ಸಂತರ ನಡೆ ಸಾಮಾರಸ್ಯದ ಕಡೆಗೆ-ಶ್ರೀ ಸದಾಶಿವ ಸ್ವಾಮೀಜಿ
ಹೂವಿನಹಡಗಲಿ 04: ಧರ್ಮದಿಂದ ಈಡಿ ವಿಶ್ವಕ್ಕೆ ಶಾಂತಿ ಧರ್ಮದ ಮರ್ಮಮನ್ನು ಅರಿತುವರು ಮಾತ್ರ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಸದಾಶಿವ ಸ್ವಾಮಿಗಳು ಹೇಳಿದರು. ಪಟ್ಟಣದ ಗವಿಸಿದ್ದೇಶ್ವರ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಸಂತರ ನಡೆ ಸಾಮಾರಸ್ಯದ ಕಡೆಗೆ ವಿಕಾಸ ಯಾತ್ರೆಯ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. 12ನೇ ಶತಮಾನದಲ್ಲಿಯ ಅನುಭವ ಮಂಟಪ ವಚನಗಳು ಸತ್ತಸಂಗದ ದಾರಿ ದೀಪಗಳಾಗಿವೆ. ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿ ದೊಡ್ಡ ಕ್ರಾಂತಿಯನ್ನು ಮಾಡಿ ಸಾಮಾರಸ್ಯದ ಬದುಕು ಕಟ್ಟಿಕೊಳ್ಳಲು ಶರಣರು ತೋರಿಸಿದ ಮಾರ್ಗದಲ್ಲಿ ನಾವು ಸಾಗಬೇಕಾಗಿದೆ ಎಂದರು.
ಅಧ್ಯಕ್ಷತೆಯನ್ನು ಹಡಗಲಿ ಗವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಡಾ. ಹಿರಿಶಾಂತವೀರ ಮಹಾಸ್ವಾಮಿಗಳು ಸಮ್ಮುಖವನ್ನು. ನಂದಿಪುರ ಮಠದ. ಡಾ. ಮಹೇಶ್ವರ ಮಾಹಾಸ್ವಾಮಿಗಳು ವಹಿಸಿದ್ದರು. ಸಾನ್ನಿಧ್ಯವನ್ನು ರಾಮಾ ಸ್ವಾಮಿ ಮಠದ ಡಾ.ರಾಕೇಶಯ್ಯ ರಾಮಾ ಸ್ವಾಮಿಗಳು. ಹೀರೆಮಲ್ಲನಕೆರೆ ಮಠದ ಅಭಿನವ ಚನ್ನಬಸವ ಮಹಾಸ್ವಾಮಿಗಳು. ಕೊಂಬಳಿ ಚೌಕಿ ಮಠದ ಗಾಢಿತಾತನವರು. ಉತ್ತಂಗಿಯ ಶಂಕರಲಿಂಗೇಶ್ವರ ಮಾಹಾಸ್ವಾಮಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ವಿಕಾಸ ಅಕಾಡೆಮಿ ವಿಜಯನಗರ ಜಿಲ್ಲಾ ಸಂಚಾಲಕ ಎಂ ಬಿ ಬಸವರಾಜ, ವಿಕಾಸ ಯಾತ್ರೆಯ ಪ್ರಮುಖರಾದ ಓದೋ ಗಂಗಪ್ಪ. ಡಾ ಲಕ್ಷ್ಮಣ ನಾಯ್ಕ ಪೂಜಪ್ಪ, ಸಂಜೀವ ರೆಡ್ಡಿ, ಈ,ಟಿ ಲಿಂಗರಾಜ್ ಹಾಲೇಶ್ ನಾಯ್ಕ್, ಟಿ ಎಂ ಮಹೇಶ್ವರ ಸ್ವಾಮಿ, ವೀರೇಶ್ ಓಲಿ, ಪುನೀತ ಕುಮಾರ, ಹನುಮೇಶ್ ಅಕ್ಕಸಾಲಿ, ಕೋಡಿಹಳ್ಳಿ ಕೋಟ್ರೇಶ. ಧೂಪದ ಕೋಟ್ರೇಶ. ಜಭಿಯುಲ್ಲಾ. ಪರುಶುರಾಮ ಕಲಾಲ್, ರಾಮ್ ಮೂರ್ತಿ, ವಿಜಯಲಕ್ಷ್ಮಿ, ಗೀತಮ್ಮ, ಶರಣಪ್ಪ.ಶಿವನಗೌಡ. ಸೇರಿದಂತೆ ಇತರರು ಇದ್ದರು.