ರಾಣೆಬೆನ್ನೂರ

22ನೇ ವಾರ್ಡ್‌ನ ಉಪಚುನಾವಣೆ: ಪೂರ್ವಭಾವಿ ಸಭೆ

22ನೇ ವಾರ್ಡ್‌ನ ಉಪಚುನಾವಣೆ: ಪೂರ್ವಭಾವಿ ಸಭೆ

ರಾಣಿಬೆನ್ನೂರು 12:  ಕಾಂಗ್ರೆಸ್ ಪಕ್ಷದ ಹಿರಿಯರು ಮತ್ತು 22ನೇಯ ವಾರ್ಡ್‌ನ ಪಕ್ಷದ ಮುಖಂಡರು ಸೂಚಿಸುವ ಅಭ್ಯರ್ಥಿಯ ಪರ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು ಎಂದು ಜಿಪಂ ಮಾಜಿ ಅಧ್ಯಕ್ಷ ಏಕನಾಥ ಬಾನುವಳ್ಳಿ ಕರೆ ನೀಡಿದರು.  

ರವಿವಾರ ನಗರದಲ್ಲಿ  ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಅವರ ಗೃಹ ಕಛೇರಿಯಲ್ಲಿ ನಗರಸಭೆಯ 22 ನೇ ವಾರ್ಡ್‌ನ ಉಪಚುನಾವಣೆ ನಿಮಿತ್ತ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ 136 ಶಾಸಕರ ಅಭೂತಪೂರ್ವ ಜಯದಿಂದ ಸರ್ಕಾರದ ಚುಕ್ಕಾಣಿ ಹಿಡಿದಿದ್ದೇವೆ. ಈಗ ಬಂದಿರುವ ನಗರದ 22 ನೇ ವಾರ್ಡ್‌ನ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರುಖೊಗ್ಗೂಡಿ ಶ್ರಮಿಸಬೇಕಿದೆ ಎಂದರು.  

ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ, ಶಾಸಕ ಪ್ರಕಾಶ್ ಕೋಳಿವಾಡ ಮಾತನಾಡಿದರು.    ತಾಲೂಕಾ ಕಾಂಗ್ರೆಸ್ ಅಧ್ಯಕ್ಷ ಮಂಜನಗೌಡ ಪಾಟೀಲ, ಶಹರ ಘಟಕದ ಅಧ್ಯಕ್ಷ ಶೇರುಖಾನ್ ಕಾಬೂಲಿ,  ನಗರಸಭಾ ಸದಸ್ಯ ಪುಟ್ಟಪ್ಪ ಮರಿಯಮ್ಮನವರ, ಗಂಗಾಧರ ಬಣಕಾರ, ರಮೇಶ ಬಿಸಲಳ್ಳಿ, ಸಣ್ಣತಮ್ಮಪ್ಪ ಬಾರ್ಕಿ, ಮರದ ಬಸನಗೌಡ, ನಗರಸಭಾ ಹಾಲಿ, ಮಾಜಿ ಸದಸ್ಯರು, 22 ನೇ ವಾರ್ಡ್‌ನ ಪಕ್ಷದ ಹಿರಿಯರು ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ