ದೇಶದಲ್ಲಿ 60ಲಕ್ಷ ಜನರು ಸ್ಕಿಜೋಫ್ರೀನಿಯಾ ಕಾಯಿಲೆಗೆ ತುತ್ತಾಗುತ್ತಾರೆ: ಡಾ. ಸೋಮಶೇಖರ
ಹೊಸಪೇಟೆ 27: ದೇಶದಲ್ಲಿ ಪ್ರತಿ ವರ್ಷ 60ಲಕ್ಷ ಜನರು ಸ್ಕಿಜೋಫ್ರೀನಿಯಾ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ತಜ್ಞ ವೈದ್ಯ ಡಾ. ಸೋಮಶೇಖರ್ ತಿಳಿಸಿದರು.
ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆಯ ಅಂಗವಾಗಿ ನಗರದ ಎಸ್.ಎಸ್.ಎ.ಎಸ್ ಸರಕಾರಿ ಪ್ರಥಮದಜರ್ೆ ಕಾಲೇಜಿನ ಐಕ್ಯೂಎಸಿ, ರೆಡ್ ಕ್ರಾಸ್ ಘಟಕ, ಜಿಲ್ಲಾ ಆರೋಗ್ಯ ಇಲಾಖೆ ಸಹಯೋಗದಲ್ಲಿ ಜರುಗಿದ ಕಾಯಿಲೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ವಿಶೇಷ ಉಪನ್ಯಾಸ ನೀಡಿದರು.
ಸಾಮಾನ್ಯವಾಗಿ 15ರಿಂದ 25ವರ್ಷದ ಯುವ ಸಮೂಹ ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಜೆನಿಟಿಕ್, ವಾತಾವರಣ, ಕೌಟುಂಬಿಕ ಸಮಸ್ಯೆಗಳು, ವೈರಲ್ ಇನ್ವಫೆಕ್ಷನ್ನಿಂದ ಕಾಯಿಲೆ ಬರುತ್ತದೆಯಾದರೂ ಸ್ಕಿಜೋಫ್ರೀನಿಯಾಕ್ಕೆ ಚಿಕಿತ್ಸೆ ಇದೆ ಎಂದು ಹೇಳಿದರು.
ಅತಿಯಾದ ಮೊಬೈಲ್ ಬಳಕೆ ಮಾನಸಿಕ ಅನಾರೋಗ್ಯಕ್ಕೆ ಕಾರಣವಾಗಬಹುದು. ನಾಲ್ಕು ಗಂಟೆ ಮೊಬೈಲ್ ಬಳಸುವವರು ಅಡಿಕ್ಷನ್ಗೆ ಒಳಗಾಗಿರುತ್ತಾರೆ ಎಂದರು. 7ರಿಂದ 8ತಾಸು ನಿದ್ರೆ, ಧ್ಯಾನ ಆರೋಗ್ಯಕ್ಕೆ ಪೂರಕ ಎಂದು ಡಾ. ಸೋಮಶೇಖರ್ ಮಾಹಿತಿ ನೀಡಿದರು.
ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಟಿ ವೀರಭದ್ರಪ್ಪ ಮಾತನಾಡಿ ಯುವ ಸಮೂಹ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ವಿದ್ಯಾಥರ್ಿಗಳು ತಮ್ಮ ಪರೀಕ್ಷಾ ಫಲಿತಾಂಶವನ್ನು ಸಮಚಿತ್ತ, ಸಮಭಾವದಿಂದ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಪ್ರೊ.ನಟರಾಜ್ ಪಾಟೀಲ್ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ದೇವಣ್ಣ ಉಪಸ್ಥಿತರಿದ್ದರು. ಐಕ್ಯೂಎಸಿ ಸಂಚಾಲಕರೂ ಆಗಿರುವ ಆಂಗ್ಲ ವಿಭಾಗದ ಮುಖ್ಯಸ್ಥ ಡಾ. ಟಿ ಎಚ್ ಬಸವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ ಆರೋಗ್ಯದ ಮಹತ್ವದ ಬಗ್ಗೆ ವಿದ್ಯಾಥರ್ಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಸಮಾಜಶಾಸ್ತ್ರದ ಮುಖ್ಯಸ್ಥ ಗದಗೀಶ, ಪತ್ರಿಕೋದ್ಯಮ ವಿಭಾಗದ ಅತಿಥಿ ಉಪನ್ಯಾಸಕ ಮುರಳೀಧರ ಬಿ ಕೆ, ಸಿ.ಮಂಜುನಾಥ್, ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ನಾಗಣ್ಣ ಕಿಲಾರಿ ವಂದಿಸಿದರು