5ರಿಂದ ಉಡಾನ್ ಸಾಂಸ್ಕೃತಿಕ ಉತ್ಸವ 2022-23
ಸಂಕೇಶ್ವರ 31: ಪ್ರತಿಷ್ಠಿತ ಎಸ್ಡಿಎಎಸ್ ಸಂಘದ ಎಸ್ ಎಸ್ ಕೆ ಪಾಟೀಲ್ ಅಂಗ್ಲ ಮಾಧ್ಯಮ ಸಿಬಿಎಸ್.ಸಿ. ಶಾಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಉಡಾನ್ ಸಾಂಸ್ಕೃತಿಕ ಉತ್ಸವ ಜನವರಿ 5, 6 ಮತ್ತು 7 ರಂದು ವಿಜೃಂಭಣೆಯಿಂದ ಜರುಗಲಿದೆ ಎಂದು ಪ್ರಾಚಾರ್ಯ ಮಾರುತಿ ಕಾಮತ್ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜನವರಿ 5 ರಂದು ಬೆಳಿಗ್ಗೆ ಪೂರ್ವ ಪಾರ್ಥಮಿಕ ತರಗತಿಯ ಬಹುಮಾನ ವಿತರಣಾ ಸಮಾರಂಭ ಹಾಗೂ ಅದೇ ದಿನ ಸಾಯಂಕಾಲ 6 ಗಂಟೆಗೆ ಉಡಾನ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನಂತರ ಕಳೆದ ಸಾಲಿನ ಹತ್ತನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭ ಏರಿ್ಡಸಲಾಗಿದೆ. 2ರಿಂದ 5ನೇ ತರಗತಿಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಇದೇ ದಿನದಂದು ಜರಗಲಿವೆೆ.
ಜನವರಿ 6 ರಂದು ಬೆಳಿಗ್ಗೆ 9 ಗಂಟೆಗೆ 6ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳ ಬಹುಮಾನ ವಿತರಣೆ ಹಾಗೂ ಸಂಜೆ 6 ಗಂಟೆಯಿಂದ ಪೂರ್ವ ಪ್ರಾಥಮಿಕ ತರಗತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಜನವರಿ 7 ರಂದು ಬೆಳಿಗ್ಗೆ 9 ಗಂಟೆ 1ನೇ ತರಗತಿಯಿಂದ 5ನೇ ತರಗತಿಯ ವಿದ್ಯಾರ್ಥಿಗಳ ಬಹುಮಾನ ವಿತರಣೆ ಕಾರ್ಯಕ್ರಮ ಹಾಗೂ ಸಾಯಂಕಾಲ 6 ಗಂಟೆಯಿಂದ 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಉಡಾನ್ ಸಾಂಸ್ಕೃತಿಕ ಉತ್ಸವ, ಅವೃತ್ತಿ ನಿಮಿತ್ಯ ಒಂಬತ್ತು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ವಿಜ್ಞಾನ ವಸ್ತುಪ್ರದರ್ಶನ, ಕಲಾ ವಸ್ತುಪ್ರದರ್ಶನ, ಮೆಹಂದಿ ವಿನ್ಯಾನ, ನವರಂಗ, ನಿಯೋಜಿತ ಕಾರ್ಯ (ಪ್ರಾಜೆಕ್ಟ್ ವರ್ಕ) ನನ್ನ ತಂದೆ ನನ್ನ ನಾಯಕ (ಮೈ ಡ್ಯಾಡಿ ಇಸ್ ಮೈ ಹೀರೋ ಐ ಲವ್ ಮೈ ಮದರ್, ಅ ಪ್ಯೂಚರ್ ರೆಡಿ ಸ್ಕೂಲ್, ವಿ.ದ ಎಸ್ ಎಸ್ ಕಪಿಯನ್ನ ಥೀಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಶಾಲಾ ಪಾಲಕರಿಗೆ ಮೂರು ದಿನಗಳಂದು ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ. ಮೂರು ದಿನಗಳ ಕಾಲ ಜರುಗುವ ಈ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಸಚಿವರು ಹಾಗೂ ಎಸ್ಡಿಎಎಸ್ ಸಂಘದ ಕಾರ್ಯಾಧ್ಯಕ್ಷ ಎ ಬಿ ಪಾಟೀಲ ಅವರು ವಹಿಸಲಿದ್ದಾರೆ. ಎಸ್ಡಿವಿಎಸ್ ಸಂಘದ ಆಡಳಿತ ಮಂಡಳಿಯ ಸರ್ವ ಸದಸ್ಯರು, ಕಾರ್ಯದರ್ಶಿ ಜಿ ಸಿ ಕೋಟಗಿ, ಹಾಗೂ ಅಡಳಿತಾಧಿಕಾರಿ ಬಿ ಎ ಪೂಜಾರಿ ಈ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. 9ನೇ ಉಡಾನ್ ವಾರ್ಷಿಕೋತ್ಸವದ ನಿಮಿತ್ಯ ಮೈಸೂರು ಅರಮನೆ ಮಾದರಿಯಲ್ಲಿ ಭವ್ಯ ವೇದಿಕೆ ನಿರ್ಮಾಣವಾಗುತ್ತಿದ್ದು, ಜನರು ಈ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತರಬೇಕೆಂದು ಅವರು ತಿಳಿಸಿದ್ದಾರೆ.