22ನೇ ಚಾರ್ತುಮಾಸ್ಯದ ಮಹೋತ್ಸವದ ಶೋಭಾಯಾತ್ರೆ
ರಾಣಿಬೆನ್ನೂರ 31 : ನಗರದ ಕೋಟೆ ಭಾಗದಲ್ಲಿ ಶ್ರೀವಿದ್ಯಾಧೀಶತೀರ್ಥರ ಹಾಗೂ ಶ್ರೀಸತ್ಯಾಭಿಜ್ಞತೀರ್ಥರ ಮೂಲ ವೃಂದಾವನ ಸನ್ನಿಧಾನದಲ್ಲಿ ಕೂಡ್ಲಿ ಆರ್ಯಅಕ್ಷೊಭ್ಯ ಮಠಾಧೀಶ ಶ್ರೀ ರಘುವಿಜಯತೀರ್ಥರ 22ನೇ ಚಾರ್ತುಮಾಸ್ಯದ ಮಹೋತ್ಸವದ ಅಂಗವಾಗಿ ನಡೆದ ಶೋಭಾಯಾತ್ರೆ ಮಂಗಳವಾರ ಬಹು ವಿಜೃಂಭಣೆಯಿಂದ ನಡೆಯಿತು.
ನಗರದ ಅಶೋಕ ಸರ್ಕಲ್ನಿಂದ ಎಂ.ಜಿ.ರಸ್ತೆ ಮೂಲಕ ಕೋಟೆಯವರೆಗೂ ಶೋಭಾಯಾತ್ರೆ ನಡೆದ ನಂತರ ಶ್ರೀಗಳಿಂದ ಪಾಠ, ಪ್ರವಚನ ಪಾದಪೂಜೆ, ವೈಕುಂಠ ಸೀತಾರಾಮಚಂದ್ರರ ಪೂಜೆ, ಭಜನೆ, ಪಚಿಡಿತರಿಂದ ಉಪನ್ಯಾಸ, ಭಗವದ್ಗೀತೆ ಕುರಿತು ಪ್ರವಚನ ಹಾಗೂ ಆರ್ಶೀವಚನ ನಡೆಯಿತು.
ಶೋಭಾಯಾತ್ರೆಯಲ್ಲಿ ಜಯತೀರ್ಥ ಪಾಂಡುರಂಗಿ, ಗುರುರಾಜ ಶಿರಹಟ್ಟಿ, ಗುರುರಾಜ ನಾಡಿಗೇರ, ವಾದಿರಾಜ ಉಡಪಿ ಮತ್ತು ಮಹಿಳೆಯು ಸೇರಿದಂತೆ ಮತ್ತಿತರರು ಇದ್ದರು.