ಹರಳು ಹುರಿದಂತೆ ಆಂಗ್ಲ ಭಾಷಣ ಮಾಡುವ 7 ವರ್ಷದ ಪೋರಿ ಸಾನ್ವಿ ಟಿಕಾರೆ
ರಾಣೇಬೆನ್ನೂರು, 19: ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ ಪ್ರತಿಭೆ ಎನ್ನುವುದು ಎಲ್ಲರಲ್ಲೂ ಇದ್ದೇ ಇರುತ್ತದೆ ಎನ್ನುವುದಕ್ಕೆ ರಾಣೇಬೆನ್ನೊರ ನಗರದ, ಕೇವಲ 7 ವರ್ಷದ ಪೋರಿ, ಸಾನ್ವಿ ಮಿಥುನರಾವ್ ಟಿಕಾರೆ ಇವಳು, ನೂರಾರು ಮಕ್ಕಳಿಗೆ ತನ್ನ ಆಂಗ್ಲಭಾಷೆಯ ಮೂಲಕ ಅರಳು ಹುರಿದಂತೆ ಮಾತನಾಡುತ್ತಾ ಇತರೆ ವಿದ್ಯಾರ್ಥಿಗಳಿಗೆ ಸ್ಪೂರ್ತಿ ದಾಯಕವಾಗಿ ಮಾದರಿಯಾಗಿದ್ದಾಳೆ.
ಸಾನ್ವಿ ಟಿಕಾರೆ, ವಾಣಿಜ್ಯ ನಗರದ ಪ್ರತಿಷ್ಠಿತ ಎಂ. ಜಿ.ಶಿಕ್ಷಣ ಸಂಸ್ಥೆಯ, ಲಯನ್ಸ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿದ್ದಾಳೆ. ಭಾಷಣವೆಂದರೆ ಅವಳಿಗೆ ಇಷ್ಟವಾದ ಕಲೆ, ಶಾಲೆಯ ಯಾವುದೇ ಕಾರ್ಯಕ್ರಮಗಳು ಇರಲಿ, ಅವಳದೊಂದು ಭಾಷಣ ಇದ್ದೇ ಇರುತ್ತದೆ. ಎನ್ನುತ್ತಾರೆ ಶಿಕ್ಷಣ ಸಂಸ್ಥೆಯ, ಆಂಗ್ಲ ಭಾಷಾ ಶಿಕ್ಷಕರು. ಕಳೆದ 15ರಂದು ಶಾಲೆಯಲ್ಲಿ ಜರುಗಿದ, 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅವಳು ಮಾಡಿದ ಆಂಗ್ಲ ಭಾಷೆಯ ದೇಶದ ಸ್ವಾತಂತ್ರ್ಯ ಮತ್ತು ಇತಿಹಾಸ ವಿಷಯಧಾರಿತ ಭಾಷಣದಿಂದ, ಪ್ರೇರೇಪಣೆಗೊಂಡಿರುವ ಹತ್ತು, ಹಲವು ಸಂಘ, ಸಂಸ್ಥೆಗಳು, ಅವಳನ್ನು ಭಾಷಣಕ್ಕಾಗಿ ಕರೆಯುವು ದು, ಇಂದು ಸಾಮಾನ್ಯವಾಗಿದೆ.
ಕೇವಲ ಭಾಷಣಕ್ಕಷ್ಟೇ ಸೀಮಿತವಾಗದ ಈ ಬಾಲ ಪ್ರತಿಭೆ ಕಲೆ, ಸಾಹಿತ್ಯ, ನಾಟಕದಲ್ಲಿ ಆಸಕ್ತಿ ಹೊಂದಿದ್ದಾಳೆ ಸಾನ್ವಿ, ಇತ್ತೀಚೆಗೆ ನಡೆದ ಪ್ರಾಥಮಿಕ ಶಾಲಾ ವಿಭಾಗದ ಜಾನಪದ ಕಲೆ, ತಾಲೂಕ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ ಗಳಿಸಿ, ತಾನು ಓದುತ್ತಿರುವ ಶಾಲೆಗೆ ಗೌರವ ತಂದಿದ್ದಾಳೆ.
ಪ್ರಾಥಮಿಕ ಶಿಕ್ಷಣದ ನಂತರ, ಭಾಷಣ ಕಲೆಯಲ್ಲಿ ಮತ್ತಷ್ಟು ಹಿಡಿತವನ್ನು ಸಾಧಿಸಿ ಪ್ರಬುದ್ಧತೆಯೊಂದಿಗೆ, ಭವಿಷ್ಯದಲ್ಲಿ ಐಎಎಸ್ ಶಿಕ್ಷಣ ಪಡೆಯುವ ಉದ್ದೇಶ ಹೊಂದಿದ್ದೇನೆ ಎಂದು ಸ್ಪಷ್ಟವಾಗಿ ನಿಖರವಾಗಿ ಹೇಳುವ ಈ ವಿದ್ಯಾರ್ಥಿನಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂಬಂತೆ, ತನ್ನ ಅಪ್ರತಿಮ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ.