ರಾಷ್ಟ್ರೀಯ

24 ಗಂಟೆಯಲ್ಲಿ ಕೊರೋನ ಸೋಂಕಿಗೆ 299 ಮಂದಿ ಸಾವು

24 ಗಂಟೆಯಲ್ಲಿ ಕೊರೋನ ಸೋಂಕಿಗೆ 299 ಮಂದಿ ಸಾವು

ನವದೆಹಲಿ, ಡಿಸೆಂಬರ್ 31: ದೇಶದಲ್ಲಿ ಕಳದೆ 24 ಗಂಟೆಗಳ ಅವಧಿಯಲ್ಲಿ 299 ಮಂದಿ ಕೋರೋನ ಸೋಂಕಿತರು  ಮೃತಪಟ್ಟಿದ್ದು  21,821 ಹೊಸ ಸೋಂಕು  ಪತ್ತೆಯಾಗಿದೆ ಮತ್ತು ಒಂದೇ  ದಿನದಲ್ಲಿ 26,139 ಮಂದಿ ರೋಗಿಗಳು ಆಸ್ಪತ್ರೆಯಿಂದ ಮನೆಗೆ ವಾಪಸ್ ಆಗಿದ್ದಾರೆ.

ಈ ನಡುವೆ ದೇಶದಲ್ಲಿ  ಚೇತರಿಕೆ ಪ್ರಮಾಣ  ಶೇಕಡ 95 ಕ್ಕೆ ಏರಿಕೆಯಾಗಿದ್ದು ಸಾವಿನ ಶೇಕಡವಾರು ಪ್ರಮಾಣ ವಿಶ್ವದಲ್ಲಿ ಅತಿಕಡಿಮೆಯಿದೆ ಎಂದು  ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ  ಮಾಹಿತಿ ನೀಡಿದೆ.

ಕಳೆದ 24 ಗಂಟೆಯಲ್ಲಿ ಸೋಂಕಿಗೆ 299 ಮಂದಿ ಮೃತಪಟ್ಟಿದ್ದು  ಇದುವರೆಗೆ 1,48,738 ಮಂದಿ ಕೊರೋನ ಸೋಂಕಿಗೆ ಸಾವನ್ನಪ್ಪಿದ್ದಾರೆ.

ಒಟ್ಟು 98,60,280 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ದೇಶದಲ್ಲಿ 2,57,656 ಸಕ್ರಿಯ ಪ್ರಕರಣಗಳಿವೆ ಎಂದೂ  ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಸುದ್ದಿ ಓದಿ