ಧಾರವಾಡ - ಹುಬ್ಬಳ್ಳಿ

ಹೈಸ್ಕೂಲಿನಲ್ಲಿ ಜರುಗಿದ ಲೋವರ್ ಮತ್ತು ಹೈಯರ್ ಗ್ರೇಡ್‌ನ ತಲಾ 6 ಪತ್ರಿಕೆಗಳು ಚಿತ್ರಕಲಾ ವಾರ್ಷಿಕ ಪರೀಕ್ಷೆಗಳು ಸಂಪನ್ನ

ಹೈಸ್ಕೂಲಿನಲ್ಲಿ ಜರುಗಿದ ಲೋವರ್ ಮತ್ತು ಹೈಯರ್ ಗ್ರೇಡ್‌ನ ತಲಾ 6 ಪತ್ರಿಕೆಗಳು ಚಿತ್ರಕಲಾ ವಾರ್ಷಿಕ ಪರೀಕ್ಷೆಗಳು ಸಂಪನ್ನ


 ಹೈಸ್ಕೂಲಿನಲ್ಲಿ ಜರುಗಿದ ಲೋವರ್ ಮತ್ತು ಹೈಯರ್ ಗ್ರೇಡ್‌ನ ತಲಾ 6 ಪತ್ರಿಕೆಗಳು ಚಿತ್ರಕಲಾ ವಾರ್ಷಿಕ ಪರೀಕ್ಷೆಗಳು ಸಂಪನ್ನ 

ಧಾರವಾಡ 22: ಬೆಂಗಳೂರಿನ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸುವ ಪ್ರೌಢ ಶಾಲಾ ವಿದ್ಯಾರ್ಥಿಗಳ 2024-25ನೆಯ ವರ್ಷದ ಲೋವರ್ ಗ್ರೇಡ್ ಮತ್ತು ಹೈಯರ್ ಗ್ರೇಡ್ ಚಿತ್ರಕಲಾ ವಾರ್ಷಿಕ ಪರೀಕ್ಷೆಗಳು ಇಲಾಖಾ ನಿಯಮಾನುಸಾರ ಯಶಸ್ವಿಯಾಗಿ ನಡೆದು ಶುಕ್ರವಾರ ಸಂಪನ್ನಗೊಂಡವು. ಪರೀಕ್ಷಾ ಕೇಂದ್ರವಾಗಿದ್ದ ನಗರದ ಕಿಲ್ಲಾದಲ್ಲಿರುವ ಕರ್ನಾಟಕ ಪ್ರೌಢ ಶಾಲೆಯಲ್ಲಿ ನವ್ಹೆಂ.20 ರಿಂದ 22ರವರೆಗೆ 3 ದಿನಗಳ ಕಾಲ ದಿನಕ್ಕೆ ಎರಡು ಪತ್ರಿಕೆಗಳಂತೆ ಪರೀಕ್ಷೆಗಳನ್ನು ನಡೆಸಲಾಯಿತು.  


ಪರೀಕ್ಷಾ ವಿಷಯಗಳು : ಉಭಯ ಪರೀಕ್ಷೆಗಳು ವಸ್ತು ಚಿತ್ರಣ, ಸ್ಮರಣ ಚಿತ್ರಣ, ಪ್ರಕೃತಿ ಮತ್ತು ವರ್ಣ ಚಿತ್ರಣ, ಭೂಮಿತಿ ರೇಖಾಕೃತಿ ಚಿತ್ರಣ, ಅಕ್ಷರ ಲೇಖನ ಮತ್ತು ಪ್ರಮಾಣ ಚಿತ್ರಣ, ನಕ್ಷೆ ಮತ್ತು ವರ್ಣ ಚಿತ್ರಣ ಹಾಗೂ ಸರಳಗೈ ಚಿತ್ರಣ ವಿಷಯಗಳನ್ನು ಒಳಗೊಂಡ ತಲಾ 100 ಅಂಕಗಳ 6 ಪತ್ರಿಕೆಗಳನ್ನು ಹೊಂದಿದ್ದು, ಪ್ರತೀ ಪರೀಕ್ಷೆಯೂ 600 ಗರಿಷ್ಠ ಅಂಕಗಳನ್ನು ಹೊಂದಿರುತ್ತದೆ.  

ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ಚಿತ್ರಕಲಾ ಹಿರಿಯ ವಿಷಯ ಪರೀವೀಕ್ಷಕ ಪಿ.ಆರ್‌. ಬಾರಕೇರ ನಿತ್ಯವೂ ಭೇಟಿ ನೀಡಿ ಪರೀಶೀಲಿಸಿದರು. ಕೆ.ಇ. ಬೋರ್ಡಿನ ಶ್ರೀಕಾಂತ್ ಪಾಟೀಲ, ಎಸ್‌.ಡಿ. ರಾಜಪುರೋಹಿತ, ಮುಖ್ಯಾಧ್ಯಾಪಕ ಎನ್‌.ಎನ್‌. ಸವಣೂರ ಪರೀಕ್ಷೆಗಳ ವ್ಯವಸ್ಥೆಗೆ ಸಹಕರಿಸಿದರು. ಲೋವರ್ ಗ್ರೇಡ್‌ಗೆ 48 ಮತ್ತು ಹೈಯರ್ ಗ್ರೇಡ್‌ಗೆ 18 ವಿದ್ಯಾರ್ಥಿಗಳು ಹಾಜರಾಗಿದ್ದರು. ಮೇಲ್ವಿಚಾರಕರಾಗಿದ್ದ  ಗುರುರಾಜ ಅಂಬೇಕರ, ವ್ಹಿ.ಬಿ.ಶಿಂಗೆ, ಗೋಪಾಲ ಚಲವಾದಿ, ಯುಸೂಫ್‌ಅಲಿ ಖುಲಾಸೆ, ರಮೇಶ ಮಡಿವಾಳರ, ನೌಸಾದ್ ಭಾಗವಾನ, ಎಸ್‌.ಎ.ಕೇಸರಿ ಪರೀಕ್ಷೆ ಸಂಘಟಿಸಲು ನೆರವಾದರೆಂದು ಪರೀಕ್ಷಾ ಕೇಂದ್ರದ ಮುಖ್ಯಸ್ಥ ವಿಜಯಕುಮಾರ ಶಿಂಧೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 







ಸುದ್ದಿ ಓದಿ