ಕಾಗವಾಡ

ಶೇಡಬಾಳ ಕೃಷಿ ಪತ್ತಿನ ಸಂಘಕ್ಕೆ 50.61.579 ರೂ. ಲಾಭ

ಶೇಡಬಾಳ ಕೃಷಿ ಪತ್ತಿನ ಸಂಘಕ್ಕೆ 50.61.579 ರೂ. ಲಾಭ

ಶೇಡಬಾಳ 25: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 2021-22 ನೇ ಸಾಲಿನಲ್ಲಿ 50 ಲಕ್ಷ 61 ಸಾವಿರ 579 ರೂ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಕಾರ್ಯದರ್ಶಿ ಎ.ಎನ್‌.ಕುಂಬಾರ ಹೇಳಿದರು. 

ಅವರು ಶೇಡಬಾಳ ಗ್ರಾಮದ ಸನ್ಮತಿ ವಿದ್ಯಾಲಯದ ಸಭಾಂಗಣದಲ್ಲಿ ಜರುಗಿದ 78 ನೇ ವಾರ್ಷಿಕ ಸರ್ವಸಾಧಾರಣ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಸಭೆಯ ಅಧ್ಯಕ್ಷತೆಯನ್ನು ಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷರಾದ ಅಜೀತ ಅಪ್ಪಾಸಾಬ ಸವದತ್ತಿ ವಹಿಸಿದ್ದರು. 2021-22 ಸಾಲಿನ ಅಖೇರಿಗೆ ರೈತ ಸದಸ್ಯರಿಗೆ ಕೃಷಿ ಸಾಲ 2 ಕೋಟಿ 64 ಲಕ್ಷ 68 ಸಾವಿರ ರೂ. ಹಾಗೂ ಕೃಷಿಯೇತರ ಸಾಲ 3 ಕೋಟಿ 8 ಲಕ್ಷ 60 ಸಾವಿರ 920 ರೂ. ಹಂಚಿದ್ದು ಎಲ್ಲ ಸಾಲ ಕೂಡಿ ಒಟ್ಟು 5 ಕೋಟಿ 41 ಲಕ್ಷ 18 ಸಾವಿರದ 523 ರೂ. ಸಾಲವನ್ನು ವಿತರಿಸಲಾಗಿದೆ. 10 ಕೋಟಿ 42 ಲಕ್ಷ ರೂ. ದುಡಿಯುವ ಬಂಡವಾಳ ಹೊಂದಿದೆ. ಪ್ರಸಕ್ತ ವರ್ಷದಲ್ಲಿ 50 ಲಕ್ಷ 61 ಸಾವಿರ 579 ರೂ. ನಿವ್ವಳ ಲಾಭ ಗಳಿಸಿದೆ. 

ಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಮೇಶ ಕತ್ತಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯವರ ವಿಶೇಷ ಪ್ರಯತ್ನದಿಂದ ಈ ವರ್ಷ ನಮ್ಮ ಬ್ಯಾಂಕಿನ ಪತ್ತು ಹೆಚ್ಚಾಗಿರುವ ಕಾರಣ ಹೆಚ್ಚಿನ ಸಂಖ್ಯೆಯ ರೈತರಿಗೆ ಸಾಲ ವಿತರಿಸಲು ಸಹಕಾರಿಯಾಗಿದೆ ಎಂದು ಹೇಳಲು ಹೆಮ್ಮೆಯೆನಿಸುತ್ತದೆ. ರಮೇಶ ಕತ್ತಿ ಹಾಗೂ ಲಕ್ಷ್ಮಣ ಸವದಿಯವರಿಗೆ ಸಂಘವು ಯಾವಾಗಲು ಚಿರಋಣಿಯಾಗಿರುತ್ತದೆ ಎಂದು ಎ.ಎನ್‌.ಕುಂಬಾರ ಹೇಳಿದರು.  

ಸಂಘದ ಸದಸ್ಯರು ಸಕಾಲದಲ್ಲಿ ಸಾಲವನ್ನು ಮರುಪಾವತಿ ಮಾಡಿ ಸಹಕರಿಸುವಂತೆ ಮನವಿ ಮಾಡಿಕೊಂಡರು. 

ಪಿಕೆಪಿಎಸ್ ಸಂಸ್ಥೆಯ ಅಧ್ಯಕ್ಷ ಅಜೀತ ಸವದತ್ತಿ, ಉಪಾಧ್ಯಕ್ಷ ಅಶೋಕ ಮಾಕಣ್ಣವರ, ನಿರ್ದೇಶಕರಾದ ಶ್ರೀಕಾಂತ ಮಾಲಗಾಂವೆ, ವಿನೋದ ಬರಗಾಲೆ, ಸುನೀಲ ಪಾಟೀಲ, ದೇವೇಂದ್ರ ಚೌಗಲೆ, ಅಣ್ಣಾಸಾಬ ಖಾಂಡೆ, ದೀಲೀಪ ಮಾಳಿ, ಅಂಬಾಜಿ ಗೊಂಧಳಿ, ಅನಿಲ ಕಾಂಬಳೆ,  ಪ್ರಭಾವತಿ ಕುಡಚೆ, ಪುಷ್ಪಾವತಿ ಪಾಟೀಲ, ಮುಖ್ಯಕಾರ್ಯನಿರ್ವಾಹಕರಾದ ಅದೃಷಪ್ಪಾ ಕುಂಬಾರ,  ಸಿಬ್ಬಂದಿಗಳಾದ ಅಣ್ಣಾಸಾಬ ಸಾಬನ್ನವರ, ರಮೇಶ ಸೈನ, ಪ್ರಮೋದ ನರಸಗೌಡರ, ದಾದಾ ಗಡೆನ್ನವರ, ಅಪ್ಪಾಸಾಬ ಮೂಲಿಮನಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸದಸ್ಯರು ಹಾಜರಿದ್ದರು. ಅಣ್ಣಾಸಾಬ ಖಾಂಡೆ ಸ್ವಾಗತಿಸಿದರು. ಅದೃಷಪ್ಪಾ ಕುಂಬಾರ ವರದಿ ವಾಚನ ಮಾಡಿದರು. ಅಣ್ಣಾಸಾಬ ಸಾಬನ್ನವರ ವಂದಿಸಿದರು. ಶೀತಲ ಮಾಲಗಾಂವೆ ಕಾರ್ಯಕ್ರಮ ನಿರೂಪಿಸಿದರು. 


ಸುದ್ದಿ ಓದಿ