ಇಂಡಿ

629 ಕ್ಯೂಬಿಕ್ ಮೀಟರ್ ಅನಧಿಕೃತ ಮರಳು ವಶ

629 ಕ್ಯೂಬಿಕ್ ಮೀಟರ್ ಅನಧಿಕೃತ ಮರಳು ವಶ
ಎಸಿ ರಾಹುಲ್ ಶಿಂಧೆ ಅವರ ನೇತೃತ್ವದಲ್ಲಿ ಅನೀರೀಕ್ಷಿತವಾಗಿ ದಾಳಿ ನಡೆಸಿ 629 ಕ್ಯೂಬಿಕ್ ಮೀಟರ್ ಅನಧಿಕೃತ ಮರುಳು ವಶಕ್ಕೆ

ಇಂಡಿ 20: ಇಂಡಿ ಉಪವಿಬಾಗಾಧಿಕಾರಿ  ರಾಹುಲ್ ಶಿಂಧೆ ಅವರ ನೇತೃತ್ವದಲ್ಲಿ, ತಹಶೀಲ್ದಾರ, ಪೋಲಿಸ್ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ  ಅಧಿಕಾರಿಗಳು ಒಳಗೊಂಡ ತಂಡವು ದೇವಣಗಾಂವ ಮತ್ತು ಶೆಂಭೆವಾಡ  ಗ್ರಾಮ ವ್ಯಾಪ್ತಿಯ ಭೀಮಾನದಿ ಪಾತ್ರದಲ್ಲಿ  ಮಂಗಳವಾರ ಅನೀರೀಕ್ಷಿತವಾಗಿ ದಾಳಿ ನಡೆಸಿ 629 ಕ್ಯೂಬಿಕ್ ಮೀಟರ್ ಅನಧಿಕೃತ ಮರುಳು ವಶಕ್ಕೆ ಪಡೆದಿದ್ದಾರೆ. 

ಒಟ್ಟು ಎರಡು ಕಡೆ ಈ ದಾಳಿ ನಡೆದಿದ್ದು ದೇವಣಗಾಂವದ ಎರಡು ಸ್ಥಳಗಳಲ್ಲಿ 294 ಕ್ಯೂಬಿಕ್ ಮೀಟರ್ ಹಾಗೂ ಶೆಂಬೇವಾಡ ಗ್ರಾಮದ  ಎರಡು ಸ್ಥಳಗಳಲ್ಲಿ 335 ಕ್ಯೂಬಿಕ್ ಮೀಟರ ಗಳಂತೆ  ಒಟ್ಟು 629 ಕ್ಯೂಬಿಕ್ ಮೀಟರ್ ಮರಳನ್ನು ವಶಕ್ಕೆ ಪಡೆಯಲಾಗಿದ್ದು ವಶಪಡಿಸಿಕೊಂಡ ಅಕ್ರಮ ಮರುಳು ಅಂದಾಜು 5 ಲಕ್ಷ ರೂ ಮಾಲ್ಯದಾಗಿದ್ದು  ಆಲಮೇಲ ಪೋಲಿಸ್ ಠಾಣೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಎಫ್ ಐ ಆರ್ ದಾಖಲಿಸಿದ್ದಾಗಿ ಉಪವಿಬಾಗಾಧಿಕಾರಿಗಳು ರಾಹುಲ್ ಶಿಂಧೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 



ಸುದ್ದಿ ಓದಿ