ಯರಗಟ್ಟಿ

ಮನೆ ಕುಸಿದು 2 ಸಾವು : 10 ಲಕ್ಷ ರೂ. ಪರಿಹಾರ

ಮನೆ ಕುಸಿದು 2 ಸಾವು : 10 ಲಕ್ಷ ರೂ. ಪರಿಹಾರ

ಲೋಕದರ್ಶನ ವರದಿ 


ಯರಗಟ್ಟಿ 05: ಧಾರಾಕಾರ ಮಳೆಗೆ ತಾಲೂಕಿನ ಮಾಡಮಗೇರಿ ಗ್ರಾಮದಲ್ಲಿ ಮನೆ ಕುಸಿದು ಮೃತಪಟ್ಟಿದ್ದ ಕುಟುಂಬಕ್ಕೆ ತಾಲೂಕು ಆಡಳಿತ ವತಿಯಿಂದ ತಹಸೀಲ್ದಾರ ಮಹಾಂತೇಶ ಮಠದ ಹತ್ತು ಲಕ್ಷ ಪರಿಹಾರ ವಿತರಿಸಿದರು.  


ಕಳೆದ ಶನಿವಾರ ಉಂಟಾದ ಭೀಕರ ಮಳೆಗೆ ಯರಗಟ್ಟಿ ತಾಲೂಕಿನ ಮಾಗಮಗೇರಿ ಗ್ರಾಮದ ಮಹಾದೇವ ಬಾಗಿಲದ ಎಂಬುವವರ ಮನೆ ಕುಸಿದು, ಮಗ ಪ್ರಜ್ವಲ್ ಮಹಾದೇವ ಬಾಗಿಲದ(5), ಪತ್ನಿ ಯಲ್ಲವ್ವ ಮಹಾದೇವ ಬಾಗಿಲದ(40) ಸ್ಥಳದಲ್ಲೇ ಮೃತಪಟ್ಟರು. ಇನ್ನೂ ಇದೇ ಕುಟುಂಬದ ಉದ್ದವ ಹಾಗೂ ರೂಪಾ ಎಂಬುವವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.  


ಘಟನೆಗೆ ತ್ವರಿತವಾಗಿ ಸ್ಪಂದಿಸಿದ ಯರಗಟ್ಟಿ ತಾಲೂಕಾಡಳಿತ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿತ್ತು. ಜೊತೆಗೆ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನಿಡಿದ್ದ ಫಲವಾಗಿ ಇಬ್ಬರು ಬದುಕುಳಿದಿದ್ದರು. ಸೋಮವಾರ ಮೃತ ಕುಟುಂಬದ ಸಂಬಂಧಿಕರಿಗೆ ತಾಲೂಕು ಆಡಳಿತದ ವತಿಯಿಂದ ಯರಗಟ್ಟಿ ತಹಸೀಲ್ದಾರ ಮಹಾಂತೇಶ ಮಠದ ಹತ್ತು ಲಕ್ಷರು ಪರಿಹಾರ ನೀಡಿದ್ದಾರೆ. 


ಈ ಸಂದರ್ಭದಲ್ಲಿ ಯಲ್ಲಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಕಲೋಪ್ಪ ಶಿದ್ದಣ್ಣವರ, ಗ್ರಾಮಲೆಕ್ಕಾಧಿಕಾರಿ ಶಿವು ಮಠಪತಿ, ಕಂದಾಯ ನೀರೀಕ್ಷಕ ವೈ. ಎಫ್‌. ಮುರ್ತೇನ್ನವರ, ಮಹೇಶ ಖಂಡ್ರಿ, ಅಣ್ಣಪ್ಪ ಹಾಲಗಿ, ಫಕ್ಕೀರ​‍್ಪ ಖಂಡ್ರಿ, ಮಹಾದೇವ ಬಾಗಿಲದ ಉಪಸ್ಥಿತರಿದ್ದರು. 


ಸುದ್ದಿ ಓದಿ