ಹೂವಿನಹಡಗಲಿಯಲ್ಲಿ ಕರಡಿ ಪ್ರತ್ಯಕ್ಷ

ಹೂವಿನಹಡಗಲಿ 06: ಪಟ್ಟಣದ ಮುದೇನೂರು ರಸ್ತೆಯಲ್ಲಿ ಮತ್ತು 5ನೇ ವಾರ್ಡಿನಲ್ಲಿ ಶುಕ್ರವಾರ ರಾತ್ರಿ ಸಮಯದಲ್ಲಿ ಕರಡಿ ಒಂದುಕಾಣಿಸಿಕೊಂಡಿದೆ. ಬೀದಿ ನಾಯಿಗಳು ಓಡಿಸಿಕೊಂಡ ಹೋಗಿರುವ ವಿಡಿಯೋ ನಾಗರಿಕರನ್ನು ಭಯ ಭೀತರಾಗಿದ್ದಾರೆ. ಪಟ್ಟಣದ ತುಂಗಭದ್ರಾ ಪ್ರೌಡಶಾಲೆ ಚರ್ಚ್‌ ಹಿಂಭಾಗ 5ನೇ ವಾರ್ಡ್‌ನಲ್ಲಿ  ಕಾಣಿಸಿಕೊಂಡಿದೆ. ಏಕಾಏಕಿ ನೋಡಿದ ಜನರು ಗಾಬರಿಗೊಂಡಿದ್ದಾರೆ. ಪಟ್ಟಣದಲ್ಲಿ ರಾತ್ರಿ ಕಾಣಿಸಿಕೊಂಡ ಕರಡಿಯನ್ನು ಬೀದಿನಾಯಿಗಳು ಓಡಿಸಿಕೊಂಡ ಹೋಗುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅರಣ್ಯ ಪ್ರದೇಶದಲ್ಲಿ ಕುಡಿಯಲು ನೀರು ಮತ್ತು ಆಹಾರ ಇಲ್ಲದೇ ನೀರು ಅರಸಿ ಕಾಡು ಪ್ರಾಣಿಗಳು ನಾಡಿನತ್ತ ಮುಖ ಮಾಡುತ್ತಿವೆ ಎನ್ನಲಾಗಿದೆ.