ಜಮಖಂಡಿ

ಡಿ.25 ರಂದು 8ನೇ ಕನ್ನಡ ಸಾಹಿತ್ಯ ಸಮೇಳನ

ಡಿ.25 ರಂದು 8ನೇ ಕನ್ನಡ ಸಾಹಿತ್ಯ ಸಮೇಳನ

ಲೋಕದರ್ಶನ ವರದಿ, 

ಜಮಖಂಡಿ : ಡಿ.25 ರಂದು 8ನೇ ಕನ್ನಡ ಸಾಹಿತ್ಯ ಸಮೇಳನದ ಪ್ರತಿಯೊಂದಕ್ಕೂ ಸಾಹಿತಿಗಳು, ಶರಣರ ಹೆಸರನ್ನು ಇಡಲಾಗಿದೆ, 7.15 ಕ್ಕೆ ರಾಷ್ಟ್ರ ಧ್ವಜವನ್ನು ಶಾಸಕ ಆನಂದ ನ್ಯಾಮಗೌಡ, ಪರಷತ್ತಿನ ಧ್ವಜ ಶಿವಾನಂದ ಶೆಲ್ಲಿಕೇರಿ, ಕನ್ನಡ ಧ್ವಜವನ್ನು ಸಂತೋಷ ತಳಕೇರಿ ಅವರು ನೇರವರಿಸಲಿದ್ದಾರೆಂದು ನ್ಯಾಯವಾದಿ ಎನ್,ಎಸ್,ದೇವರವರ ತಿಳಿಸಿದರು.  

ನಗರದ ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಬಸವ ಭವನದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮೇಳವು ಶರಣ ಈಶ್ವರ ಮಂಟೂರ, ಮಲ್ಲಯ್ಯಾ ಸ್ವಾಮಿ ಅಥಣಿ, ಅರ್ಜುನ ಕೋರಟಕರ, ಅಪ್ಪಾಲಾಲ ನಧಾಪ ಇವರ ಹೆಸರಿನಲ್ಲಿ ಪ್ರಧಾನ ವೇದಿಕೆ, ಮಹಾದ್ವಾರ, ಮಳಿಗೆಗಳು ಪ್ರಾರಂಭಗೊಳ್ಳುತ್ತವೆ. ಬೆಳಗ್ಗೆ 8 ಗಂಟೆಗೆ ಕನ್ನಡ ಭುವನೇಶ್ವರಿ ಭಾವಚಿತ್ರ ಮೆರವಣಿಗೆಯು ಹಳೇ ತಹಸಿಲದಾರ ಕಚೇರಿಯಿಂದ ಪ್ರಾರಂಭಗೊಂಡು ನಗರದ ಪ್ರಮುಖ ರಸ್ತೆಯ ಮೂಲಕ ಸಂಚರಿಸಿ ಬಸವ ಭವನ ತಲುಪುವುದು ಎಂದರು. 

ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಯನ್ನು ಓಲೇಮಠದ ಡಾ, ಚನ್ನಬಸವ ಶ್ರೀಗಳು ಉದ್ಘಾಟಿಸುವರು. ಶಾಸಕ ಆನಂದ ನ್ಯಾಮಗೌಡ ಅಧ್ಯಕ್ಷತೆ ವಹಿಸುವರು. ಡಾ ಓಂಕಾರ ಕಾಕಡೆ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಜಿಲ್ಲಾ ಉಸ್ತುವರಿ ಸಚಿವ ಸಿ,ಸಿ,ಪಾಟೀಲ, ಸಚಿವರಾದ ಗೋವಿಂದ ಕಾರಜೋಳ, ಮುರಗೇಶ ನಿರಾಣಿ, ಸಂಸದ ಪಿ, ಸಿ, ಗದ್ದಿಗೌಡರ ಸಮ್ಮೇಳನಾಧ್ಯಕ್ಷತೆಯನ್ನು ವಹಿಸಿಕೊಳ್ಳುವರು. 12 ಗಂಟೆಗೆ ಕೃಷಿ ಮತ್ತು ಸಂವಿಧಾನ ಕುರಿತು ಮೊದಲನೆ ಗೋಷ್ಠಿಯನ್ನು ಪ್ರೋ ಬಸವರಾಜ ಕಡ್ಡಿ ಅವರು ನಡೆಸಲಿದ್ದು. ಸಾನಿಧ್ಯ ಕೊಣ್ಣೂರ ಮಠದ ಡಾ,ವಿಶ್ವಪ್ರಭು ಶ್ರಿಗಳು ವಹಿಸುವರು. ಉಪನ್ಯಾಸ ಮಲ್ಲಿಕಾರ್ಜುನ ಇಚಿಡಿ, ಬಸವರಾಜ ಗಿರಿಗಾಂವಿ, ಎನ್,ಎಸ್, ದೇವರವರ ನಡೆಸುವರು. 2.15ಕ್ಕೆ ಎರಡನೇದ್ದು ಕವಿಗೋಷ್ಠಿಯಲ್ಲಿ  ಗೌರಿಶಂಕರ ಶ್ರೀಗಳು ಸಾನಿಧ್ಯ ವಹಿಸಿಕೊಳ್ಳುವರು. ಶಾರದಾ ಮುಳ್ಳೂರ ನಡೆಸುವರು. 3.15 ಕ್ಕೆ ಮೂರನೇ ಗೋಷ್ಠಿಯಲ್ಲಿ ರುದ್ರಾವಧೂತ ಮಠದ ಸಹಜಾನಂದ ಅವಧೂತರು ಸಾನಿಧ್ಯ ವಹಿಸಿವರು. ಡಾ,ಟಿ,ಪಿ,ಗಿರಡ್ಡಿ, ಸಂತೋಷ ತಳಕೇರಿ ಭಾಗವಹಿಸುವರು. ಸಂಜೆ 4.15 ಕ್ಕೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 45 ಸಾಧಕರಿಗೆ ಸನ್ಮಾನ ಸಮಾರಂಭ ನಡೆಯುತ್ತದೆ. ಸಂಜೆ 6 ಕ್ಕೆ ಸಂಸ್ಕೃತಿಕ ಕಾರ್ಯಕ್ರಮದ ಸಾನಿಧ್ಯವನ್ನು ರುದ್ರಾವಧೂತ ಮಠದ ಕೃಷ್ಣಾನಂದ ಅವಧೂತ ಶ್ರೀಗಳು ವಹಿಸುವರು. ಉಪವಿಭಾಗಾಧಿಕಾರಿ ಡಾ ಸಿದ್ದು ಹುಲ್ಲೊಳ್ಳಿ, ತಹಶೀಲ್ದಾರ ಸದಾಶಿವ  ಮಕ್ಕೋಜಿ ಭಾಗವಹಿಸುವರು. ಶಾಸಕರು,ಸಚಿವರು, ಸಾಹಿತಿಗಳು, ಶರಣರು ಭಾಗಿಯಾಗಲಿದ್ದಾರೆ. ಸುಮಾರು 5 ಸಾವಿರಕ್ಕೂ ಅಧಿಕ ಜನರಿಗೆ ಊಟದ ಮತ್ತು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು. 

ಇದೇ ಸಂಧರ್ಭದಲ್ಲಿ ಕಸಾಪ ತಾಲೂಕಾಧ್ಯಕ್ಷ ಸಂತೋಷ ತಳಕೇರಿ, ಡಾ, ಟಿಪಿ.ಗಿರಡ್ಡಿ, ನರಸಿಂಹ ಕಲ್ಲೊಳ್ಳಿ, ವಿನೋದ ಲೋಣಿ, ಸಂಗಮೇಶ ಉಟಗಿ, ಸಂಗು ಮುತ್ತಿನಕಂತಿಮಠ, ವಾದಿರಾಜ ದೇಸಪಾಂಡೆ ಸುದ್ದಿಗೋಷ್ಠಿಯಲ್ಲಿ ಇದ್ದರು, 


ಸುದ್ದಿ ಓದಿ