ರಾಣೆಬೆನ್ನೂರ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ

ರಾಣೇಬೆನ್ನೂರ 19:  ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮಾಲತೇಶ ಕರೆಗಾರ ಅವರು ಧ್ವಜಾರೋಹಣವನ್ನು ನೆರವೇರಿಸಿದರು.  

ನಂತರ ನಡೆದ ವೇದಿಕೆಯ ಕಾರ್ಯಕ್ರಮದಲ್ಲಿ ಶಿಕ್ಷಣ ಪ್ರೇಮಿ ಅಪ್ಪಾಜಿ ಒಡೆಯರ ಮಾತನಾಡಿ, ಇಂದಿನ ಮಕ್ಕಳು ಹೆಚ್ಚಿನ ಜ್ಞಾನವನ್ನು ಪಡೆಯಬೇಕಾದರೆ ಹೆಚ್ಚಾಗಿ ಪುಸ್ತಕಗಳನ್ನು ಓದಬೇಕು ಅಷ್ಟೆಯಲ್ಲದೆ ನಮ್ಮ ದೇಶಕ್ಕೆ ಕೊಡುಗೆ ಬಲಿದಾನ, ತ್ಯಾಗ ಮಾಡಿದಂತಹ ಮಹಾತ್ಮರ ಹಾಗೂ ವೀರ ರಾಣಿಯರ ಆದರ್ಶಗಳನ್ನು ಸರ್ವರೂ ತಿಳಿದುಕೊಳ್ಳಬೇಕು ಅಂದಾಗ ಸ್ವಾತಂತ್ರ್ಯೋತ್ಸವಕ್ಕೆ ಯಾರ ಕೊಡುಗೆ ಹೇಗೆ ಅವರ ಹೋರಾಟ ಎಂತಹುದು ಏನು ಎಂಬುದು ಗೊತ್ತಾಗುತ್ತದೆ ಎಂದರು. 

ಗ್ರಾಮದ ಗ್ರಾಪಂ ಸದಸ್ಯ ಚಂದ್ರಪ್ಪ  ದಳವಾಯಿ ಮಾತನಾಡಿ, ದೇಶಕ್ಕಾಗಿ ಹೋರಾಡಿದ ಎಲ್ಲ ಮಹಾತ್ಮರ ಆದರ್ಶಗಳನ್ನು ಇಂದಿನ ಮಕ್ಕಳು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಪ್ರತಿ ವರ್ಷ ನಾವು ಆಚರಿಸುವ ಸ್ವಾತಂತ್ರ್ಯ ದಿನಾಚರಣೆಗೆ ಅರ್ಥ ಬರುತ್ತೆ ಈ ನಿಟ್ಟಿನಲ್ಲಿ ಎಲ್ಲರೂ ದೇಶಭಕ್ತಿ, ರಾಷ್ಟ್ರೇ​‍್ರಮವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗೋಣ ಅಂದಾಗ ನಾವು ಭಾರತ ಮಾತೆಯ ಋಣವನ್ನು ತೀರಿಸಿದಂತಾಗುತ್ತದೆ ಎಂದರು. 

ಇದೇ ಸಂದರ್ಭದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಂತರ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಗಂಗಮ್ಮ ನಾಗಪ್ಪ ಎರೇಶೀಮಿ, ರಮ್ಯ ನಾಗಪ್ಪ ಹೊನ್ನತ್ತಿ, ಚೈತ್ರಾ ಮುದಿಮಲ್ಲಪ್ಪ ಭತ್ತದ ಇವರುಗಳನ್ನು ಗ್ರಾಮದ ಶ್ರೀ ಶಿವದೇವ ಯುವಕ ಮಂಡಳ ಹಾಗೂ ಗಜಾನನ ಯುವಕ ಮಂಡಳದವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. 

ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಪ್ಪ ಅರಸಪ್ಪನವರ, ಗ್ರಾಪಂ ಸದಸ್ಯ ದೇವರಾಜ ಆನಿಶೆಟ್ರ, ಗ್ರಾಮದ ಮುಖಂಡರಾದ ವೀರಣ್ಣ ನಾಗಪ್ಪ ಭತ್ತದ, ವೀರಣ್ಣ ನಾಗಪ್ಪ ಬನ್ನಿಮಟ್ಟಿ, ಶರಣಯ್ಯ ಪೂಜಾರ, ಪ್ರವೀಣ ಭಜಂತ್ರಿ, ಶರಣಬಸಪ್ಪ ಚಕ್ರಸಾಲಿ, ಶಂಭುಲಿಂಗಪ್ಪ ನಾಗಪ್ಪ ಭತ್ತದ ಸೇರಿದಂತೆ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಎಸ್‌ಡಿಎಂಸಿ ಸದಸ್ಯರು, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಗ್ರಾಮದ ಅನೇಕ ಗಣ್ಯರು  ಹಾಗೂ ಮಕ್ಕಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ