ರಾಣೇಬೆನ್ನೂರು: ಡಿ 7 ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಿಂದ ಇವತ್ತು ಎಲ್ಲರೂ ಸಮಾನವಾಗಿ ಬದುಕುತ್ತಿದ್ದಾರೆ. ಸಮಾಜದಲ್ಲಿ ಶೋಷಣೆಯ ವಿರುದ್ಧ ಹೋರಾಟ ಮಾಡಿದ ಮಹಾನ್ ತ್ಯಾಗಿಯಾಗಿದ್ದಾರೆ ಎಂದು ರೈತ ಮುಖಂಡ ಹನುಮಂತಪ್ಪ ಕಬ್ಬಾರ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಡಾ. ಅಂಬೇಡ್ಕರ್ ಅಭಿಮಾನಿ ಬಳಗ ಆಯೋಜಿಸಿದ್ದ ಡಾ. ಬಿ. ಆರ್. ಅಂಬೇಡ್ಕರ್ ಅವರ 67ನೇ ಪರಿನಿರ್ವಹಣಾ ಕಾರ್ಯಕ್ರಮದಲ್ಲಿ ಡಾ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು., ಅಂಬೇಡ್ಕರ್ ಅವರು ದೊಡ್ಡ ಮಹಾನ್ ನಾಯಕನಾಗಿ ಸಮಾಜದಲ್ಲಿ ಹಿಂದುಳಿದ ವರ್ಗದವರಿಗೆ ಸಮಾನತೆ ಸಿಗಬೇಕೆಂದು ಹೋರಾಟ ಮಾಡಿದವರು. ಅಂಬೇಡ್ಕರ್ ಅವರ 67ನೇ ಪರಿನಿರ್ವಹಣಾ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಮಾಡಲಾಗಿದೆ ಎಂದರು. ಪರಿನಿರ್ವಹಣಾ ದಿನಾಚರಣೆಯಲ್ಲಿ ಸಮುದಾಯದ ಮುಖಂಡರಾದ ಮಾಲತೇಶ ಬ್ಯಾಡಗಿ,ವಿಜಯಕುಮಾರ್ ಕೆಳಗಿನಮನಿ, ರಾಜು ಮಸಿಯಪ್ಪನವರ, ಸಚಿನ ಮಿಣಶಿನಾಳ, ಮಾರುತಿ ಅರಿಸಿನಗುಂಡಿ, ಈರ್ಪ ಪರಸಣ್ಣನವರ, ಪವನ ಬೆನಕನಕೊಂಡ, ರಘು ಆಡೂರು, ಚಂದ್ರು ಬೆಣ್ಣಿಗೇರಿ, ಶಿವಕುಮಾರ ಜಾಧವ ಮತ್ತು ಹಿರಿಯ ಮುಖಂಡರು ಪಾಲ್ಗೊಂಡಿದ್ದರು.