24 ತೀರ್ಥಂಕರರು ರಾಜ್ಯವೈಭೋಗ ತ್ಯಜಿಸಿ ಮುನಿಗಳಾದರು
ಸುಯಶಗುಪ್ತ ಮುನಿಮಹಾರಾಜರು ಹೇಳಿಕೆ: ಶೇಡಬಾಳ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಕಾರ್ಯಕ್ರಮ
ಶೇಡಬಾಳ : 24 ತೀರ್ಥಂಕರರು ರಾಜರಾಗಿದ್ದ ಸಮಯದಲ್ಲಿ ಜೀವನದಲ್ಲಿ ವೈರಾಗ್ಯ ಹೊಂದಿ ಶಾಶ್ವತವಲ್ಲದ ಅರಮನೆ, ರಾಜ್ಯವೈಭೋಗ, ಸುಖ -ಸಂಪತ್ತು ಎಲ್ಲವನ್ನು ತ್ಯಜಿಸಿ ಮುನಿ ದೀಕ್ಷೆ ಪಡೆದುಕೊಂಡು ಮೋಕ್ಷ ಪ್ರಾಪ್ತಿ ಮಾಡಿಕೊಂಡರೆಂದು ಸುಯಶಗುಪ್ತ ಮುನಿಮಹಾರಾಜರು ಹೇಳಿದರು.
ಅವರು ಶನಿವಾರ ದಿ. 21 ರಂದು ಶೇಡಬಾಳ ಪಟ್ಟಣದ ಶಾಂತಿಸಾಗರ ಆಶ್ರಮದಲ್ಲಿ ಜರುಗುತ್ತಿರುವ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಾಭೀಷೇಕ, ದೀಕ್ಷಾ ಕಲ್ಯಾಣ, ಮೌಂಜಿ ಬಂಧನ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಪ್ರತಿಯೊಬ್ಬರು ತಮ್ಮ ಜೀವನದಲ್ಲಿ 24 ತೀರ್ಥಂಕರರು ಹೇಳಿಕೊಟ್ಟ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸತ್ಯ, ಅಹಿಂಸೆ, ನ್ಯಾಯ, ನಿಷ್ಠೆ, ಸನ್ಮಾರ್ಗದಿಂದ ನಡೆದುಕೊಂಡಾಗ ಮಾತ್ರ ಜೀವನ ಪಾವನವಾಗುವುದು ಎಂದು ಹೇಳಿದರು.
ಮೌಂಜಿ ಬಂಧನದ ಕುರಿತು ಮಾತನಾಡುತ್ತಾ ಪಾಲಕರು ತಮ್ಮ ಮಕ್ಕಳು ಚಿಕ್ಕವರಿದ್ದಾಗಲೇ ಉತ್ತಮ ಆಚಾರ, ವಿಚಾರ, ಸಂಸ್ಕೃತಿ, ಸಂಸ್ಕಾರ, ಧಾರ್ಮಿಕ ಮನೋಭಾವನೆ ಅಳವಡಿಸಿಕೊಳ್ಳಲು ಪ್ರೇರೆಪಿಸಬೇಕೆಂದು ಕರೆ ನೀಡಿದರು. ಅಲ್ಲದೇ ಮೌಂಜಿಬಂಧನದಲ್ಲಿ ಭಾಗವಹಿಸಿದ ಮಕ್ಕಳಿಗೆ 8 ವೃತಗಳನ್ನು ನೀಡಿ ಜೀವನ ಪೂರ್ತಿ ಅದನ್ನು ಪಾಲಿಸಿಕೊಂಡು ಹೋಗುವಂತೆ ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ನಾಂದಣಿಯ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಜಿಯವರು, ಪಾರ್ಶ್ವಸೇನ ಮುನಿಮಹಾರಾಜರು, ಚಂದ್ರಗುಪ್ತ ಮುನಿಮಹಾರಾಜರು, ಅಜೀತಮತಿ ಮಾತಾಜಿ, ಸುಮತಿಮತಿ ಮಾತಾಜಿ, ಚಂದ್ರಮತಿ ಮಾತಾಜಿ, ಸುವರ್ಣಮತಿ ಮಾತಾಜಿಯವರು ಪ್ರವಚನ ನೀಡಿದರು.
ರಾಜ್ಯಾಭಿಷೇಕ ಕಾರ್ಯಕ್ರಮದ ಅಂಗವಾಗಿ ಭವ್ಯ ವೇದಿಕೆಯ ಮೇಲೆ ಧರ್ಮ ಸಭೆ, ರಾಜ್ಯಾಭಿಷೇಕ, 56 ದೇಶದ ರಾಜರಿಂದ ನಜರಾಣೆ ಅರ್ಣ, ಕಿಮಿಚ್ಛಕದಾನ, ದರಬಾರಿ ನೃತ್ಯ, ವೈರಾಗ್ಯ ಭಾವನೆ, ಲೌಕಾಂತಿಕ ದೇವಾಗಮನ, ವೈರಾಗ್ಯ ಸ್ತುತಿ, ದೀಕ್ಷಾವನಕ್ಕೆ ಪ್ರಸ್ಥಾನ, "ದೀಕ್ಷಾ ಕಲ್ಯಾಣ", ಶಾಸ್ತ್ರಸಭೆ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಪ್ರತಿಷ್ಠಾಚಾರ್ಯರಾದ ವೃಷಭಸೇನ ಜಿನದತ್ತ ಉಪಾಧ್ಯೆ, ಶಾಂತಿನಾಥ ಆದಿನಾಥ ಉಪಾಧ್ಯೆ, ಸ್ಥಾನಿಕ ಪಂಡಿತರಾದ ಬಾಹುಬಲಿ ಅಜೀತ ಉಪಾಧ್ಯೆ, ಅಜೀತ ಭುಜಬಲ್ಲಿ ಉಪಾಧ್ಯೆ, ಭುಜಬಲ್ಲಿ ಕಲ್ಲಪ್ಪಾ ಉಪಾಧ್ಯೆ, ಸನ್ಮತಿ ಧರಣೇಂದ್ರ ಉಪಾಧ್ಯೆ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ದಾನೋಳಿಯ ನಮೋಕಾರ ಕಲಾಮಂಚ ಸಂಗೀತ ಸಾಥ ನೀಡಿದರು.
ಈ ಸಮಯದಲ್ಲಿ ಅಶೋಕ ಪಾಟೀಲ, ವೃಷಭ ಪಾಟೀಲ, ಸಚೀನ ಪಾಟೀಲ, ಅರವಿಂದ ಪಾಟೀಲ, ವಿನೋದ ಪಾಟೀಲ, ಹರ್ಷವರ್ಧನ ಪಾಟೀಲ, ಭರತೇಶ ಪಾಟೀಲ, ವಿವೇಕ ಪಾಟೀಲ, ಆದಿರಾಜ ಪಾಟೀಲ, ಉತ್ಕರ್ಷ ಪಾಟೀಲ, ಬಾಬಾಸಾಹೇಬ ಬೋಜಕರ, ಶಿರಿಷ ಹುಳ್ಳೆ, ಬಸಗೌಡ ಭುಜಗೌಡರ, ಅಣ್ಣಾಗೌಡ ಪಾಟೀಲ, ಅಜೀತ ನರಸಗೌಡರ, ನೇಮಿನಾಥ ನರಸಗೌಡರ, ಭರತೇಶ ಪಾಟೀಲ, ಪೋಪಟ ಭುಜಗೌಡರ, ಕುಮಾರ ಗಣೆ, ವರ್ಧಮಾನ ಪಾಟೀಲ, ವಿವೇಕ ಪಾಟೀಲ, ಬಾಬಾಸಾಬ ಗಣೆ, ಬಾಳಗೊಂಡ ಪಾಟೀಲ, ಸಂಜಯ ಚೌಗಲೆ ಸೇರಿದಂತೆ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಶ್ರಾವಕ ಶ್ರಾವಕಿಯರು ಇದ್ದರು.
ಅವಿನಾಶ ಪಾಟೀಲ, ಶಿಕ್ಷಕರಾದ ನಾಂದ್ರೆ, ಬಾಹುಬಲಿ ಬಣಜವಾಡ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.