ಧಾರವಾಡ - ಹುಬ್ಬಳ್ಳಿ

ಸ್ನಾತಕೋತ್ತರ ಪದವಿಯಲ್ಲಿ 8 ಚಿನ್ನದ ಪದಕ 2 ನಗದು ಪುರಸ್ಕಾರ

ಸ್ನಾತಕೋತ್ತರ ಪದವಿಯಲ್ಲಿ 8 ಚಿನ್ನದ ಪದಕ 2 ನಗದು ಪುರಸ್ಕಾರ

ಧಾರವಾಡ 21:  ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಜೀವಶಾಸ್ತ್ರ (ಚಠರಟಠಥಿ) ವಿಭಾಗದ ಸ್ನಾತಕೋತ್ತರ ಪದವಿ((ಒ ಖಛಿ))ಯನ್ನು ನಗರದ ವಿಸ್ಮಯ ಅಂಗಡಿ 8 ಚಿನ್ನದ ಪದಕಗಳು ಹಾಗೂ 2 ನಗದು ಪುರಸ್ಕಾರಗಳೊಂದಿಗೆ ಪೂರೈಸಿದ್ದಾಳೆ.  ದಿನಾಂಕ: 24.09.2024ರಂದು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಜರುಗುವ 74ನೇ ವಾರ್ಷಿಕ ಘಟೀಕೋತ್ಸವ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಥಾವರಚಂದ ಗೆಹ್ಲೋಟ್ ಅವರು ಚಿನ್ನದ ಪದಕ ಪ್ರದಾನ ಮಾಡಲಿದ್ದಾರೆ.   

ಧಾರವಾಡದಲ್ಲಿ ಸಹಾಯಕ ಕೃಷಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಚನ್ನಪ್ಪ ಅಂಗಡಿ ಮತ್ತು ಶುಭಲಕ್ಷ್ಮೀ ಅಂಗಡಿ ಇವರ ಮಗಳಾದ ವಿಸ್ಮಯ ಅಂಗಡಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಪೂರೈಸಿದ್ದು, 2016ರಲ್ಲಿ ಜರುಗಿದ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಶೇ.98 ಅಂಕಗಳನ್ನು ಗಳಿಸಿದ್ದಾಳೆ.  ಇದೇ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದಿರುತ್ತಾಳೆ.  2018ರ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ.92 ಹಾಗೂ 2021ರಲ್ಲಿ ಪೂರೈಸಿದ ಬಿ.ಎಸ್‌.ಸಿ. ಪದವಿ ಪರೀಕ್ಷೆಯಲ್ಲಿ ಕೂಡ ಶೇ.92ರಷ್ಟು ಅಂಕ ಪಡೆದಿದ್ದಾಳೆ.  ಕರ್ನಾಟಕ ವಿಶ್ವವಿದ್ಯಾಲಯದ ಜೀವಶಾಸ್ತ್ರ ವಿಭಾಗದಲ್ಲಿ ಪದ್ಮಭೂಷಣ ಡಾ.ಎಂ.ಸಿ.ಮೋದಿ, ಪ್ರೊ.ಎಸ್‌.ಕೆ.ಸೈದಾಪೂರ, ಪ್ರೊ.ಬಿ.ಬಿ.ಕಲಿವಾಳ, ಪ್ರೊ.ವಿ.ಬಿ.ನಾಡಕರ್ಣಿ ಇವರ ಹೆಸರಿನಲ್ಲಿರುವ ಇರಿಸಿರುವ ದತ್ತಿಗಳನ್ನೂ ಸೇರಿ ಒಟ್ಟು 8 ಬಂಗಾರದ ಪದಕಗಳನ್ನು ಪಡೆದಿದ್ದಾಳೆ.   

ವಿಸ್ಮಯ ಅಂಗಡಿ ಕನ್ನಡ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದು, ರಾಜ್ಯಮಟ್ಟದ ಕವಿಗೋಷ್ಠಿಯೂ ಸೇರಿದಂತೆ ಅನೇಕ ಸಮ್ಮೇಳನಗಳಲ್ಲಿ ಕವನ ವಾಚಿಸಿದ್ದಾಳೆ.  ಬಾಲ್ಯದಿಂದಲೇ ಧಾರವಾಡ ಆಕಾಶವಾಣಿ ಕೇಂದ್ರದಿಂದ ಕಾರ್ಯಕ್ರಮ ನೀಡುತ್ತ ಬಂದಿದ್ದಾಳೆ.  ಅನೇಕ ಮಹತ್ವದ ಕಾರ್ಯಕ್ರಮಗಳನ್ನು ನಿರ್ವಹಣೆ ಮಾಡಿದ್ದಲ್ಲದೇ ವೇದಿಕೆಗಳಲ್ಲಿ ಹಾಡುಗಳನ್ನು ಪ್ರಸ್ತುತ ಪಡಿಸಿದ್ದಾಳೆ. 


ಸುದ್ದಿ ಓದಿ