವೆ ಸಲ್ಲಿಸಿ ಏಕಕಾಲಕ್ಕೆ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ಇವರನ್ನು ಗ್ರಾಮದಲ್ಲಿ ಅದ್ಧೂರಿವಾಗಿ ಸ್ವಾಗತಿಸಿದ್ದೇವೆ. ನಮ್ಮ ಗ್ರಾಮದ ಹೆಸರು ದೇಶ ಮಟ್ಟಕ್ಕೆ ಮುಟ್ಟಿಸಿದ್ದಕ್ಕೆ ಹೆಮ್ಮೆ ಎನ್ನಿಸುತ್ತಿದೆಯೆಂದರು. ಇನ್ನೂಳಿದ ಯುವಕರು ಇದೊಂದು ಮಾದರಿಯಾಗಿ ತೆಗೆದುಕೊಂಡು ದೇಶ ಸೇವೆ ಮಾಡಲು ಮುಂದೆ ಬರಬೇಕೆಂದರು.
17 ವರ್ಷ ಯಶಸ್ವಿವಾಗಿ ದೇಶ ರಕ್ಷಣೆ ಮಾಡಿ ನಿವೃತ್ತಿ ಹೊಂದು ಮರಳಿ ತಾಯಿನಾಡಿಗೆ ಬಂದಾಗ ಅದ್ಧೂರಿವಾಗಿ ಸ್ವಾಗತ ಪಡೆದು ಸಂತಸ ಹಂಚಿಕೊಳ್ಳುವಾಗ ಸೈನಿಕರು ಚಿಕ್ಕ ಮಕ್ಕಳಿಗೆ ಸಿಹಿ ಹಂಚಿ ಅವರೊಂದಿಗೆ ಬೆರೆತಿರುವ ದೃಶ್ಯ ಎದ್ದು ಕಾಣುತ್ತಿತ್ತು.
ಸನ್ಮಾನ ಸಮಾರಂಭದಲ್ಲಿ ಉಗಾರ ಪುರಸಭೆ ಸದಸ್ಯ ಮಹಾದೇವ ಕಟಿಗೇರಿ, ನಾಗೇಶ ದಾನೊಳ್ಳಿ, ಪ್ರಫೂಲ ಥೋರುಶೆ, ಸುದರ್ಶನ ಪಾಟೀಲ, ಕಾರ್ತಿಕೇಶ ಪಾಟೀಲ, ಜ್ಞಾನೇಶ್ವರ ಮಲ್ಲೇವಾಡಿ, ಮಹೇಶ ಪಾಟೀಲ, ಸಂದೀಪ ಪಾಟೀಲ, ಅಶೋಕ ಥೋರುಶೆ, ರವಿ ಪಾಟೀಲ, ಅಣ್ಣಾಸಾಹೇಬ ಪಾಟೀಲ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.