ಎಫ್.ಪಿ.ಎ.ಇಂಡಿಯಾ ವಾಕಾಥಾನ್ ಮೂಲಕ 75 ವಜ್ರ ಮಹೋತ್ಸವ
ಧಾರವಾಡ 23: ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ (ಎಫ್.ಪಿ.ಎ.ಇಂಡಿಯಾ) ತನ್ನ 75 ನೇ ವಜ್ರ ಮಹೋತ್ಸವದ ಅಂಗವಾಗಿ ವಾಕಾಥಾನ್ ಕಾರ್ಯಕ್ರಮವನ್ನು ಕೆ.ಸಿ.ಡಿ ವೃತ್ತದಿಂದ ಎಲ್.ಐ.ಸಿ ಮಾರ್ಗವಾಗಿ ಕಲಾಭವನದವರೆಗೆ ಜರುಗಿತು.
ಪ್ರೋಪೇಸರ್ ಕೆ.ಬಿ.ಗುಡಸಿ, ಕುಲಪತಿಗಳು ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ ಇವರು ವಾಕಾಥಾನ್ ಚಾಲನೆ ನೀಡಿದರು, ಈ ಸಂಧರ್ಭದಲ್ಲಿ ಮಾತನಾಡುತ್ತಾ ವಿವಿಧತೆಯಲ್ಲಿ ಏಕತೆಯೇ ಭಾರತ ವಿಶೇಷವಾಗಿದೆ. ಇಲ್ಲಿ ಅನೇಕ ಮಹಾನ್ ವ್ಯಕ್ತಿಗಳು ಸಮಾಜ ಸುಧಾರಣೆಗಾಗಿ ಅನೇಕ ರೀತಿ ಪ್ರಯತ್ನ ಮಾಡಿದ್ದಾರೆ ಅಂತವರಲ್ಲಿ ಧನ್ವಂತಿ ರಾಮರಾವ್ ಮತ್ತು ಅವಬಾಯಿ ವಾಡಿಯ ಎಂಬ ಇಬ್ಬರು ಕ್ರಾಂತಿ ಕಾರಿ ಮಹಿಳೆಯರಿಂದ ಈ ಸಂಸ್ಥೆ ಪ್ರಾರಂಭವಾಗಿರುವದು ಹೆಮ್ಮೆಯ ಸಂಗತಿ. ಎಫ್.ಪಿ.ಎ.ಐ ಅಂದರೆ ಕುಟುಂಬ ಯೋಜನೆ ಎನ್ನುವ ಬ್ರ್ಯಾಡ್ ನೇಮ್ ಹೊಂದಿಗೆ. ಎಲ್ಲ ವರ್ಗದವರಿಗೂ ಇವರ ಸೇವೆ ತುಂಬಾ ಅವಶ್ಯವಿದ್ದು, ಕಳೆದ 75 ವರ್ಷದಿಂದ ಒಂದು ಸ್ವಯಂಸೇವಾ ಸಂಸ್ಥೆ ನಿರಂತರವಾಗಿ ಮಹಿಳೆರಿಗೆ, ಮಕ್ಕಳಿಗೆ, ಹದಿಹರಿಯದವರಿಗೆ ಮತ್ತು ಪುರುಷರಿಗೆ ಆರೋಗ್ಯದ ಕುರಿತು ಮಾಹಿತಿ ಮತ್ತು ಸೇವೆ ನೀಡುತ್ತಿರುವ ದೇಶದ ಕೆಲವೇ ಸಂಸ್ಥೆಗಳಲ್ಲಿ ಎಫ್.ಪಿ.ಎ.ಐ ಒಂದಾಗಿದೆ. ಬದಲಾವಣೆಗೆ ತಕ್ಕಂತೆ ಅವಶ್ಯವಿರುವ ಹೊಸ ಹೊಸ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವದು ಈ ಸಂಸ್ಥೆಯ ಇನ್ನೊಂದು ವಿಶೇಷತೆಯಾಗಿದೆ. 75 ನೇ ವಜ್ರ ಮಹೊತ್ಸವ ನಿರಂತರ ಸುರಿಯುತ್ತಿರು ಮಳೆಯಲ್ಲಿ ನೂರಾರು ಜನರು ಪಾದಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ತುಂಬಾ ಸಂತೋಷ ನೀಡಿದೆ, ಮುಂಬರುವ ದಿನಗಳಲ್ಲಿ ಈ ಸಂಸ್ಥೆ ಸೇವೆ ಇನ್ನೂ ಹೆಚ್ಚಿನ ಸೇವೆ ಒದಗಿಸಲು ಸಹಕಾ ನೀಡೋಣ ಎಂದು ಅಭಿಪ್ರಾಯಪಟ್ಟರು.
ಎಫ್.ಪಿ.ಎ.ಐ ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಹೇಮಲ್ ದೇಸಾಯಿ ಮಾತನಾಡಿ ಈ ಸಂಸ್ಥೆ ದೇಶದ 18 ರಾಜ್ಯದಲ್ಲಿ 40 ಕ್ಕೂ ಹೆಚ್ಚಿನ ಶಾಖೆಗಳ ಮೂಲಕ ಮಹಿಳೆಯರ,ಮಕ್ಕಳ ಆರೋಗ್ಯ ಲೈಂಗಿಕ ಹಾಗೂ ಸಂತಾನೋತ್ಪತ್ತಿ ಆರೋಗ್ಯ ಸೇವೆಗಳು, ಸಮುದಾಯದಲ್ಲಿ ನೀತಿಯಲ್ಲಿ ಬದಲಾವಣೆಯ ಧ್ವನಿಯಾಗುವ ಮೂಲಕ ಭಾರತದ ಕುಟುಂಬ ಯೋಜನೆ ಬಲಪಡಿಸುವ ಪ್ರಯತ್ನವನ್ನು ಗಣನೀಯವಾಗಿ ಮುಂದುವರೆಸುವ ಕಾರ್ಯ ನಡೆಯುತ್ತಿದೆ. ಸಮಗ್ರ ಗುಣಮಟ್ಟದ ಲೈಂಗಿಕ ಹಾಗೂ ಸಂತಾನೋತ್ಪತ್ತಿ ಆರೋಗ್ಯ ಸೇವೆಗಳನ್ನು ನೀಡುತ್ತದೆ. ಕುಟುಂಬ ಯೋಜನೆಯ ಹೊರತಾಗಿ ಸುರಕ್ಷಿತ ಗರ್ಭಪಾತ, ತಾಯಿ ಮತ್ತು ಮಗು ಮತ್ತು ಹದಿಯರೆಯದವರ ಆರೋಗ್ಯ, ಗರ್ಭಕಂಠಕದ ಮತ್ತು ಸ್ತನ ಕ್ಯಾನ್ಸರ್ ತಪಾಸಣೆ ಮತ್ತು ಸಂತಾನಹೀನತೆಯನ್ನು ನಿರ್ವಹಣೆಯ ಸೇವೆಯನ್ನು ಒದಗಿಸುತ್ತಿದೆ.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಡಾ.ಸಂಗಿತಾ ಮಾನೆ, ಕಾರ್ಯಕಾರಿಣಿ ಸದಸ್ಯ ಭೀಮಸೇನ ಸಾರಥಿ, ಸೃಷ್ಠಿ ಪಿ.ಯು.ಕಾಲೇಜಿನ ಪ್ರಾಚಾರ್ಯರಾದ ರವಿ ಕೆಂಬಣ್ಣವರ, ಶಾಖಾ ವ್ಯವಸ್ಥಾಪಕ ಸುಜಾತಾ ಆನಿಶೆಟ್ಟರ, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಸೃಷ್ಠಿ ಕಾಲೇಜ ವಿದ್ಯಾರ್ಥಿಗಳು , ಸಮಾಜ ಕಾರ್ಯವಿಭಾಗದ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು, ಎಫ್.ಪಿ.ಎ.ಐ. ಯುವ ಸದಸ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ 150 ಹೆಚ್ಚು ಜನರು ಭಾಗವಹಿಸಿದ್ದರು.