ಯರಗಟ್ಟಿ

67ನೇ ಕನ್ನಡ ರಾಜ್ಯೋತ್ಸವ: ಕನ್ನಡ ಕೋಟಿ ಕಂಠ ಗಾಯನ

67ನೇ ಕನ್ನಡ ರಾಜ್ಯೋತ್ಸವ: ಕನ್ನಡ ಕೋಟಿ ಕಂಠ ಗಾಯನ

ಯರಗಟ್ಟಿ 30: ಪಟ್ಟಣದ ವಿಶ್ವಕರ್ಮ ಕನ್ನಡ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜರುಗಿದ ಕನ್ನಡದ ಅಸ್ಮಿತೆಯನ್ನು ಸಾರುವ ವಿನೂತನ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ ಏಕಕಾಲಕ್ಕೆ ಹಮ್ಮಿಕೊಂಡಿರುವ ಕನ್ನಡ ಕೋಟಿ ಕಂಠ  ಗಾಯನ  ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, 

ಕಾರ್ಯಕ್ರಮದಲ್ಲಿ ವಿಶ್ವಕರ್ಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷ  ಆನಂದ ವಸಂತ ಸತ್ತಿಗೇರಿ ಭಾಗವಹಿಸಿ ಮಾತನಾಡಿ ಕನ್ನಡ ನಾಡು ನುಡಿ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುವುದರ ಜೊತೆಗೆ ಕನ್ನಡ ನಮ್ಮೆಲ್ಲರ ಉಸಿರಾಗಬೇಕು ಎಂದು ನುಡಿದರು. ಕಾರ್ಯಕ್ರಮದ ಆರಂಭದಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ಜಯ ಭಾರತ ಜನನಿಯ ತನುಜಾತೆ ಹಾಡಿಗೆ ಮಕ್ಕಳೆಲ್ಲರೂ ಧ್ವನಿಗೂಡಿಸಿದರು.     

ಹುಯಿಲಗೊಳ ನಾರಾಯಣರಾವ್ ವಿರಚಿತ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಚನ್ನವೀರ ಕಣವಿ ವಿರಚಿತ ವಿಶ್ವ ವಿನೂತನ ವಿದ್ಯಾ ಚೇತನ, ಕುವೆಂಪು ವಿರಚಿತ ಬಾರಿಸು ಕನ್ನಡ ಡಿಂಡಿಮವ, ಡಿ ಎಸ್ ಕರ್ಕಿ  ವಿರಚಿತ ಹಚ್ಚೇವು ಕನ್ನಡದ ದೀಪ, ಹಾಗೂ ಆಕಸ್ಮಿಕ ಚಿತ್ರದ ಹಂಸಲೇಖ ವಿರಚಿತ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬೆಲ್ಲಾ ಹಾಡುಗಳಿಗೆ ನೆರೆದ ಸಭಿಕರ ಕಂಠಗಳಲ್ಲಿ ಕನ್ನಡದ ವೃಂದ ಗಾಯನ ಮೊಳಗಿತು, ನಂತರದಲ್ಲಿ ಮಕ್ಕಳಿಗೆ ಕನ್ನಡ ನಾಡು ನುಡಿ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು "ಸಂಕಲ್ಪ ವಿಧಿ" ಭೋದಿಸಲಾಯಿತು,

  ವಿಶ್ವಕರ್ಮ ಶಿಕ್ಷಣ ಸಂಸ್ಥೆಯ ನಿರ್ದೇಶಕ  ಸಚಿನ ಬಡಿಗೇರ ಶಾಲೆಯ ಪ್ರಧಾನ ಗುರು ಆರ್ ಎಸ್ ಕಲ್ಲಣ್ಣವರ ಹಿರಿಯ ಶಿಕ್ಷಕ ಪಿ ವೈ ಬಾಳೋಜಿ, ಎಸ್. ಪಿ. ತಳವಾರ, ಎಸ್. ಬಿ. ಯರಗುದ್ರಿ, ದೈಹಿಕ ಶಿಕ್ಷಕ ಪಿ.ಕೆ ಗುಡ್ಡಾಕಾಯು, ಎ. ವ್ಹಿ. ವಿಭೂತಿ ಬಿ. ಎಸ್.  ಗುಳಗಂದಿ, ಎಸ್. ಬಿ. ಹಿರೇಮಠ, ಎಸ್. ಎ. ಕರ್ಜಗಿಮಠ, ವ್ಹಿ. ಎಸ್. ವಿರಕ್ತಮಠ, ಪಿ. ಬಿ. ಮುರಗೋಡ ಮತ್ತು ಶಾನೂರ ಜಮಾದಾರ ಹಾಗೂ ಭೋದಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಎಸ್. ಪಿ. ತಳವಾರ ಸಭಿಕರನ್ನು ಸ್ವಾಗತಿಸಿದರು. ಎಸ್. ಬಿ. ಯರಗುದ್ರಿ ವಂದಿಸಿದರು 

ಸುದ್ದಿ ಓದಿ