ಕಾಗವಾಡ

ಮಹಾವೀರ ಜೈನ ಮಂದಿರದ 8ನೇ ವಾರ್ಷಿಕೋತ್ಸವ ಕಾರ್ಯಕ್ರಮ

ಮಹಾವೀರ ಜೈನ ಮಂದಿರದ 8ನೇ ವಾರ್ಷಿಕೋತ್ಸವ ಕಾರ್ಯಕ್ರಮ

ಕಾಗವಾಡ 28: ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮದ ಭಗವಾನ್ ಮಹಾವೀರ ಜೈನ ಮಂದಿರದ 8ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಮುಕ್ತಾಯ ಸಮಾರಂಭದಲ್ಲಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಮಹಾಶೂರದಾನಿಗಳಾದ ಮಹಾವೀರ ಪಡ್ನಾಡ ಇವರಿಂದ ಸಾವಿರಾರು ಮಹಿಳೆಯರಿಗೆ, ಪುರುಷರಿಗೆ, ಯುವತಿಯರಿಗೆ ಉಡುಗರೆ ದಾನವಾಗಿ ನೀಡಿ ಮಾನವೀಯತೆ ಮೆರೆದರು.

ರವಿವಾರ ರಂದು ಉಗಾರ ಬುದ್ರುಕ ಗ್ರಾಮದ ಮಹಾವೀರ ನಗರದ ಭಗವಾನ್ ಮಹಾವೀರ ಮಂದಿರದಲ್ಲಿ 8ನೇ ವಾರ್ಷಿಕೋತ್ಸವ ನಿಮಿತ್ಯ 1 ದಿನದ ಭಕ್ತಾಂಬರ ವಿಧಾನ ಕಾರ್ಯಕ್ರಮ ನೆರವೇರಿತು. ಮುಕ್ತಾಯ ಸಮಾರಂಭಕ್ಕೆ ಅತಿಥಿಗಳಾಗಿ ಮಹಾವೀರ ಪಡ್ನಾಡ ಆಗಮಿಸಿದ್ದರು. ಇವರು ಕಳೆದ ಕೆಲ ವರ್ಷಗಳಿಂದ ದೀಪಾವಳಿ, ದಸರಾ ಹಬ್ಬದ ನಿಮಿತ್ಯ ಚಿನ್ನ, ಬೆಳ್ಳಿಯ ಆಭರಣಗಳು ಹೆಣ್ಣು ಮಕ್ಕಳಿಗೆ ಮೂಗಿನ ಮುಗ್ಗಟು, ಅಂಗವಿಕಲರಿಗೆ ಸೈಕಲ್, ಸೇರಿದಂತೆ ಅನೇಕ ವಸ್ತುಗಳ ರೂಪದಲ್ಲಿ ದಾನ ನೀಡುತ್ತಾ ಬಂದಿದ್ದಾರೆ. ಅಥಣಿ ಮತ್ತು ಕಾಗವಾಡ ತಾಲೂಕಿನಲ್ಲಿ ಇವರನ್ನು ಆಧುನಿಕ ಯುಗದ ದಾನಶೂರಕರಣ ಎಂದು ಕರೆಯುತ್ತಾರೆ.

“ದಾನವೀರ ಮಹಾವೀರ” ಬ್ರೀದ್:

ಸಮಾರಂಭದಲ್ಲಿ ಉಗಾರ ಪದ್ಮಾವತಿ ಮಂದಿರದ ಧರ್ಮಾಧಿಕಾರಿ ಶೀತಲ ಪಾಟೀಲ ಮಾತನಾಡಿ, ಮಹಾವೀರ ಪಡ್ನಾಡ ಇವರು ಜೈನ ಸಮಾಜದವರಾಗಿದ್ದರೂ ಯಾವುದೇ ಜಾತಿ, ಭೇದ ಮಾಡದೆ ಅನೇಕ ನಿಜವಾದ ಬಡ ಕುಟುಂಬಗಳನ್ನು ಗುರುತಿಸಿ ಅವರಿಗೆ ಅವಶ್ಯಕತೆಯಿರುವ ಉಡುಗರೆ, ಚಿನ್ನ, ಸೇರಿದಂತೆ ಅನೇಕ ವಸ್ತುಗಳ ರೂಪದಲ್ಲಿ ದಾನವಾಗಿ ನೀಡಿ ಅವರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಅನೇಕರ ಹತ್ತಿರ ಸಂಪತ್ತು ಇದೆ. ಅದನ್ನು ಹಂಚುವುದು ಧೈರ್ಯ ಎಲ್ಲರಲ್ಲಿ ಇರಲ್ಲಾ. ಪಡ್ನಾಡ ಸಾಹುಕಾರ ಉಗಾರದಲ್ಲಿ ಉಡುಗರೆಗಳು ಹಂಚಿ ಮುನಿನಿವಾಸ ಕಟ್ಟಲು ದಾನ ಘೋಷಣೆ ಮಾಡಿದ್ದಾರೆ. ಇಂಥಹ ದಾನಿಗಳನ್ನು ಇಲ್ಲಿಯ ಜೈನ ಸಮಾಜದ ವತಿಯಿಂದ “ದಾನವೀರ ಮಹಾವೀರ” ಎಂದು ಬ್ರೀದ್ ನೀಡಿ ಸನ್ಮಾನ ಪತ್ರ ನೀಡಿ ಸನ್ಮಾನಿಸಿದ್ದಾರೆ ಎಂದರು.

ಉಗಾರದ ವೀರ ಮಹಿಳಾ ಮಂಡಳದ ಅಧ್ಯಕ್ಷೆ ಅಲ್ಕಾ ಸಮಾಜ ಮಾತನಾಡಿ, ಸಮಾಜದಲ್ಲಿ ಭಗವಂತನು ಅನೇಕರಿಗೆ ಸಂಪತ್ತು ಭಾಗ್ಯ ನೀಡಿದ್ದಾನೆ. ಆದರೆ, ಅದನ್ನು ಎಲ್ಲರಿಗೆ ಹಂಚಿ ತಿನ್ನುವವರು ವಿರಳ. ಮಹಾವೀರ ಪಡ್ನಾಡ ನಿಜವಾದ “ದಾನವೀರ ಮಹಾವೀರ”ರರು. ಅನೇಕ ವರ್ಷಗಳಿಂದ ಅವರು ಎಲ್ಲರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಎಲ್ಲ ತರಹದ ದಾನ ನೀಡುತ್ತಿದ್ದಾರೆ. ನಾವು ಇನ್ನೂ ವರೆಗೆ ಹೆಸರು ಕೇಳಿದ್ದವು. ಪ್ರತ್ಯೇಕ್ಷವಾಗಿ ಇವತ್ತು ಕಂಡು ಭಗವಾನ ಮಹಾವೀರರನ್ನು ಕಂಡಂತಾಯಿತು ಎಂದರು.

ಮುನಿನಿವಾಸ ಕಟ್ಟಿಸುವ ಬಗ್ಗೆ ಸಂಕಲ್ಪ ಜೈನ ಸಮಾಜದ ಮಂಡಳದವರು ಘೋಷಣೆ ಮಾಡಿದ ಕೂಡಲೆ ಪದ್ಮಾವತಿ ಮಂದಿರದ ಮುಖ್ಯಸ್ಥ ಶೀತಲ ಪಾಟೀಲ 51 ಸಾವಿರ, ಮಂಡಳದ ಸಂಚಾಲಕ ಭರತೇಶ ಸಾಂಗಲೆ 51 ಸಾವಿರ, ಸೇರಿದಂತೆ ಅನೇಕರು ದಾನವನ್ನು ಘೋಷಣೆ ಮಾಡಿದರು.

ಜೈನ ಮಂದಿರ ಕಮಿಟಿಯ ಅಧ್ಯಕ್ಷ ದೇವಗೌಡ ಪಾಟೀಲ, ಉಪಾಧ್ಯಕ್ಷ ಪೋಪಟ ಲಟ್ಟೆ, ಸಂಚಾಲಕರಾದ ಸುಕುಮಾರ ಬಳೋಲ, ಶ್ರೀಮಂತ ಸಾಜನೆ, ಪ್ರವೀಣ ಪಾಟೀಲ, ಸಂಜಯ ಉಪಾಧ್ಯೆ, ಅನಿಕೇತ ಆಳಪ್ಪನ್ನವರ, ವಿಪುಲ ಹವಲೆ, ಅಭಯ ಹವಲೆ, ಭರತೇಶ ಸಾಂಗಲೆ, ವೀರ ಮಹಿಳಾ ಮಂಡಳದ ಅಧ್ಯಕ್ಷೆ ಅಲ್ಕಾ ಸಮಾಜ, ಜಯಶ್ರೀ ಶೇಡಬಾಳೆ, ಸುಚೇತಾ ಪಾಟೀಲ, ರೂಪಾ ಸಾಜನೆ, ಸೇರಿದಂತೆ ಅನೇಕ ಶ್ರಾವಕರು ಸಮಾರಂಭ ಯಶಸ್ವಿಗೊಳಿಸಿದರು.


ಸುದ್ದಿ ಓದಿ