535ನೇ ಭಕ್ತ ಕನಕದಾಸ ಜಯಂತಿ
272ನೇ ಮೈಸೂರು ಹುಲಿ ಟಿಪ್ಪು ಸುಲ್ತಾನ್ 135ನೇ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನೋತ್ಸವ
ಸಿರುಗುಪ್ಪ -ಪ್ರತಿಯೊಬ್ಬರು ಸಾಕ್ಷರರಾಗಬೇಕು ದೇಶದ ಸಮಗ್ರ ಅಭಿವೃದ್ಧಿಗೆ ಹಿರಿಯರು ಯುವಕರ ಪಾತ್ರ ಪ್ರಮುಖವಾದುದು ಶ್ರದ್ಧೆಯಿಂದ ಶಿಸ್ತು ಸಮಯ ಪಾಲನೆ ಉತ್ತಮರಾಗಿ ಕತ್ತಲಿನಿಂದ ಬೆಳಕಿನಲ್ಲಿ ಸಾಗಬೇಕು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ರಾಷ್ಟ್ರೀಯ ವಯಸ್ಕರ ಶಿಕ್ಷಣ ಸೆಂಟ್ರಲ್ ಕೌನ್ಸಿಲ್ ಮೈಸೂರು ಲೋಕ ಶಿಕ್ಷಣ ನಿರ್ದೇಶನಾಲಯ ಸಾಕ್ಷರತಾ ಸದಸ್ಯರಾದ ಅಬ್ದುಲ್ ನಬಿ ಅಭಿಪ್ರಾಯಪಟ್ಟರು.
ನಗರದ ಇಬ್ರಾಹಿಂ ಮಂಜಿಲ್ ನಲ್ಲಿ ಅವರು ಶ್ರೇಷ್ಠ ಸಂತ ಕವಿ ಕನಕದಾಸ ಅವರ 535ನೇ ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಅವರ 272ನೇ ಭಾರತ ರತ್ನ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ 135ನೇ ಜನ್ಮ ದಿನವನ್ನು ನೆನಪಿಸಿ ಸ್ಮರಿಸಿ ಗೌರವಿಸಿ ಈ ಮೂವರ ಕುರಿತು ಮಾತನಾಡುತ್ತ ಸಮ ಸಮಾಜದ ನಿರ್ಮಾಣಕ್ಕೆ ಕನಕದಾಸರ ಕೊಡುಗೆ ಅಮೋಘ. ಅವರ ತತ್ವ ಆದರ್ಶ ಗುಣಗಳು ಅಗತ್ಯ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ಸಾಧನೆ ಜನಪರ ಕಾರ್ಯಕ್ರಮ ಧೈರ್ಯ ಇತಿಹಾಸದಲ್ಲಿ ಸ್ವಾತಂತ್ರ ಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ನಮ್ಮ ನಾಡಿನ ರಕ್ಷಣೆಗೆ ಅಪಾರ ಕೊಡುಗೆ, ಅಲ್ಲದೆ ಪ್ರಪಂಚದ ವೀರರ ಸಾಲಿಗೆ ಸೇರಿದ ಧೀರ ಹಾಗೂ ಭಾರತರತ್ನ ಡಾ ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಭಾರತ ಸರಕಾರದ ಪ್ರಥಮ ಶಿಕ್ಷಣ ಮಂತ್ರಿಯಾಗಿ ದೇಶಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಈ ಮೂವರು ಮಹನೀಯರು ದೇಶಕ್ಕಾಗಿ ಸಲ್ಲಿಸಿದ ಅಪಾರ ಸೇವೆ ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಬೇಕು. ಶಿಕ್ಷಣ ಪ್ರೇಮಿ ದೇಶಪ್ರೇಮಿ ಅಬ್ದುಲ್ ನಬಿ ನುಡಿದರು. ಸಮಾಜದ ಪ್ರಮುಖರು ಸಾಮಾಜಿಕ ಕಾರ್ಯಕರ್ತರಾದ ಹಾಜಿ ಹಂಡಿ ಹುಸೇನ್ ಬಾಷಾ, ಹಾಜಿ ಮುಹಮ್ಮದ್ ಇಬ್ರಾಹೀಂ ,ಹಾಜಿ ಖಾಲಿ ಚೀಲ ಹುಸೇನ್ ಸಾಬ್ ,ಹಾಜಿ ಡಬಲ್ ಬಾಂಡ್ ಅಬ್ದುಲ್ ಗನಿ ,ಖತೀಬ್ ಜಹಿರುದ್ದೀನ್ ಬಾಬು ,ಎ ಮೊಹಮ್ಮದ್ ರಫಿ, ಮೊಹಮ್ಮದ್ ನೌಶಾದ್ ಅಲಿ , ಡಾ ಮೊಹಮ್ಮದ ಅಲಿ, ಖಾಜಿ ಸೈಯದ್ ಜಿಲಾನ್ ಖಾದ್ರಿ ,ಹಾಫಿಜ್ ನೂರ್ ಮಹಮ್ಮದ್, ಬಿ ಕೆ ಅಲ್ಲಾಭಕ್ಷಿ , ಮೊಹಮ್ಮದ್ ಖಲೀಲ್,ಬಿ ದಾದಾ ಖಲಂದರ್ , ಹಾಜಿ ಅಬ್ದುಲ್ ಹಮೀದ್ ಫಾರೂಕಿ ,ಹಂಡಿ ಹುಸೇನ್ ಸಾಬ್, ಹಂಡಿ ಹಾಶಿಮ್ ಇದ್ದರು .