ರಾಣೆಬೆನ್ನೂರ

ಸಮಾಜ ವಿಜ್ಞಾನ ಶಿಕ್ಷಕರಿಗೆ ಒಂದು ದಿನದ ಕಾರ್ಯಗಾರ

ಸಮಾಜ ವಿಜ್ಞಾನ ಶಿಕ್ಷಕರಿಗೆ ಒಂದು ದಿನದ ಕಾರ್ಯಗಾರ

ರಾಣಿಬೆನ್ನೂರು:2 ಸಮಾಜ ವಿಜ್ಞಾನ ವಿಷಯ ಬೋಧನೆಯು ಪರಿಣಾಮಕಾರಿಯಾಗಲು ಶಿಕ್ಷಕರು ಕೇವಲ ಪಠ್ಯವಸ್ತುವಿಗೆ ಅವಲಂಭಿತರಾಗದೇ ವಿದ್ಯಾರ್ಥಿಗಳ ಕಲಿಕಾಂಶವನ್ನು ದಿನ ನಿತ್ಯ ಜೀವನಕ್ಕೆ ಸಮನ್ವಯಿಕರಿಸಿ ಬೋಧಿಸಬೇಕು. ಸಮಾಜ ವಿಜ್ಞಾನ ಎಲ್ಲ ವಿಷಯಗಳ ತಾಯಿ ಇದ್ದಂತೆ. ಸಾಮಾಜಿಕ ಶಾಂತಿ ಮತ್ತು ಸಾಮರಸ್ಯ ಮೂಡಿಸುವ ಮಹತ್ತರ ಜವಾಬ್ದಾರಿ ಈ ವಿಷಯಕ್ಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ ಹೇಳಿದರು.   

ಇಲ್ಲಿನ ಕೆಎಲ್‌ಇ ಸಂಸ್ಥೆಯ ರಾಜರಾಜೇಶ್ವರಿ ಪ್ರೌಢ ಶಾಲೆ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ತಾಲ್ಲೂಕು ಸಮಾಜ ವಿಜ್ಞಾನ ವಿಷಯ ವೇದಿಕೆ ಮತ್ತು ರಾಜರಾಜೇಶ್ವರಿ ಪ್ರೌಢಶಾಲೆಯ ಆಶ್ರಯದಲ್ಲಿ ಏರಿ​‍್ಡಸಿದ ತಾಲ್ಲೂಕಿನ ಎಲ್ಲಾ ಸಮಾಜ ವಿಜ್ಞಾನ ಶಿಕ್ಷಕರಿಗೆ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಅವಶ್ಯಕತೆ ಇರುವ ಎಲ್ಲ ಅಂಶಗಳನ್ನು ಕಾರ್ಯಾಗಾರದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಬೇಕು. ತರಗತಿ ಪ್ರಕ್ರಿಯೆಗಳು ಸುಲಲಿತವಾಗಿ ನಡೆಯಲು ಕಾರ್ಯಾಗಾರಗಳ ಅವಶ್ಯಕತೆ ಇದೆ ಎಂದರು. 

ಕಾರ್ಯಗಾರದಲ್ಲಿ ಬದಲಾದ ಪಠ್ಯಪುಸ್ತಕ, ಪಠ್ಯಪುಸ್ತಕದಲ್ಲಿನ ಸವಾಲುಗಳು, ಬದಲಾಗಬಹುದಾದ ಪ್ರಶ್ನೆ ಪತ್ರಿಕೆ ಸ್ವರೂಪ, ಸುಲಭ ಕಲಿಕಾ ಉಪಕರಣಗಳ ತಯಾರಿ ಕುರಿತು ವಿವಿಧ ಸಂಪನ್ಮೂಲ ಶಿಕ್ಷಕರು ತರಬೇತಿ ನೀಡಿದರು. 

ಇದೇ ಸಂದರ್ಭದಲ್ಲಿ ಅನುದಾನಿತ ಶಾಲೆಯಲ್ಲಿ ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶ ಸಾಧಿಸಿದ ಶಿಕ್ಷಕರನ್ನು ಹಾಗೂ ಕಳೆದ ಸಾಲಿನಲ್ಲಿ ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಮಾಜ ವಿಜ್ಞಾನ ವಿಷಯಕ್ಕೆ ನೂರಕ್ಕೆ ನೂರು ಅಂಕ ಗಳಿಸಿದ ತಾಲ್ಲೂಕಿನ ಮಾಕನೂರು ಗ್ರಾಮದ ಶ್ರೀ ಮಾಕಂರ್ಡೇಶ್ವರ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿ ಲತಾ ಬೆಳವಿಗಿ ಅವರನ್ನು ಸನ್ಮಾನಿಸಲಾಯಿತು. 

ಜಿಲ್ಲಾ ಮಾಧ್ಯಮಿಕ ಶಾಲಾ ನೌಕರ ಸಂಘದ ಅಧ್ಯಕ್ಷ ಎಚ್‌.ಪಿ ಬಣಕಾರ, ಶಿವರಾಜ ಅಡರಕಟ್ಟಿ, ರಾಜೇಶ್ವರಿ ಪ್ರೌಢ ಶಾಲೆಯ ಉಪಪ್ರಾಚಾರ್ಯ ಪ್ರಲ್ಹಾದ ಪಿ. ಸಮಾಜ ವಿಜ್ಞಾನ ತಾಲ್ಲೂಕು ಘಟಕದ ವೇದಿಕೆ ಅಧ್ಯಕ್ಷ ದೇವೇಂದ್ರ​‍್ಪ ಬಿಸಲಹಳ್ಳಿ, ಉಪಾಧ್ಯಕ್ಷ ಬಿಜಿ ತಾಯಮ್ಮನವರ,  ಹೇಮಗಿರಿ ಕೋರಿ, ನಂದೀಶ ಬೆಳಕೇರಿ ಹಾಜರಿದ್ದರು. 


ಸುದ್ದಿ ಓದಿ