ರಾಣೆಬೆನ್ನೂರ

ಬೆರಳಚ್ಚು, ಶೀಘ್ರಲಿಪಿಯಲ್ಲಿ ಮಮತಾ ವಾಣಿಜ್ಯ ವಿದ್ಯಾಸಂಸ್ಥೆಗೆ ಶೇ.90ರಷ್ಟು ಫಲಿತಾಂಶ

ಬೆರಳಚ್ಚು, ಶೀಘ್ರಲಿಪಿಯಲ್ಲಿ  ಮಮತಾ ವಾಣಿಜ್ಯ ವಿದ್ಯಾಸಂಸ್ಥೆಗೆ ಶೇ.90ರಷ್ಟು ಫಲಿತಾಂಶ

ರಾಣೇಬೆನ್ನೂರು 3: ಕಳೆದ ಜುಲೈ 2023 ರಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ನಡೆಸಿದ ಬೆರಳಚ್ಚು ಮತ್ತು ಶೀಘ್ರಲಿಪಿ ಫಲಿತಾಂಶ ಪ್ರಕಟವಾಗಿದ್ದು ಇಲ್ಲಿನ ಪ್ರತಿಷ್ಠಿತ ಮಮತಾ ವಾಣಿಜ್ಯ ವಿದ್ಯಾಸಂಸ್ಥೆಗೆ ಶೇ.90 ರಷ್ಟು ಫಲಿತಾಂಶ ದೊರೆತಿದೆ. 

ಪರೀಕ್ಷೆಗೆ ಹಾಜರಾದ ಒಟ್ಟು 124 ವಿದ್ಯಾರ್ಥಿಗಳಲ್ಲಿ 24 ಉನ್ನತ, 33 ಪ್ರಥಮ, 38 ದ್ವಿತೀಯ, 18 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 

ಆಂಗ್ಲ ಬೆರಳಚ್ಚು ಪ್ರಥಮ ದರ್ಜೆಯಲ್ಲಿ ಕು. ತೇಜಸ್ವಿನಿ ಬಾಳಿಕಾಯಿ (96ಅ), ಅಭಿಷೇಕ ಲಮಾಣಿ (92ಅ), ವಿದ್ಯಾ ಕ್ಯಾದಗಿ (92ಅ), ಗಾಯತ್ರಿ ಗುಲಗಂಜಿ (92ಅ), ಪ್ರೌಢ ದರ್ಜೆಯಲ್ಲಿ ಗೀತಾ ಬ್ಯಾಡಗಿ (92ಅ), ತುಳಜಾ ಚಿನ್ನಿಕಟ್ಟಿ (92ಅ),  

ಕನ್ನಡ ಬೆರಳಚ್ಚು ಪ್ರಥಮ ದರ್ಜೆಯಲ್ಲಿ ಐಶ್ವರ್ಯ ನಾಯ್ಕ (94ಅ), ಪ್ರಿಯಾ ಪುಟ್ಟನಗೌಡರ (93ಅ), ಹಾಗೂ ಪ್ರೌಢ ದರ್ಜೆಯಲ್ಲಿ ಶಿಲ್ಪಾ, ಚೈತ್ರಾ, ಪೂರ್ಣಿಮಾ (88ಅ) ಗಳಿಸಿ ಜಿಲ್ಲೆಗೆ ಪ್ರಥಮರಾಗಿದ್ದಾರೆ. 

ಕು. ಮಾಲಾ ಹೂಲಿಹಳ್ಳಿ, ಮಂಜುಳಾ, ಸಾನಿಯಾ ಸೈಯದಮೀನ, ಪ್ರಿಯಾಂಕಾ ಕುಮಾರಸ್ವಾಮಿ, ನಿರ್ಮಲಾ, ಅಸ್ಟಮೂರ್ತಿ, ಸಚಿನ್, ಲಕ್ಷ್ಮಿ, ಕಾವ್ಯ, ಶ್ರೇಯಾ ಬಣ್ಣದ ಇವರು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 

ಶೀಘ್ರಲಿಪಿಯಲ್ಲಿ ಕು. ರಾಧಿಕಾ, ಕಾವೇರಿ, ಶಾರದಾ, ಭಾಗ್ಯ, ಬಿಂದು, ಸತೀಶಕುಮಾರ, ರುಬೀನಾ, ಮಲ್ಲಿಕಾರ್ಜುನ, ಸುಮಲತಾ, ನಿರಂಜನ, ನೀರಲಗಿ, ಕಾರ್ತಿಕ, ನೀಖೀತಾ, ಭಾರತಿ ಇವರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.  

ಸಂಸ್ಥೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಪ್ರಾಚಾರ್ಯ ಎಸ್‌.ಬಿ. ಅಂಗಡಿ ಅಭಿನಂದಿಸಿದ್ದಾರೆ. 


ಸುದ್ದಿ ಓದಿ