ಧಾರವಾಡ - ಹುಬ್ಬಳ್ಳಿ

ರೋಸೆಟ್ ದದ್ದಾಪುರಿ ಗೆ ಫ್ರೆಂಚ್ ಪಿ.ಎಚ್‌ಡಿ.ಯಲ್ಲಿ 7 ಗೋಲ್ಡ್‌ ಮೆಡಲ್ಸ್‌

ರೋಸೆಟ್ ದದ್ದಾಪುರಿ ಗೆ ಫ್ರೆಂಚ್ ಪಿ.ಎಚ್‌ಡಿ.ಯಲ್ಲಿ 7 ಗೋಲ್ಡ್‌ ಮೆಡಲ್ಸ್‌

ಧಾರವಾಡ, 24: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸೆ.24 2024 ರಂದು ನಡೆದ 74ನೇ ವಾರ್ಷಿಕ ಘಟಿಕೋತ್ಸವದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ  ರೆಗ್ಯುಲರ್ ಪಿ.ಎಚ್‌.ಡಿ ಯನ್ನು ಫ್ರೆಂಚ್ ವಿಷಯದಲ್ಲಿ ಮಾಡಿ ಉತ್ತೀರ್ಣಳಾಗಿ 07 ಗೋಲ್ಡ್‌ ಮೆಡಲ್‌ಗಳನ್ನು ಪಡೆದುಕೊಂಡು ಫಾರಿನ್ ಲ್ಯಾಂಗೆಜಿಸ್ ಡಿಪಾರ್ಟಮೆಂಟಿನಲ್ಲಿಯೇ ಇತಿಹಾಸವನ್ನು ಬರೆದ ಕು. ರೋಸೆಟ್ ದದ್ದಾಪುರಿ ಪ್ರಾರಂಭದಿಂದಲೂ ಪ್ರತಿಭಾವಂತ ವಿದ್ಯಾರ್ಥಿನಿ. ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ರಾಬರ್ಟ ದದ್ದಾಪುರಿ ಅವರ ಜೇಷ್ಠ ಸುಪುತ್ರಿಯಾದ ಇವಳು ಕವಿವಿಯಲ್ಲಿ ರೆಗ್ಯುಲರ್ ಪಿ.ಎಚ್‌ಡಿ.ಯನ್ನು ಮಾಡಿ ದಾಖಲೆಯನ್ನು ಬರೆದಿದ್ದಾಳೆ. 


ಸುದ್ದಿ ಓದಿ