ಬೈಲಹೊಂಗಲ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ರೂ. 8.9 ಲಕ್ಷ ಲಾಭ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ರೂ. 8.9 ಲಕ್ಷ ಲಾಭ

ಲೋಕದರ್ಶನ ವರದಿ 


ಬೈಲಹೊಂಗಲ 03: ರೈತರ ಶ್ರೇಯೋಭಿವೃದ್ಧಿಗಾಗಿ 91 ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇಂದು ರೈತರ ಉತ್ತಮ ಸ್ಪಂದನೆಯಿಂದ 9.9 ಕೋಟಿ ರೂಪಾಯಿ ಬಂಡವಾಳದೊಂದಿಗೆ 8.9 ಲಕ್ಷ ರೂಪಾಯಿ ಲಾಭದೊಂದಿಗೆ ಸಂಸ್ಥೆ ಬೆಳೆಯುತ್ತಿರುವುದು ರೈತರ ಆಶೀರ್ವಾದದಿಂದ ಎಂದು ಸಂಘದ ಅಧ್ಯಕ್ಷ ಸೋಮಲಿಂಗಪ್ಪ ಚಳಕೂಪ್ಪ ಹೇಳಿದರು. 

    ಸಮೀಪದ ಹೊಸೂರು ಗ್ರಾಮದಲ್ಲಿ ಸೋಮವಾರ ನಡೆದ 91 ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನೇಕ ಹಿಂದಿನ ಆಡಳಿತ ಮಂಡಳಿ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಕೃಷಿ ಸಾಲ, ರೇಶನ್, ರಸಗೊಬ್ಬರ ಹಾಗೂ ಟ್ಯಾಕ್ಟರ್ ಖರೀದಿಸಲು 3ಅ ಬಡ್ಡಿದರದಲ್ಲಿ ಸಾಲ ವಿತರಿಸಿ ನಡೆಸಿಕೊಂಡು ಬಂದ ದಾರಿಯಲ್ಲಿ ಇಂದಿನ ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಿದ್ದು ಪ್ರಸ್ತುತ ಸಾಲಿನಲ್ಲಿ 8.8 ಲಕ್ಷ ರೂಪಾಯಿ ಸಂಘಕ್ಕೆ ಲಾಭ ಬಂದಿದೆ ಎಂದರು. 

    ಸವದತ್ತಿ ಎಪಿಎಂಸಿ ಸದಸ್ಯ ಎಫ್ ಎಸ್ ಸಿದ್ದನಗೌಡರ ಮಾತನಾಡಿ, ಸಹಕಾರಿ ಸಂಘಗಳ ಅನೇಕ ನೂತನ ಕಾಯ್ದೆಗಳು ರೈತರಿಗೆ ಮಾರಕವಾಗುತ್ತಿದೆ ಅವುಗಳನ್ನು ಮನಗಂಡ ಸರ್ಕಾರ ಬದಲಾವಣೆ ಮಾಡಿದೆ ಈ ಹಿಂದೆ ತಂದಿದ್ದ 20ಸಾವಿರಕ್ಕಿಂತ ಹೆಚ್ಚು ವೇತನ ಪಡೆಯುತ್ತಿರುವ ಹಾಗೂ ಕೆರೆಗೆ ಪಾವತಿದಾರ ರೈತರಿಗೆ ಬಡ್ಡಿ ವಸೂಲಿ ಮಾಡುವುದನ್ನು ಕೈಬಿಟ್ಟಿರುವದು, ಟ್ರ್ಯಾಕ್ಟರ್ ಖರೀದಿಸಲು ಭೂಮಿಯ ಮಿತಿಯನ್ನು ಕಡಿಮೆಗೊಳಿಸಿರುವುದು ಸ್ವಾಗತಾರ್ಹ. 3 ವಾರ್ಷಿಕ ಮಹಾಸಭೆಗೆ ಬರದ ರೈತರಿಗೆ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಕಾನೂನನ್ನು ಎರಡು ವರ್ಷಕ್ಕೆ ಇಳಿಸಿರುವುದು ಸರಿಯಲ್ಲ ಈ ಕಾನೂನನ್ನು ತಕ್ಷಣ ರದ್ದು ಮಾಡುವಂತೆ ಸಹಕಾರ ಸಚಿವರನ್ನು ಆಗ್ರಹಿಸಿ ಠರಾವು ಮಾಡಬೇಕೆಂದು ಆಗ್ರಹಿಸಿದರು. 

     ಉಪನ್ಯಾಸಕ ಎಸ್ ಕೆ ಮೇಳ್ಳಿಕೆರಿ ಮಾತನಾಡಿ, ಸಹಕಾರಿ ಸಂಘಗಳಲ್ಲಿ ಸರ್ಕಾರದಿಂದ ಆರ್ಥಿಕ ಸಹಾಯ ಸೌಲಭ್ಯಗಳು ಹೇರಳವಾಗಿದ್ದು ಅವುಗಳ ಸದುಪಯೋಗಕ್ಕಾಗಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಪ್ರಾಮಾಣಿಕವಾಗಿ ಸೇವೆ ಮಾಡಿದಲ್ಲಿ ರೈತರಿಗೆ ಸಂಪೂರ್ಣ ಅನುಕೂಲತೆ ಸಿಗಲಿದ್ದು ಈ ನಿಟ್ಟಿನಲ್ಲಿ ಗ್ರಾಮದ ಪಿಕೆಪಿಎಸ್ ಕಾರ್ಯ ಶ್ಲಾಘನೀಯವಾಗಿದೆ ಎಂದರು. 

     ಸಂಘದ ಉಪಾಧ್ಯಕ್ಷ ಶಿವರಾಜ್ ಮಾಕಿ, ನಿರ್ದೇಶಕರುಗಳಾದ ಈರ​‍್ಪ ಹುರಳಿ, ಮಲ್ಲಸರ್ಜ ಮೂಗಬಸವ ಸಿದ್ದಪ್ಪ ಗುಳನ್ನವರ್ ಸಿದ್ದಪ್ಪ ನಾಗನೂರು ಮಲ್ಲಪ್ಪ ಮದಲಬಾವಿ, ಶ್ರೀಮತಿ ಪ್ರೇಮ ಬಾಯಿ ಪಾಟೀಲ್ ನಾಗಪ್ಪ ತಳವಾರ, ಶಿವಪ್ಪ ಹೀರುನವರ ಅತಿಥಿಗಳಾಗಿ ಎಸ್‌.ಡಿ ಬೂದಿಹಾಳ್, ಈರಣ್ಣ ಬೆಂಡಿಗೇರಿ ಮಲ್ಲಿಕಾರ್ಜುನ್ ಹುಂಬಿ, ಶಂಕರ​‍್ಪ ಸೊಗಲ ಮಡಿವಾಳಪ್ಪ ಸಂಗೊಳ್ಳಿ ದುಂಡಪ್ಪ ಬೂದಿಹಾಳ್, ಉಳವಪ್ಪ ಶಿರಣ್ಣವರ, ದೇಮಣ್ಣಾ ಮೂಗಬಸವ, ಶಂಕರ್ ಬಡಿಗೇರ್ ನೂರಾರು ರೈತರು ಉಪಸ್ಥಿತರಿದ್ದರು. 

     ಸಂಘದ ಮುಖ್ಯ ಕಾರ್ಯನಿರ್ವಾಹಕ ಕಲ್ಲಪ್ಪ ಚಳಕೊಪ್ಪ ವಾರ್ಷಿಕ ವರದಿ ಮಂಡನೆ ಮಾಡಿದರು. ಶಂಕರ್ ಮಲ್ಲಣ್ಣವರ ಸ್ವಾಗತಿಸಿದರು. ಸಹಾಯಕ ಕಾರ್ಯದರ್ಶಿ ಪ್ರಸಾದ ಹುಂಬಿ ವಂದಿಸಿದರು. 


ಸುದ್ದಿ ಓದಿ