ಬೈಕ್ ಕಳ್ಳನ ಬಂಧನ: 7 ಬೈಕ್ ವಶ
ಇಂಡಿ: ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಇಂಡಿ ನಗರ ಪೊಲೀಸರು ಬಂಧಿಸಿ, ಬಂಧಿತನಿಂದ 7 ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಂಡ ಘಟನೆ ಸೋಮವಾರ ನಡೆದಿದೆ.
ಬಂಧಿತನನ್ನು ಕಲಬುರ್ಗಿ ಜಿಲ್ಲೆಯ ಅಫಜಲಪೂರ ತಾಲ್ಲೂಕಿನ ಗೌಡಗಾಂವ ಗ್ರಾಮದ ಅನೀಲ ಹಣಮಂತ ಕ್ಷತ್ರಿ (21) ಎಂದು ಗುರುತಿಸಲಾಗಿದೆ.
ಎ.ಎಸ್.ಐ ವಿ.ಪಿ. ಸಂತರ್ ಹಾಗೂ ಸಿಬ್ಬಂದಿಗಳು ಪಟ್ಟಣದ ಅಗರಖೇಡ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಆರೋಪಿತನು ಅಗರಖೇಡ ಕಡೆಯಿಂದ ಇಂಡಿ ನಗರಕ್ಕೆ ಬರುತ್ತಿದ್ದ ಪೊಲೀಸರನ್ನು ನೋಡಿ ತನ್ನ ದ್ವೀಚಕ್ರವಾಹನವನ್ನು ಮರಳಿ ಅಗರಖೇಡದ ಕಡೆ ಹೊರಳಿಸುತ್ತಿದ್ದಂತೆ ಪೊಲಿಸರು ಆತನನ್ನು ನಿಲ್ಲಿಸಿ ವಾಹನದ ದಾಖಲಾತಿ ಕೇಳಲಾಗಿ, ಆರೋಪಿತನು ಗಾಬರಿಗೊಂಡು ಸಮರ್ಪಕ ಉತ್ತರ ಹೇಳದಿದ್ದಾಗ ಸಂಶಯ ಬಂದು ಪೊಲೀಸರು ಗದರಿಸಿ ವಿಚಾರಿಸಿದಾಗ ಕಳ್ಳತನ ಮಾಡಿ ಬೈಕ್ ತೆಗೆದುಕೊಂಡಿದ್ದನ್ನು ಒಪ್ಪಿಕೊಂಡಿದ್ದಾನೆ. ಕೂಡಲೆ ಆತನನ್ನು ಠಾಣೆಗೆ ತಂದು ವಿಚಾರಿಸಿದಾಗಿ ಒಟ್ಟು 7 ಬೈಕ್ ಕಳ್ಳತನ ಮಾಡಿದ್ದು ಅವುಗಳನ್ನೆಲ್ಲ ತರಿಸಿಕೊಂಡಿದ್ದಾರೆ.
ಈ ಕುರಿತು ಇಂಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.