ಸಹಕಾರಿಗೆ ರೂ. 43.18 ಲಕ್ಷ ನಿವ್ಹಳ ಲಾಭ: ವಿದ್ಯಾಸಾಗರ ಮಾನಗಾಂವೆ..!
ಶಿರಗುಪ್ಪಿ ಶಾಂತಿಸಾಗರ ಸಹಕಾರಿಯ 27 ನೇ ಸರ್ವ ಸಾಧಾರಣ ಸಭೆ
ಕಾಗವಾಡ 15: ಸಂಸ್ಥಾಪಕರಾದ ದಿವಗಂತ ಡಾ. ಎನ್.ಡಿ. ಭೋಮಾಜ ಇವರ ಮಾರ್ಗದರ್ಶನದಲ್ಲಿ 27 ವರ್ಷಗಳ ಹಿಂದೆ ಸ್ಥಾಪನೆಗೊಂಡ ಶಾಂತಿಸಾಗರ ಕ್ರೆಡಿಟ್ ಸೌಹಾರ್ದ ಸಹಕಾರಿಯು ಪ್ರಗತಿ ಪಥದಲ್ಲಿ ಸಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ರೂ. 43 ಲಕ್ಷ 18 ಸಾವಿರದ 611 ನಿವ್ಹಳ ಲಾಭ ಗಳಿಸಿದೆ ಎಂದು ಸಹಕಾರಿಯ ಅಧ್ಯಕ್ಷ ವಿದ್ಯಾಸಾಗರ ಮಾನಗಾಂವೆ ತಿಳಿಸಿದ್ದಾರೆ.
ಅವರು, ಶನಿವಾರ ದಿ. 14 ರಂದು ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಜೈನ ಸಭಾಭವನದಲ್ಲಿ ನಡೆದ ಶ್ರೀ ಶಾಂತಿಸಾಗರ ಕ್ರೆಡಿಟ್ ಸೌಹಾರ್ದ ಸಹಕಾರಿಯ 27 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡುತ್ತಿದ್ದರು. ಸಹಕಾರಿಯು ಒಟ್ಟು 2504 ಸದಸ್ಯರನ್ನು ಹೊಂದಿದ್ದು, 23 ಕೋಟಿ, 7 ಲಕ್ಷ 800 ರೂ. ಶೇರ್ ಬಂಡವಾಳ ಹೊಂದಿದೆ. ಅದರಂತೆ 2 ಕೋಟಿ 87 ಲಕ್ಷ 42 ಸಾವಿರದಾ 463 ಕಾಯ್ದಿಟ್ಟ ಮತ್ತು ಇತರ ನಿಧಿಗಳನ್ನು ಹೊಂದಿದ್ದು, 37 ಕೋಟಿ 22 ಲಕ್ಷ 89 ಸಾವಿರದಾ 601 ರೂ. ಡಿಪಾಜಿಟ್ ಹೊಂದಿದೆ. ಇನ್ನೂ 40 ಕೋಟಿ 33 ಲಕ್ಷ 39 ಸಾವಿರದಾ 865 ರೂ. ದುಡಿಯುವ ಬಂಡವಾಳ ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ ಸಹಕಾರಿಯು ರೂ. 43 ಲಕ್ಷ 18 ಸಾವಿರದ 611 ನಿವ್ಹಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 15 ರಷ್ಟು ಲಾಭಾಂಶ ವಿತರಿಸಲಾಗುವುದು ಎಂದರು.
ಸಭೆಗೆ ಪ.ಪೂ. ಶಾಂತಿಸಾಗರ ಮುನಿಮಹಾರಾಜರ ಮತ್ತು ದಿ. ಡಾ. ಎನ್.ಡಿ. ಭೋಮಾಜ ಅವರ ಭಾವಚಿತ್ರದ ಪೂಜೆ ನೆರವೇರಿಸಿ, ದೀಪ ಬೆಳಗಿಸಿ ಚಾಲನೆ ನೀಡಲಾಯಿತು. ಇದೇ ಸಮಯದಲ್ಲಿ ಸಹಕಾರಿಯ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಸಹಕಾರಿಯಲ್ಲಿ ಗುರಿ ಸಾಧನೆ ಮಾಡಿದ ಸಿಬ್ಬಂದಿ ವರ್ಗದವರನ್ನು ಮತ್ತು ಗಣ್ಯರನ್ನು ಸನ್ಮಾನಿಸಲಾಯಿತು.
ಈ ಸಮಯದಲ್ಲಿ ಅನೇಕ ಗಣ್ಯರು ತಮ್ಮ ಅನಿಸಿಕೆ ಹಂಚಿಕೊಂಡರು. ಮುಖ್ಯ ಶಾಖೆಯ ವ್ಯವಸ್ಥಾಪಕ ಅನಂತ ಐನಾಪೂರೆ ವರದಿ ವಾಚನ ಮಾಡಿದರು.
ಈ ವೇಳೆ ಬಾಳಾಸಾಹೇಬ ಪಾಟೀಲ, ಡಿ.ಎ. ಪಾಟೀಲ, ಸಾಗರ ದುಗ್ಗೆ, ಡಾ. ಆರ್.ಆರ್. ಕುನ್ನೂರೆ, ಅಪ್ಪಾ ಭಗಾಟೆ, ಮಹಾವೀರ ಮಾದನ್ನವರ, ಚಂದ್ರಕಾಂತ ಹಟ್ಟಿ, ಸ್ನೇಹಲ್ ನಾಂದ್ರೆ, ಬಾಬಾಸಾಬ ಕಾಗವಾಡೆ, ಬಾಳಾಸಾಹೇಬ ಪಾಟೀಲ, ಸಹಕಾರಿಯ ಉಪಾಧ್ಯಕ್ಷ ಪುರಂದರ ಕನವಾಡೆ, ನಿರ್ದೇಶಕರಾದ ಡಾ. ಮೋಹನ ಭೋಮಾಜ, ಅಣ್ಣಾಸಾಹೇಬ ಬಸನ್ನವರ, ಅಶ್ವತಕುಮಾರ ಪಾಟೀಲ, ಧನಪಾಲ ಬೋರಗಾಂವೆ, ತುಕಾರಾಮ ಬಡಿಗೇರ, ಅಪ್ಪಾಸಾಬ ಕಾಂಬಳೆ, ಕಮಲತಾಯಿ ಅಳತೆ, ಶೋಭಾ ಕಾಗವಾಡೆ, ಪ್ರದೀಪ ಮಗದುಮ್ ಸೇರಿದಂತೆ ಅನೇಕ ಗಣ್ಯರು, ಸಹಕಾರಿಯ ಎಲ್ಲ ಶಾಖೆಯ ಸಲಹಾ ಸಮಿತಿಯ ಸದಸದ್ಯರು, ಸಿಬ್ಬಂದಿ ವರ್ಗದವರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು. ಡಾ. ಮೋಹನ ಭೋಮಾಜ ಸ್ವಾಗತಿಸಿದರು. ಕುಮಾರ ಮಾಲಗಾಂವೆ ನಿರೂಪಿಸಿದರು. ಬಾಳಾಸಾಹೇಬ ಪಾಟೀಲ ವಂದಿಸಿದರು.