ರಾಣೆಬೆನ್ನೂರ

ರೇಣುಕಾಂಬ ಕ್ಷೇಮಾಭಿವೃದ್ಧಿ ಸಹಕಾರಿ ಸಂಘದ 8ನೇ ವಾರ್ಷಿಕೋತ್ಸವ ಮಹಾಸಭೆ

ರೇಣುಕಾಂಬ ಕ್ಷೇಮಾಭಿವೃದ್ಧಿ ಸಹಕಾರಿ ಸಂಘದ 8ನೇ ವಾರ್ಷಿಕೋತ್ಸವ ಮಹಾಸಭೆ

ರಾಣೇಬೆನ್ನೂರು: ಸೆ 3ಶ್ರೀ ರೇಣುಕಾಂಬ ಕ್ಷೇಮಾಭಿವೃದ್ಧಿ ಸಹಕಾರ ಸಂಘವು ತತ್ವದ ಆಧಾರದ ಮೇಲೆ 2017 ರಲ್ಲಿ ಪ್ರಾರಂಭವಾಗಿ ಇಂದಿಗೆ 7 ವರ್ಷ ಮುಗಿಸಿದೆ. ಸರ್ವ ಸದಸ್ಯರ ಸಹಕಾರದಿಂದ ಸಂಸ್ಥೆಯು ಗಣನೀಯ ಪ್ರಮಾಣದಲ್ಲಿ ಪ್ರಗತಿಯನ್ನು ಸಾಧಿಸಿದ್ದು, ಸಹಕಾರ ಸಂಘಗಳ ಸಹಕಾರದಿಂದ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಈ ಸಹಕಾರಿ ಸಂಘ ನಿದರ್ಶನವಾಗಿದೆ ಎಂದು   ಸಂಘದ ಅಧ್ಯಕ್ಷ ಹೆಚ್‌. ಎಂ. ಓವಿಕೊಪ್ಪದ ಹೇಳಿದರು.  

ಅವರು ತಾಲೂಕಿನ ಕರೂರು ಗ್ರಾಮದ ಶ್ರೀ ರೇಣುಕಾಂಬ ಕ್ಷೇಮಾಭಿವೃದ್ಧಿ ಸಹಕಾರಿ ಸಂಘ ಕಚೇರಿಯಲ್ಲಿ ನಡೆದ 8ನೇ ವಾರ್ಷಿಕೋತ್ಸವ ಹಾಗೂ ಸರ್ವ ಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು 8ನೇ ವರ್ಷದ ಸಹಕಾರ ಸಂಘದ ವಾರ್ಷಿಕ ವರದಿ, ತಾತ್ಕಾಲಿಕ ವ್ಯಾಪಾರಿ ಪತ್ರಿಕೆ, ಜಮಾ- ಖರ್ಚು, ಲಾಭ ಹಾನಿ, ಮತ್ತು ಸಾಲ-ಜಿಂದಗಿ ಪತ್ರಿಕೆಯನ್ನು ನೋಡಿದಾಗ ಕೆಲವೇ ವರ್ಷಗಳಲ್ಲಿ ಅಭಿವೃದ್ಧಿಯತ್ತ ಸಾಗುತ್ತಿರುವುದು ಸಂತಸದ ವಿಚಾರವಾಗಿದೆ. ಎಂದರು.  

ನಾವೆಲ್ಲರೂ ತನು-ಮನ-ಧನದಿಂದ ಭೇದ-ಭಾವಗಳನ್ನು ಮರೆತು, ಸಹಕಾರವೇ ಸ್ವರ್ಗ ಸರ್ವಸ್ವವೆಂದು ಸಂಸ್ಥೆಯನ್ನು ಬೃಹತ್ತಾಗಿ ಬೆಳೆಸಬೇಕಾಗಿದೆ. ಮತ್ತಷ್ಟು  ಪ್ರಗತಿಯತ್ತ ಸಾಗಬೇಕಾಗಿದೆ ಎಂದ ಅವರು  ತಮ್ಮೆಲ್ಲರ ಸಹಾಯ, ಸಹಕಾರ ಮುಖ್ಯವಾಗಿದೆ ಎಂದರು. 

ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕನ್ನನಗೌಡರ ಮಾತನಾಡಿ ಸಹಕಾರಿ ಸಂಘಗಳ ಜೊತೆ ಸರ್ವ ಸದಸ್ಯರು ಉತ್ತಮ ಬಾಂಧವ್ಯ ಹೊಂದಿ ಹೆಚ್ಚು ವ್ಯವಹಾರ ಮಾಡಿದಾಗ ಅಭಿವೃದ್ಧಿ ಹೊಂದಲು ಸಾಧ್ಯ. ಸಾಲದ ಜೊತೆಗೆ ಠೇವಣಿಯನ್ನು ಇಟ್ಟರೆ ಅದಕ್ಕೆ ಬಡ್ಡಿ ಅಥವಾ ಡಿವಿಡೆಂಡ್ ರೂಪದಲ್ಲಿ ಹಣವನ್ನು ನೀಡಲಾಗುವುದು. ಸರ್ವ ಸದಸ್ಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಸಂಘದ ಕುಂದು ಕೊರತೆಗಳಿದ್ದರೆ ನೇರವಾಗಿ ನಮ್ಮ ಬಳಿ ಬಂದು ಮಾತನಾಡಿ, ಸಂಘದ ಸದಸ್ಯರು ನಿಮ್ಮ ಡಿವಿಡೆಂಡ್ ಹಣವನ್ನು ಎಸ್ ಬಿ ಖಾತೆಗೆ ವರ್ಗಾವಣೆ ಮಾಡಲಾಗುವುದು.  

ಇದು ಮುಂದೊಂದು ದಿನ ನಮ್ಮ ಸಂಘದ ಸದಸ್ಯರಿಗೆ ಅನುಕೂಲವಾಗಲಿದೆ. ಸಂಘದಲ್ಲಿ ಎಸ್ ಬಿ  ಖಾತೆಯನ್ನು ಹೊಂದಿದ್ದರೆ ಇನ್ನಷ್ಟು ಉತ್ತಮವಾಗಿರುತ್ತದೆ ಎಂದರು.  ಆಹ್ವಾನಿತರಾಗಿಡ್ಡ ರಾಜೇಂದ್ರ ಡಿ. ಎನ್‌. ಪತ್ರಕರ್ತ ನಿಂಗರಾಜ ಗುದಗೇರ, ಮತ್ತು ಗ್ರಾಮದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.  

ಎಂ ಎನ್ ಕನ್ನಗೌಡರ ಅವರು ವಾರ್ಷಿಕ ವರದಿ ವಾಚಿಸಿದರು.ಇದೇ ಸಂದರ್ಭದಲ್ಲಿ ಸಿ.ಎಮ್‌. ಹೆಗ್ರ​‍್ಪನವರ, ಚಿಕ್ಕಪ್ಪ ಜಿ. ತಾವರಗೊಂದಿ, ಉಮಾ ಬಿ.ಮುದೃಪ್ಪಳವರ, ಗಣೇಶ ಎಸ್‌.ಕೆ, ನೀಲಕಂಠಪ್ಪ ಎನ್ . ಹಾದೇರ ಸೋಮಲಿಂಗಪ್ಪ ಕೆ. ಎಲಿಗಾರ, ಅನಂತರಾಜ ಎನ್‌.ನಾಗಪ್ಪನವರ, ಬಸಪ್ಪ ಎಸ್, ಎ,ಎಂ. ಅರುಣಕುಮಾರ, ಶಂಕ್ರಮ್ಮ ಆರ್ಕೆ, ಮುಬಾರಕ್ ಬಿರಾದಾರ, ಅನಿಲ್ ಬಗಾಡೆ, ಗಣೇಶ್ ನಂದಿಗಾವಿ ಸೇರಿದಂತೆ ಮತ್ತಿತರ ಮುಖಂಡರು, ಸದಸ್ಯರು ಪಾಲ್ಗೊಂಡಿದ್ದರು. 


ಸುದ್ದಿ ಓದಿ