ಅಥಣಿ

ಅಥಣಿಯಲ್ಲಿ 14.5 ಅಡಿ ಎತ್ತರದ ಬಸವ ಮೂರ್ತಿ ಪ್ರತಿಷ್ಠಾನ ಮೆರವಣಿಗೆ

ಅಥಣಿಯಲ್ಲಿ 14.5 ಅಡಿ ಎತ್ತರದ ಬಸವ ಮೂರ್ತಿ ಪ್ರತಿಷ್ಠಾನ ಮೆರವಣಿಗೆ

ಅಥಣಿ23: ಜಗಜ್ಯೋತಿ ಬಸವೇಶ್ವರ ಭವ್ಯಮೂರ್ತಿ ಪ್ರತಿಷ್ಠಾಪಣೆ ಮೆರವಣಿಗೆಯನ್ನು ಗಚ್ಚಿನಮಠದ ಶಿವಬಸವ ಮಹಾಸ್ವಾಮಿಗಳು, ಮೋಟಗಿ ಮಠದ ಪ್ರಭುಚನ್ನಬಸವ ಮಹಾಸ್ವಾಮಿಗಳು ಹಾಗೂ ಶೆಟ್ಟರ ಮಠದ ಮರುಳಸಿದ್ದ ಮಹಾಸ್ವಾಮಿಗಳು ಹಾಗೂ ಇತರ ಗಣ್ಯರು ಸೇರಿ ಉದ್ಘಾಟಿಸಿದರು.ಅಥಣಿಯಲ್ಲಿ ಬೃಹತ್ ಪ್ರಮಾಣ 14.5 ಅಡಿ ಎತ್ತರದ ಬಸವೇಶ್ವರರ ಮೂರ್ತಿಯನ್ನು ಪ್ರತಿಷ್ಠಾಪಿಸುವುದು ನಮ್ಮ ಬಸವೇಶ್ವರ ಸರ್ಕಲ್ ಕಮಿಟಿ ಹಾಗೂ ಅಥಣಿ ಜನತೆಯ ಆಶಯವಾಗಿತ್ತು. ಅದರಂತೆ ಇವತ್ತು ಮೂರ್ತಿಯನ್ನು ನಿರ್ಮಾಣ ಮಾಡಿಸಿ ಅಥಣಿ ನಗರಕ್ಕೆ ತಂದು ಬಸವೇಶ್ವರ ಸರ್ಕಲ್ನಲ್ಲಿ ಕೋವಿಡ್ ನಿಯಮಾವಳಿ ಪ್ರಕಾರ ಸರಳವಾಗಿ ಪ್ರತಿಷ್ಠಾಪಿದ್ದೇವೆ. ಶೀಘ್ರದಲ್ಲಿ ಮಹಾಮಾರಿ ಕೊರೋನಾ ಕಡಿಮೆಯಾದ ನಂತರ ಮೂರ್ತಿ ಹಾಗೂ ಸರ್ಕಲ್ ಉದ್ಘಾಟನೆಯನ್ನು ವಿಜ್ರಂಭನೆಯಿಂದ ಮಾಡಲಾಗುತ್ತದೆ ಎಂದು ಕಮಿಟಿ ಅಧ್ಯಕ್ಷ ರಮೇಶ ಕಾಗಲೆ ಅವರು ತಿಳಿಸಿದ್ದಾರೆ.ಕೋವಿಡ್ ನಿಯಮಾವಳಿ ಪ್ರಕಾರ ಸಾಮಾಜಿಕ ಅಂತರ ಕಾಯ್ದುಕೊಂಡು ಭಜನೆ ಪದಗಳನ್ನು ಹಾಡುತ್ತಾ ಶಿವಾಜಿ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಮೆರವಣಿಗೆ ಜರುಗಿತು.ಈ ವೇಳೆ ಡಾ ಪ್ರಕಾಶ ಕುಮಠಳ್ಳಿ, ಧರೆಪ್ಪ ಠಕ್ಕನ್ನವರ, ಗಜಾನನ ಮಂಗಸೂಳಿ, ಸಿದ್ದಾರೂಢ ಸವದಿ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಕವಲಾಪೂರೆ, ಪಿಎಸೈ ಕುಮಾರ ಹಾಡಕರ, ಎಸ್ ಕೆ ಬುಟಾಳಿ, ಪ್ರಕಾಶ ಮಹಾಜನ, ರಮೇಶ ಕಾಗಲೆ, ಅಸ್ಲಮ್ ನಾಲಬಂದ, ಶ್ರೀಶೈಲ ನಾಯಿಕ, ಶಿವಾನಂದ ಹುನ್ನೂರ, ರಾಮಣ್ಣಾ ಧರಿಗೌಡ, ಶಿವಾನಂದ ದಿವಾನಮಳ, ಮಹಾಂತೇಶ ಹಡಪದ, ರಾಮು ಬಡಕಂಬಿ, ಶಿವಾನಂದ ನಾಯಿಕ, ಶಿವರುದ್ರ ಘೂಳಪ್ಪನವರ, ಎ ಎಮ್ ಖೋಬ್ರಿ, ಶಿವಾನಂದ ಚಮಕೇರಿ, ಪರಶುರಾಮ ಸೋನಕರ, ರವಿ ಬಡಕಂಬಿ, ಸೇರಿದಂತೆ ಇತರರು ಉಪಸ್ಥಿತರಿದ್ದರು. ಅಥಣಿಯಲ್ಲಿ 14.5 ಅಡಿ ಎತ್ತರದ ಬಸವ ಮೂರ್ತಿ ಪ್ರತಿಷ್ಠಾನ ಮೆರವಣಿಗೆ ಚಾಲನೆ ನೀಡಿದ ಗಣ್ಯರು

ಸುದ್ದಿ ಓದಿ