ಶಿಗ್ಗಾವ್

3ನೇ ಹಂತದ ಬೃಹತ ಜನಜಾಗೃತಿ ಪಾದಯಾತ್ರೆ ಕಾರ್ಯಕ್ರಮ

3ನೇ ಹಂತದ ಬೃಹತ ಜನಜಾಗೃತಿ ಪಾದಯಾತ್ರೆ  ಕಾರ್ಯಕ್ರಮ

ಶಿಗ್ಗಾವಿ 28: ಶಿಗ್ಗಾವಿ ಯುವ ಕಾಂಗ್ರೆಸ್ ಹಾಗೂ ಮಾಜಿ ಶಾಸಕ ಸೈಯದ್ ಅಜ್ಜಂಪೀರ ಖಾದ್ರಿ ಯವರು ನೇತೃತ್ವದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ "ದೇಶದ ಏಕತೆಗಾಗಿ ನಡೆಗೆ" ಎಂಬ 3ನೇ ಹಂತದ ಬೃಹತ ಜನಜಾಗೃತಿ ಪಾದಯಾತ್ರೆ  ಕಾರ್ಯಕ್ರಮವನ್ನು  ತಾಲೂಕಿನ ಬಸನಾಳ ಗ್ರಾಮದಿಂದ ಬೆಳಗಲಿ ಗ್ರಾಮದವರೆಗೆ  ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಸೈಯದ್ ಅಜ್ಜಂಪೀರ ಖಾದ್ರಿ ಹೇಳಿದರು. 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಘೋಷ್ಠಿ ಉದ್ದೇಶಿಸಿ ಮಾತನಾಡಿ ಈಗ ಎರಡು ಬೃಹತ ಜನಜಾಗೃತಿ ಪಾದಯಾತ್ರೆ  ಕಾರ್ಯಕ್ರಮ ಯಶಸ್ವಿಯಾದ ಹಿನ್ನಲೆಯಲ್ಲಿ ಪಕ್ಷಾತೀತವಾಗಿ 3ನೇ ಹಂತದ ಬೃಹತ ಜನಜಾಗೃತಿ ಪಾದಯಾತ್ರೆಯನ್ನು ಬಸನಾಳ ಗ್ರಾಮದಿಂದ ಪ್ರಾರಂಭವಾಗಿ ಹುಲಗೂರ ಮಾರ್ಗವಾಗಿ  ಪಾಣಿಗಟ್ಟಿ, ಕ್ಯಾಲಕೊಂಡ, ಸುರಪಗಟ್ಟಿ, ಬೆಳವಲಕೊಪ್ಪ, ಚಿಕ್ಕಬೆಂಡಿಗೇರಿ, ಬೇಂಡಿಗೇರಿ, ಬೆಳಗಲಿ ತಲುಪಲಿದೆ ಎಂದು ಹೇಳಿದರು.  

ಈ ಸಂದರ್ಭದಲ್ಲಿ ಹೊಸುರ ಪಂಚಾಯತಿ ಅಧ್ಯಕ್ಷ ಅಣ್ಣಪ್ಪ ಲಮಾಣಿ, ನ್ಯಾಯವಾದಿ ಸಲೀಂ ಪರೋಖಿ, ಅಬ್ದುಲ್ ಮಜೀದ ಮಾಳಗಿಮನಿ, ಸೇರಿದಂತೆ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ