ರಷ್ಯಾದಲ್ಲಿ ಎಂ.ಬಿ.ಬಿ.ಎಸ್. ವ್ಯಾಸಂಗಕ್ಕೆ ಬೆಂಗಳೂರಿನಿಂದ 50 ವಿದ್ಯಾರ್ಥಿಗಳ ಪ್ರಯಾಣ
ಬಿಳಗಿ 29 : ಎಸ್ ವ್ಯಾಸಂಗಕ್ಕಾಗಿ ರಷ್ಯಾಕ್ಕೆ ತೆರಳಿದ 50 ವಿದ್ಯಾರ್ಥಿಗಳು ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿದ್ಯಾರ್ಥಿಗಳ ಪ್ರಯಾಣ ಬೆಂಗಳೂರು: ಫ್ಲೈ ಮೆಡಿಕೋ ಎಜುಕೇಶನ್ ಕಂಪನಿಯ ವತಿಯಿಂದ ಎಂಬಿಬಿಎಸ್ ವೈದ್ಯಕೀಯ ಪದವಿ ವ್ಯಾಸಂಗಕ್ಕಾಗಿ 50 ವಿದ್ಯಾರ್ಥಿಗಳು ದಿನಾಂಕ 22-10-2026ರಂದು ಬೆಂಗಳೂರು ನಗರದ ನಾಡಪ್ರಭು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಷ್ಯಾ ದೇಶಕ್ಕೆ ಪ್ರಯಾಣ ಬೆಳೆಸಿದರು. ವಿದ್ಯಾರ್ಥಿಗಳು ಅಬುಧಾಬಿ ಮಾರ್ಗವಾಗಿ ಇತಿಹಾಡ್ ಏರ್ವೇಸ್ ಮೂಲಕ ರಷ್ಯಾಕ್ಕೆ ತೆರಳಿದರು.
ವೈದ್ಯಕೀಯ ಶಿಕ್ಷಣ ಪಡೆಯುವ ಉದ್ದೇಶದಿಂದ ವಿದೇಶಕ್ಕೆ ಪ್ರಯಾಣ ಬೆಳೆಸಿದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಅವರ ಪಾಲಕರು ಶುಭ ಹಾರೈಸಿದರು. ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಭವಿಷ್ಯದಲ್ಲಿ ಉತ್ತಮ ವೈದ್ಯರಾಗಿ ಸಮಾಜಕ್ಕೆ ಸೇವೆ ಸಲ್ಲಿಸಲಿ ಎಂಬ ಆಶಯವನ್ನು ಪಾಲಕರು ಹಾಗೂ ಸಂಸ್ಥೆಯ ಪ್ರತಿನಿಧಿಗಳು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಫ್ಲೈ ಮೆಡಿಕೋ ಎಜುಕೇಶನ್ ಕಂಪನಿಯ ಗೌರವಾಧ್ಯಕ್ಷರಾದ ಬಸವರಾಜ್ ದೇವರಮನಿ,
ಸಂಸ್ಥಾಪಕ ನಿರ್ದೇಶಕರಾದ ಪಿ.ಎಲ್. ಪಾಟೀಲ್, ನಿರ್ದೇಶಕರಾದ ಎಂ.ಎಲ್. ಪಾಟೀಲ್ ಸೇರಿದಂತೆ ಬಸವರಾಜ್ ಯಂಕಂಚಿ, ಸಿದ್ದಯ್ಯ ಪೂಜಾರಿ, ಮಲ್ಲು ಪೂಜಾರಿ, ಬಸವರಾಜ್ ರಾಜವರ್ಧನ್, ಮಹಾಂತೇಶ್ ಐಹೊಳೆ, ಬಸವರಾಜ್ ಹತ್ತಿ, ಮಲ್ಲಪ್ಪ ತೋಳಮಟ್ಟಿ, ಅಶೋಕ್ ಬಿರಾದರ್ ಹಾಗೂ ಆಶಾ ಕಂಬಾರ್ ಉಪಸ್ಥಿತರಿದ್ದರು.