ರಾಣೆಬೆನ್ನೂರ

ಬಿಎಜೆಎಸ್‌ಎಸ್ ಕಾಲೇಜನಲ್ಲಿ ಶೇ. 69.63ರಷ್ಟು ಫಲಿತಾಂಶ ಪ್ರಕಟ

ಬಿಎಜೆಎಸ್‌ಎಸ್ ಕಾಲೇಜನಲ್ಲಿ ಶೇ. 69.63ರಷ್ಟು ಫಲಿತಾಂಶ ಪ್ರಕಟ

ರಾಣೇಬೆನ್ನೂರು 13:  ನಗರದ ಹಲಗೇರಿ ರಸ್ತೆಯ ಬಿಎಜೆಎಸ್‌ಎಸ್ ಕಲಾ ಮತ್ತು ವಾಣ ಜ್ಯ ಮಹಿಳಾ ಮಹಾವಿದ್ಯಾಲಯದ 2022-23 ನೇ ಸಾಲಿನ ಫಲಿತಾಂಶ ಪ್ರಕಟವಾಗಿದ್ದು, ಒಟ್ಟಾರೆ ಫಲಿತಾಂಶವೂ  ಶೇ. 96.63 ರಷ್ಟಾಗಿದೆ. ಕಲಾ ವಿಭಾಗದಲ್ಲಿ ಯಶೋಧಾ ಪೂಜಾರ 88.76 ಪ್ರತಿಶತ ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ. 87.46 ಪ್ರತಿಶತ ಅಂಕ ಪಡೆದ ನಂದಿನಿ ತೋಟದ ದ್ವಿತೀಯ ಹಾಗೂ 87.23 ಅಂಕ ಪಡೆದ ಅಕ್ಷತಾ ಸೊಪ್ಪಿನ ತೃತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಚೈತ್ರಾ ಅಂತರವಳ್ಳಿ  88.93  ಅಂಕ ಪಡೆದು ಕಾಲೇಜಿಗೆ  ಪ್ರಥಮ ಸ್ಥಾನ, 87.98  ಅಂಕ ಪಡೆದ ದೀಪಾ ದೇವರಗುಡ್ಡ ದ್ವಿತೀಯ ಸ್ಥಾನ,  85.10  ಅಂಕ  ಪಡೆದ ಶ್ವೇತಾ ಮಾಳಗಿ ತೃತೀಯ ಸ್ಥಾನ,  ಇನ್ನುಳಿದಂತೆ ಎಲ್ಲಾ  ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.     ಸಾಧನೆ ಮೆರೆದು ಕಾಲೇಜಿಗೆ ಕೀರ್ತಿ ತಂದ ಸಮೂಹ  ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ರುದ್ರ​‍್ಪ ಲಮಾಣಿ,ಆಡಳಿತಾಧಿಕಾರಿ ಡಾ: ಆರ್‌.ಎಂ. ಕುಬೇರ​‍್ಪ ಹಾಗೂ ಪ್ರಾಚಾರ್ಯ ಡಾ:ಸುರೇಶ ಬಣಕಾರ ಮತ್ತು ಕಾಲೇಜು ಉಪನ್ಯಾಸಕರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ. 


ಸುದ್ದಿ ಓದಿ